9 ಜನರ ಆಯ್ಕೆಯೊಂದಿಗೆ ಮುತ್ತಣ್ಣ ತಂಡಕ್ಕೆ ಭರ್ಜರಿ ಜಯ

| Published : Aug 04 2025, 11:45 PM IST

9 ಜನರ ಆಯ್ಕೆಯೊಂದಿಗೆ ಮುತ್ತಣ್ಣ ತಂಡಕ್ಕೆ ಭರ್ಜರಿ ಜಯ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಡಿ.ಕಲ್ಕೆರೆಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಮೃತ್ಯುಂಜಯ ತಂಡ ಭರ್ಜರಿ ಜಯಗಳಿಸಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಡಿ.ಕಲ್ಕೆರೆಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಮೃತ್ಯುಂಜಯ ತಂಡ ಭರ್ಜರಿ ಜಯಗಳಿಸಿದೆ.

ಕಳೆದ 9 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಹಾಲು ಸಹಕಾರ ಸಂಘವನ್ನು ಈಗ ಚಾಲನೆಗೆ ತರಲಾಗಿದೆ. ಒಟ್ಟು 240 ಮತದಾರರು ಇದ್ದಾರೆ. ಈ ಪೈಕಿ ಸುಮಾರು 227 ಮಂದಿ ಮತ ಚಲಾವಣೆ ಮಾಡಿದರೆಂದು ತಿಳಿದುಬಂದಿದೆ. ಒಟ್ಟು 13 ಸದಸ್ಯರ ಅಗತ್ಯವಿರುವ ಈ ಸಂಘದ ಚುನಾವಣೆಯಲ್ಲಿ 27 ಮಂದಿ ಸ್ಪರ್ಧಿಸಿದ್ದರು. 13 ಸದಸ್ಯರ ಪೈಕಿ ಇವರ ಪೈಕಿ ಮುತ್ತಣ್ಣ ತಂಡದಿಂದ ಸಾಮಾನ್ಯ ಕೇತ್ರದಿಂದ ಕೆ.ವಿ.ಮೃತ್ಯುಂಜಯ, ಕೆ.ಜೆ.ರವಿ, ಕೆ.ಜೆ.ಕಣ್ಣನ್, ಶ್ರೀಕಂಠೇಗೌಡ, ಪರಮೇಶ್ವರಯ್ಯ, ಶೇಷಗಿರಿ, ಬಿಸಿಎಂ ಎ ಯಿಂದ ನಯಾಜ್ ಪಾಷಾ, ಮಹಿಳಾ ಕ್ಷೇತ್ರದಿಂದ ಪುಟ್ಟಮ್ಮ, ಪದ್ಮಮ್ಮ, ಎಸ್ ಸಿ ಮೀಸಲಿನಿಂದ ಕೆ.ವಿ.ರವಿಕುಮಾರ್ ಗೆಲುವು ಸಾಧಿಸಿದ್ದರೆ. ಅವರ ಪ್ರತಿ ತಂಡದಿಂದ ಸಾಮಾನ್ಯ ಕ್ಷೇತ್ರದಿಂದ ಚಿಕ್ಕರಂಗಯ್ಯ, ಬಿಸಿಎಂ ಎ ಮೀಸಲು ಕ್ಷೇತ್ರದಿಂದ ನವೀನ್ ಕುಮಾರ್, ಪರಿಶಿಷ್ಠ ಪಂಗಡದಿಂದ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾಗಿ ಚಿಕ್ಕನಾಯಕನಹಳ್ಳಿಯ ಸಿಡಿಓ ಶ್ರೀನಿವಾಸ್ ಕರ್ತವ್ಯ ನಿರ್ವಹಿಸಿದರು. ನೂತನ ನಿರ್ದೇಶಕರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಕಿಹಳ್ಳಿ ಪ್ರಕಾಶ್ ಸೇರಿದಂತೆ ಹಲವರು ಅಭಿನಂದಿಸಿದರು.ಡಿ.ಕಲ್ಕೆರೆ, ಆಯರಹಳ್ಳಿ, ಆಯರಹಳ್ಳಿ ಗೊಲ್ಲರಹಟ್ಟಿ ಮತ್ತು ವಡೇರಹಳ್ಳಿಯ ಗ್ರಾಮಸ್ಥರಿಗೆ ಮತ್ತು ಮತದಾರರಿಗೆ ವಿಜೇತರಾದ ಮೃತ್ಯುಂಜಯ (ಮುತ್ತಣ್ಣ) ಮತ್ತು ನಯಾಜ್ ಪಾಷಾ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ರೈತಾಪಿಗಳಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಯಾವುದೇ ಭೇಧಭಾವವಿಲ್ಲದೇ ದೊರಕಿಸಿಕೊಡುವಲ್ಲಿ ತಾವೆಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಮೃತ್ಯುಂಜಯ (ಮುತ್ತಣ್ಣ) ಮತ್ತು ನಯಾಜ್ ಪಾಷಾ ಹೇಳಿದ್ದಾರೆ. ನೂತನ ನಿರ್ದೇಶಕರ ಆಯ್ಕೆ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.