ಸಾರಾಂಶ
ಕೂಸಿನಮನೆಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಈಗಾಗಲೇ ಏಳು ದಿನಗಳ ಕಾಲ ಎಲ್ಲರೂ ತರಬೇತಿ ಪಡೆದಿದ್ದು, ಮುಂದೆ ನಿಮ್ಮ ಪ್ರತಿ ಗ್ರಾಪಂಗಳಲ್ಲಿ ಕೂಸಿನಮನೆ ಬೆಳೆಸಿ ಮಕ್ಕಳ ಉತ್ತಮ ಬೆಳವಣಿಗೆಗೆ ಸಹಕಾರವಾಗಬೇಕು.
ಕುಷ್ಟಗಿ: ಕೂಸಿನ ಮನೆಯ ಕೇರ್ ಟೇಕರ್ಸ್‌ಗಳು ಏಳು ದಿನಗಳ ಕಾಲ ತರಬೇತಿ ಪಡೆದುಕೊಂಡಿದ್ದು, ಕೂಸಿನಮನೆಯ ಯೋಜನೆಯ ಉತ್ತಮ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ತಾಪಂ ಇಒ ನಿಂಗಪ್ಪ ಮಸಳಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮೂರನೇ ಹಂತದ ಕೂಸಿನಮನೆ ತರಬೇತಿಯೂ ಏಳು ದಿನಗಳ ತರಬೇತಿ ಯಶಸ್ವಿಯಾಗಿ ಸಮಾರೋಪ ಸಮಾರಂಭ ಜರುಗಿತು.ಈ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೂಸಿನಮನೆಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ.
ಈಗಾಗಲೇ ಏಳು ದಿನಗಳ ಕಾಲ ಎಲ್ಲರೂ ತರಬೇತಿ ಪಡೆದಿದ್ದು, ಮುಂದೆ ನಿಮ್ಮ ಪ್ರತಿ ಗ್ರಾಪಂಗಳಲ್ಲಿ ಕೂಸಿನಮನೆ ಬೆಳೆಸಿ ಮಕ್ಕಳ ಉತ್ತಮ ಬೆಳವಣಿಗೆಗೆ ಸಹಕಾರವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಅನ್ನಪೂರ್ಣ ಪಾಟೀಲ, ಮೊಬೈಲ್ ಕ್ರಶ್ ಸಂಸ್ಥೆಯ ತರಬೇತುದಾರರಾದ ವಿಶ್ವನಾಥ, ರಾಜಶೇಖರ, ಭವಾನಿ, ರಜನಿ, ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ, 36 ಗ್ರಾಪಂಗಳ ಕೇರ್ ಟೆಕರ್ಸ್ ಇದ್ದರು.