ಸಾರಾಂಶ
ಕಾಂಗ್ರೆಸ್ ಹುರಿಯಳಾಗಿ ಪುನರಾಯ್ಕೆ ಬಯಸಿ ನಿಂತಿರುವ ಡಾ. ಚಂದ್ರಶೇಖರ ಪಾಟೀಲ್ ಇವರಿಗೆ ಮತ ಹಾಕುವಂತೆ ಕೋರಿ ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲರು ಇಂದು ಬಿರುಸಿನ ಪ್ರಚಾರ ನೆಸಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಇದೇ ಜೂ.3ರಂದು ಮತದಾನ ನಡೆಯಲಿರುವ ಈಶಾನ್ಯ ಪದವಿಧರ ಮತಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹುರಿಯಳಾಗಿ ಪುನರಾಯ್ಕೆ ಬಯಸಿ ನಿಂತಿರುವ ಡಾ. ಚಂದ್ರಶೇಖರ ಪಾಟೀಲ್ ಇವರಿಗೆ ಮತ ಹಾಕುವಂತೆ ಕೋರಿ ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲರು ಬಿರುಸಿನ ಪ್ರಚಾರ ನೆಸಿದರು.ಇಲ್ಲಿನ ಹುಸೇನ್ ಗಾರ್ಡನ್‌ನಲ್ಲಿರುವ ಹುಸೇನ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಲ್ಲಂಪ್ರಭು ಪಾಟೀಲರು ಪದವೀಧರರ ಅನೇಕ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷ ಸ್ಪಂದಿಸುತ್ತಲೇ ಬಂದಿದೆ. ಮುಂದಿನ ದಿನಗಳಲ್ಲಿಯೂ ಹೆಚ್ಚಿಗೆ ಸ್ಪಂದನೆ ಮಾಡಲಿದೆ. ರಾಜ್ಯಾದ್ಯಂತ ಇರುವ ಖಾಲಿ ಹುದ್ದೆ ಭರ್ತಿಗೂ ಮುಂದಾಗಿದೆ. ಕಲ್ಯಾಣ ನಾಡಲ್ಲಿ ಈ ಕ್ರಮಕ್ಕೆ ವೇಗ ನೀಡಲಾಗಿದೆ. ಇವೆಲ್ಲ ಕಾರಣಗಳಿಂದಾಗಿ ಪದವೀಧರರು ಎಲ್ಲರು ಡಾ. ಚಂದ್ರಶೇಖರ ಪಾಟೀಲರಿಗೆ ಮತ ಹಾಕಿ ಇನ್ನೊಮ್ಮೆ ಪದವೀಧರರ ಸೇವೆಗೆ ಅವಕಾಶ ಕಲ್ಪಿಸುವಂತೆ ಕೋರಿದರು.
ಹುಸೇನ್ ಸ್ಕೂಲ್ ಚೇರ್ಮನ್ ಇಲಿಯಾಸ್ ಭಾಗವಾನ್, ಮಾಜಿ ಮೇಯರ್ ಶರಣಕುಮಾರ್ ಮೋದಿ, ಶಾಲೆಯ ಪ್ರಾಚಾರ್ಯರಾದ ಖಾನ್ ಸಾಬ್, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸದರಿ ಸಭೆಯಲ್ಲಿ ಪಾಲ್ಗೊಂಡಿದ್ದರು.;Resize=(128,128))
;Resize=(128,128))