ಸದ್ಗುರು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಿ: ಶಾಸ್ತ್ರಿ

| Published : Feb 28 2024, 02:31 AM IST

ಸದ್ಗುರು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಿ: ಶಾಸ್ತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ತಿಯೊಬ್ಬರಿಗೂ ಅರಿವು ಮತ್ತು ಜ್ಞಾನ ಅತ್ಯಗತ್ಯವಾಗಿದೆ. ಎಲ್ಲರಲ್ಲೂ ಅಂತರ್ಗತವಾಗಿರುವ ಕರ್ಮೇಂದ್ರಿಯ ಮತ್ತು ಜ್ಞಾನೇಂದ್ರಿಯಗಳಿಗೆ ಚೇತನ ನೀಡುವ ಕೆಲಸವನ್ನು ವಿದ್ಯಾಕೇಂದ್ರಗಳು ನಿರ್ವಹಿಸುತ್ತವೆ.

ಯಲ್ಲಾಪುರ:

ಪ್ರತಿಯೊಬ್ಬರಿಗೂ ಅರಿವು ಮತ್ತು ಜ್ಞಾನ ಅತ್ಯಗತ್ಯವಾಗಿದೆ. ಎಲ್ಲರಲ್ಲೂ ಅಂತರ್ಗತವಾಗಿರುವ ಕರ್ಮೇಂದ್ರಿಯ ಮತ್ತು ಜ್ಞಾನೇಂದ್ರಿಯಗಳಿಗೆ ಚೇತನ ನೀಡುವ ಕೆಲಸವನ್ನು ವಿದ್ಯಾಕೇಂದ್ರಗಳು ನಿರ್ವಹಿಸುತ್ತವೆ ಎಂದು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪಿ.ಎನ್. ಶಾಸ್ತ್ರಿ ಹೇಳಿದರು.ತಾಲೂಕಿನ ಹಾಸಣಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲೆಯ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.ಶೈಕ್ಷಣಿಕ ಕೇಂದ್ರಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುವವರಿಗೆ ಮತ್ತು ಕಲಿಯುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರವೊಂದೇ ಅಲ್ಲದೇ ಸಮಾಜವೂ ಕೂಡಾ ಸಹಕಾರ ನೀಡುವ ಅಗತ್ಯವಿದೆ ಎಂದ ಅವರು, ಸದ್ಗುರುವನ್ನು ಸದಾ ಗೌರವಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಖ್ಯಾತ ಹಿಂದೂಸ್ತಾನಿ ಗಾಯಕ, ತಾನ್‌ಸೇನ್ ಪ್ರಶಸ್ತಿ ಪುರಸ್ಕೃತ ಪಂ. ಗಣಪತಿ ಭಟ್ಟ ಹಾಸಣಗಿ, ಚಿಕ್ಕಂದಿನಿಂದ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಮತ್ತು ಆಸಕ್ತಿ ಗುರುತಿಸಿ, ಬೆಳೆಸುವ ಜವಾಬ್ದಾರಿ ಶಿಕ್ಷಕರದಾಗಿದ್ದು, ಶಾಲೆಗಳಲ್ಲಿ ಗುರು-ಶಿಷ್ಯರ ಸಂಬಂಧ ಅನ್ಯೋನ್ಯವಾಗಿರಬೇಕು. ಇಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಾಸಣಗಿ ಶಾಲೆಯು ನಾನು ಕಲಿತ ಶಾಲೆ.ಇದು ನನಗೆ ನೂತನ ಲೋಕ ತೋರಿದ ಸ್ಥಳವಾಗಿದ್ದು, ಅಂದಿನ ಶಿಕ್ಷಕರು ವಿದ್ಯಾರ್ಥಿಗಳ ಕುರಿತಾಗಿ ಅನುಭವ ಹಂಚಿಕೊಂಡರು.ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೇಮನೆ ಮಾತನಾಡಿ, ಹಳ್ಳಿಯ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಲು ಅಲ್ಲಿನ ಗ್ರಾಮಸ್ಥರು ಪಟ್ಟಣಕ್ಕೆ ವಲಸೆಯೇ ಕಾರಣ. ಸರ್ಕಾರಿ ಶಾಲೆಗಳಲ್ಲಿ ಕೇವಲ ಮೂಲಭೂತ ವ್ಯವಸ್ಥೆಯೊಂದೇ ಸಾಲದು. ವಿವಿಧ ವಿಷಯದ ಪರಿಣಿತಿ ಹೊಂದಿದ ಉತ್ತಮ, ಅನುಭವಿ ಶಿಕ್ಷಕರ ಕೊರತೆಯಿದೆ. ಹಾಗಾಗಿಯೇ ಶೇ. ೪೦ರಷ್ಟಿರುವ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಪಾಲಕರು ಕಳಿಸುತ್ತಾರೆ. ಇದಕ್ಕೆ ಸರ್ಕಾರ, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದರು.ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್ಟ ಧುಂಡಿ ಮಾತನಾಡಿ, ಪ್ರತಿಯೊಬ್ಬರಿಗೂ ಬಾಲ್ಯದ ದಿನಗಳೆಂದರೆ ಅತ್ಯಂತ ಖುಷಿ. ಇಂತಹ ಸಂಗತಿಗಳೊಂದಿಗೆ ಇಂದಿನ ಕಾರ್ಯಕ್ರಮ ಸಂವಹನದ ಅವಕಾಶ ಒದಗಿಸಿದೆ. ನೂರು ವರ್ಷಗಳ ಹಿಂದೆಯೇ ನಮ್ಮ ಹಿರಿಯರು ಶಿಕ್ಷಣದ ಕುರಿತಾಗಿ ಹೊಂದಿದ್ದ ಪ್ರೇಮದ ಸಾಕ್ಷಿಯಾಗಿದೆ ಎಂದರುಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ, ಬಿಇಒ ಎನ್.ಆರ್. ಹೆಗಡೆ ಮಾತನಾಡಿದರು. ವಿಶ್ರಾಂತ ಪ್ರಾಧ್ಯಾಪಕ ಟಿ.ಜಿ. ಭಟ್ಟ ಹಾಸಣಗಿ ಶತಮಾನೋತ್ಸವದ ನೆನಪಿಗಾಗಿ ಹೊರತಂದ ತೇಜೋನಿಧಿಬಿಡುಗಡೆಗೊಳಿಸಿ, ಮಾತನಾಡಿದರು. ಪತ್ರಕರ್ತ ದಿ. ದಿನಕರ ದೇಸಾಯಿ ಅವರಿಗೆ ಅರ್ಪಣೆ ಮಾಡಿದ ತೇಜೋನಿಧಿಯ ಸಂಪಾದಕ ವಸಂತ ಭಟ್ಟ ಪುಸ್ತಕದ ಕುರಿತು ಮಾತನಾಡಿದರು. ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲ ಭಟ್ಟ, ಪಂಚಾಯತ್‌ರಾಜ್ ವಿಕೇಂದ್ರೀಕರಣ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಡಿಡಿಪಿಐ ಬಸವರಾಜ ಪಿ. ಮಾತನಾಡಿದರು.

ಶತಮಾನೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪಂ. ಗಣಪತಿ ಭಟ್ಟ ಹಾಸಣಗಿ, ಡಾ. ಪಿ.ಎನ್. ಶಾಸ್ತ್ರಿ, ಪರಶುರಾಮ ಗಿರಿಗೋಲಿ ಸಿದ್ದಿ, ವಿಶ್ವನಾಥ ಹೆಗಡೆ ಬೆದೆಹಕ್ಲು, ಶಾಂತಾರಾಮ ಭಟ್ಟ ಹಾಸಣಗಿ, ತಿಮ್ಮಪ್ಪ ಭಟ್ಟ ಧುಂಡಿ, ಸ್ಥಳದಾನಿ ಗಂಗಾಧರ ಭಟ್ಟ, ಪಿ.ಆರ್. ಭಟ್ಟ, ಪ್ರೊ. ಯಜ್ಞೇಶ್ವರ ಶಾಸ್ತ್ರಿ ಮುಂತಾದ ೧೦ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಗೌರವ ಸಮರ್ಪಿಸಲಾಯಿತು. ಗ್ರಾಪಂ ಅಧ್ಯಕ್ಷೆ ವಿನೋದಾ ಬಿಲ್ಲವ, ಉಪಾಧ್ಯಕ್ಷ ಪುರಂದರ ನಾಯ್ಕ, ಸದಸ್ಯರಾದ ಹೇಮಂತ ಭಟ್ಟ, ಅಮೃತಾ ಪೂಜಾರಿ, ಸಿಆರ್‌ಪಿ ಕೆ.ಆರ್. ನಾಯ್ಕ, ತಾಲೂಕು ಶಿಕ್ಷಣ ಸಂಯೋಜಕ ಪ್ರಶಾಂತ ಜಿ.ಎನ್., ಶಿರಸಿ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಜಿ.ಆರ್. ಹೆಗಡೆ, ಅಕ್ಷರ ದಾಸೋಹದ ಜಿಲ್ಲಾ ಸಂಯೋಜಕ ಎಂ.ಕೆ. ಮೊಗೇರ, ಶತಮಾನೋತ್ಸವದ ಆರ್ಥಿಕ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್ಟ ಹಾಸಣಗಿ ವೇದಿಕೆಯಲ್ಲಿದ್ದರು. ಸಂಚಾಲನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಸ್ವಾಗತಿಸಿದರು. ವಸಂತ ಶಾಸ್ತ್ರಿ ನಿರ್ವಹಿಸಿದರು. ಮುಖ್ಯಾಧ್ಯಾಪಕಿ ಗಿರಿಜಾ ಭಟ್ಟ ವರದಿ ವಾಚನ ಮಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಉದಯ ಪೂಜಾರಿ ವಂದಿಸಿದರು.