ರೈತ, ಶೋಷಿತರ ಪರ ದನಿ ಬಿ.ಎಸ್‌.ವೈ: ಮಹೇಶ್ ಒಡೆಯರ್

| Published : Feb 28 2024, 02:31 AM IST

ಸಾರಾಂಶ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜನ್ಮದಿನದ ಅಂಗವಾಗಿ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕೆ.ಆರ್. ಮಹೇಶ್ ವಡೆಯರ್ ನೇತೃತ್ವದಲ್ಲಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಕಡೂರು ತಮ್ಮ ದೀರ್ಘಕಾಲದ ಸಕ್ರಿಯ ರಾಜಕಾರಣದ ಮೂಲಕ ರಾಜ್ಯದ ರೈತರು ಮತ್ತು ಶೋಷಿತ ವರ್ಗಗಳಿಗೆ ನ್ಯಾಯ ದೊರಕಿಸುವಲ್ಲಿ ಹೋರಾಟ ನಡೆಸಿದ ಮಾಜಿ ಮುಖ್ಯಮಂತ್ರಿ ಗಳಾದ ಬಿ.ಎಸ್‌.ಯಡಿಯೂರಪ್ಪನವರು ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ನೂತನ ವಕ್ತಾರ ಕೆ.ಆರ್.ಮಹೇಶ್ ವಡೆಯರ್ ಹೇಳಿದರು.

ಅವರು ಕಡೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ಕಡೂರು ಘಟಕದಿಂದ ರೋಗಿಗಳಿಗೆ ಹಣ್ಣು ವಿತರಿಸಿ ಮಾತನಾಡಿ, ನಾಡು ಕಂಡ ಅತ್ಯಂತ ಯಡಿಯೂರಪ್ಪನವರ ಜನ್ಮದಿನವನ್ನು ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ತಮ್ಮ ದೀರ್ಘಾವಧಿಯ ರಾಜಕಾರಣದಿಂದ ರಾಜ್ಯದ ರೈತರು, ಶೋಷಿತರು, ಬಡವರ ಪರವಾಗಿ ನಡೆಸಿದ ಹೋರಾಟದ ಮೂಲಕ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದರು.ಕಡೂರಿಗೂ ಮತ್ತು ಯಡಿಯೂರಪ್ಪನವರಿಗೂ ಅವಿನಾಭಾವ ಸಂಬಂಧ ಇದ್ದು, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದ ಎಲ್ಲ ಸಂದರ್ಭಗಳಲ್ಲೂ ಬರಗಾಲ ಪೀಡಿತ ಪ್ರದೇಶವಾಗಿರುವ ಕಡೂರು ಕ್ಷೇತ್ರದ ಅಭಿವೃದ್ಧಿಗೆ ವಿಶೇಷವಾದ ಅನುದಾನವನ್ನು ಒದಗಿಸಿ ಕೊಟ್ಟಿದ್ದಾರೆ. ಅದರಲ್ಲೂ ನೀರಾವರಿ ಯೋಜನೆಗಳ ಜಾರಿಗೆ ಅಗತ್ಯ ಅನುದಾನ ನೀಡಿ ನೀರಾವರಿಗೆ ಆದ್ಯತೆ ನೀಡಿದರು. ಅಲ್ಲದೆ ಕಳೆದ ಅವಧಿಯ ಬಿಜೆಪಿ ಸರ್ಕಾರದಲ್ಲಿ ಸಮ್ಮ ನಾಯಕರು ಹಾಗೂ ಕ್ಷೇತ್ರದ ಶಾಸಕರಾಗಿದ್ದ ಬೆಳ್ಳಿ ಪ್ರಕಾಶ್ ರವರಿಗೆ ತಮಗಿರುವ ಅಧಿಕಾರದ ಮೂಲಕ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆ ಮಾಡಿದರು ಎಂದರಲ್ಲದೆ,

ಅವರ ಮುಂದಿನ ದಿನಗಳು ಸ್ಫೂರ್ತಿದಾಯಕವಾಗಿ ಇರಲಿ ಈ ರಾಜ್ಯಕ್ಕೆ ಇನ್ನಷ್ಟು ಸೇವೆ ಸಲ್ಲಿಸುವ ಅವಕಾಶವನ್ನು ಅವರಿಗೆ ದೇವರು ಕಲ್ಪಿಸಲಿ ಎಂದು ಹಾರೈಸುತ್ತೇವೆ ಎಂದರು.ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಉಮೇಶ್, ಬಿಜೆಪಿ ಮುಖಂಡರುಗಳಾದ ಶೂದ್ರ ಶ್ರೀನಿವಾಸ್, ಹುಲ್ಲೇಹಳ್ಳಿ ಲಕ್ಷ್ಮಣ್, ಪ್ರಶಾಂತ್, ಸಗುನಪ್ಪ, ಅಂಬೇಡ್ಕರ್ ನಗರ ಸುರೇಶ್, ರುದ್ರಪ್ಪ, ಅಜೇಯ ವಡೆಯರ್, ಸೋಮಶೇಖರ್, ಸಂಜಯ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.