ಯಾವುದೇ ಕೆಲಸ ಮಾಡಲು ಕೌಶಲ್ಯ ಇರಬೇಕು

| Published : Jan 11 2024, 01:31 AM IST

ಸಾರಾಂಶ

ಯಾವುದೇ ಕೆಲಸ ಮಾಡಲು ಕೌಶಲ್ಯ, ಜ್ಞಾನ, ಅನುಭವ, ಪರಿಣಿತ ಇರಬೇಕು. ಉನ್ನತ ಗುಣಮಟ್ಟದ ಜೀವನ ನಡೆಸಬೇಕು

ವಿಜಯಪುರ: ಅರ್ಥಶಾಸ್ತ್ರದಲ್ಲಿನ ಉದ್ಯೋಗಾವಕಾಶಗಳು ನಿಮ್ಮ ಆಲೋಚನೆಗೂ ಮೀರಿದ್ದು ಎಂದು ದಾವಣಗೆರೆ ವಿವಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಹುಚ್ಚೇಗೌಡ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಅರ್ಥಶಾಸ್ತ್ರದಲ್ಲಿ ವೃತ್ತಿಪರ ಅವಕಾಶಗಳು ಎಂಬ ವಿಷಯದ ಕುರಿತು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗಾಗಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಕೆಲಸ ಮಾಡಲು ಕೌಶಲ್ಯ, ಜ್ಞಾನ, ಅನುಭವ, ಪರಿಣಿತ ಇರಬೇಕು. ಉನ್ನತ ಗುಣಮಟ್ಟದ ಜೀವನ ನಡೆಸಬೇಕು ಎಂದರು. ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ.ಆರ್.ವಿ. ಗಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ.ಡಿ.ಎಂ.ಮದರಿ, ಡಾ.ಸುರೇಶ.ಕೆ.ಪಿ, ಹೀನಾ ದಾಶ್ಯಾಳ, ಡಾ.ಕೀರ್ತಿ ಹೊನವಾಡ ಇದ್ದರು.