ಸಾರಾಂಶ
ಖಾಸಗಿ ಕಂಪನಿ ಹೆಸರಿನಲ್ಲಿ ಘನತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಘಟಕ ಸ್ಥಾಪಿಸಲೆಂದು ಕರೂರು ಕೈಗಾರಿಕಾ ಪ್ರದೇಶದಲ್ಲಿ ಜಿಲ್ಲಾ ಸಚಿವರು ನಿಯಮಬಾಹಿರವಾಗಿ ₹15 ಕೋಟಿ ಮೌಲ್ಯದ 1.5 ಎಕರೆ ಜಾಗ ಮಂಜೂರು ಮಾಡಿಸಿಕೊಂಡಿದ್ದಾರೆ. 1.5 ಎಕರೆ ಜಾಗ ಮಂಜೂರು ರದ್ದುಪಡಿಸದಿದ್ದರೆ ಆ.11ರಿಂದ ಆರಂಭವಾಗುವ ವಿಧಾನಸಭೆ ಅಧಿವೇಶದಲ್ಲಿ ವಿಷಯ ಮಂಡಿಸಿ, ಬಿಜೆಪಿ ಬೀದಿಗಿಳಿದು ಹೋರಾಡುವ ಜೊತೆಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಎಚ್ಚರಿಸಿದ್ದಾರೆ.
- ಖಾಸಗಿ ಕಂಪನಿಗೆ ಕಡಿಮೆ ಬೆಲೆ ಭೂಮಿ: ಯಶವಂತರಾವ್ ಕಿಡಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಖಾಸಗಿ ಕಂಪನಿ ಹೆಸರಿನಲ್ಲಿ ಘನತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಘಟಕ ಸ್ಥಾಪಿಸಲೆಂದು ಕರೂರು ಕೈಗಾರಿಕಾ ಪ್ರದೇಶದಲ್ಲಿ ಜಿಲ್ಲಾ ಸಚಿವರು ನಿಯಮಬಾಹಿರವಾಗಿ ₹15 ಕೋಟಿ ಮೌಲ್ಯದ 1.5 ಎಕರೆ ಜಾಗ ಮಂಜೂರು ಮಾಡಿಸಿಕೊಂಡಿದ್ದಾರೆ. 1.5 ಎಕರೆ ಜಾಗ ಮಂಜೂರು ರದ್ದುಪಡಿಸದಿದ್ದರೆ ಆ.11ರಿಂದ ಆರಂಭವಾಗುವ ವಿಧಾನಸಭೆ ಅಧಿವೇಶದಲ್ಲಿ ವಿಷಯ ಮಂಡಿಸಿ, ಬಿಜೆಪಿ ಬೀದಿಗಿಳಿದು ಹೋರಾಡುವ ಜೊತೆಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಎಚ್ಚರಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮಿ ಮಂಜೂರು ಮಾಡುವಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರಭಾವಕ್ಕೊಳಗಾಗಿದ್ದಾರೆ ಎಂದು ಟೀಕಿಸಿದರು.
ಕರೂರು ಕೈಗಾರಿಕಾ ಪ್ರದೇಶವನ್ನು 2005-06ರಲ್ಲಿ ಅಭಿವೃದ್ಧಿಪಡಿಸಿದ್ದು, ಒಟ್ಟು 102.76 ಎಕರೆ ಪ್ರದೇಶದಲ್ಲಿ ಒಟ್ಟು 217 ಘಟಕಕ್ಕೆ ನಿವೇಶನ ಹಂಚಿಕೆಯಾಗಿದೆ. ಕರೂರು ಕೈಗಾರಿಕಾ ಪ್ರದೇಶದ 102.76 ಎಕರೆ, ಲೋಕಿಕೆರೆ ರಸ್ತೆಯ ಕೈಗಾರಿಕಾ ಪ್ರದೇಶದ 94.50 ಎಕರೆ ಪ್ರದೇಶ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ. ಈ ಮಧ್ಯೆ ಕರೂರಿನ ನಿವೇಶನ ಸಂಖ್ಯೆ: 68-ಡಿ ರಲ್ಲಿನ 1.50 ಎಕರೆ ಜಮೀನನ್ನು ಘನತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆಗಾಗಿ ಕಾಯ್ದಿರಿಸಲಾಗಿತ್ತು. ಈ ಭೂಮಿಗೆ ಇಂದಿನ ಮಾರುಕಟ್ಟೆ ಬೆಲೆ ಸುಮಾರು ₹15 ಕೋಟಿ ಇದೆ. ಇದೇ ಜಾಗದಲ್ಲಿ ಪಾಲಿಕೆಯಿಂದ ಘನತ್ಯಾಜ್ಯ ಸಂಗ್ರಹಣೆ, ನಿರ್ವಹಣೆಗಾಗಿ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಈ ಜಮೀನಿನ ಮೇಲೆ ಕಣ್ಣು ಹಾಕಿರುವ ಸಚಿವ ಮಲ್ಲಿಕಾರ್ಜುನ ಬೇನಾಮಿ ಹೆಸರಿನ ಮೇಲೆ ಸ್ವಂತಕ್ಕೆ ಘನತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಘಟಕ ಸ್ಥಾಪಿಸಲು ಜಮೀನು ಹಂಚಿಕೆ ಮಾಡಿಸಿಕೊಂಡಿದ್ದಾರೆ. ಖಾಸಗಿ ಕಂಪನಿ ಮೆ।। ಎಚ್.ಪಿ.ಸಿ. ಎಕೋ ರಿಸೈಕ್ಲರ್ಸ್ ಹೆಸರಲ್ಲಿ ₹15 ಕೋಟಿ ಮೌಲ್ಯದ ಜಮೀನನ್ನು ಕೇವಲ ₹1.13 ಕೋಟಿಗೆ ಹಂಚಿಕೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.20 ವರ್ಷ ಸಂಸದರಿದ್ದ ಜಿ.ಎಂ. ಸಿದ್ದೇಶ್ವರ ಮಾಡಲಾಗದ್ದನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಒಂದೇ ದಿನದಲ್ಲಿ ಮಾಡಿಸಿದ್ದಾರೆ. ಸಿದ್ದೇಶ್ವರ ಯಾವುದೇ ಸರ್ಕಾರಿ ಆಸ್ತಿ ಬರೆಸಿಕೊಳ್ಳಲಿಲ್ಲ. ₹15 ಕೋಟಿ ಬೆಲೆ ಬಾಳುವ ಜಮೀನಿನಲ್ಲಿ ಘನತ್ಯಾಜ್ಯ ಘಟಕ ಮಾಡ್ತೀನಿ ಎನ್ನುವ ಕಾಂಗ್ರೆಸ್ ಸಚಿವರಿಗೆ ಏನನ್ನಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಅಣಬೇರು ಜೀವನಮೂರ್ತಿ, 6ನೇ ಮೈಲಿಕಲ್ಲು ವಿಜಯಕುಮಾರ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಶಂಕರ ಗೌಡ ಬಿರಾದಾರ್, ಟಿಂಕರ್ ಮಂಜಣ್ಣ, ಜಿ.ಕಿಶೋರಕುಮಾರ, ಗೋವಿಂದರಾಜ ಇತರರು ಇದ್ದರು.- - -
(ಟಾಪ್ ಕೋಟ್) ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಜಿಲ್ಲೆಗೆ ತಂದ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್‌ನ ವಿಸ್ತರಣೆಗೆ ದಾವಣಗೆರೆ ನಗರ ವ್ಯಾಪ್ತಿಯಲ್ಲಿ 2 ಎಕರೆ ಜಮೀನಿನ ಅಗತ್ಯವಿದೆ. ಕರೂರು ಕೈಗಾರಿಕಾ ಪ್ರದೇಶದ ಜಾಗವನ್ನೇ ಇದಕ್ಕಾಗಿ ಮಂಜೂರು ಮಾಡಬಹುದಿತ್ತಲ್ಲವೇ? ದಾವಣಗೆರೆಯನ್ನು ಸಾಫ್ಟ್‌ವೇರ್ ಹಬ್ ಮಾಡುತ್ತೇವೆ ಎನ್ನುವ ಸಂಸದರು ಇಚ್ಛಾಶಕ್ತಿ ಪ್ರದರ್ಶಿಸಬೇಕು.- ಯಶವಂತ ರಾವ್ ಜಾಧವ್, ಬಿಜೆಪಿ ಮುಖಂಡ
- - --4ಕೆಡಿವಿಜಿ3.ಜೆಪಿಜಿ:
ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.