ಬುರುಡೆ ಷಡ್ಯಂತ್ರಕ್ಕೆ ಉಜಿರೆ ಹೋಟೆಲ್‌ನಲ್ಲಿ ಪ್ಲ್ಯಾನ್‌?

| N/A | Published : Sep 08 2025, 09:37 AM IST

Dharmasthala Burude Gang
ಬುರುಡೆ ಷಡ್ಯಂತ್ರಕ್ಕೆ ಉಜಿರೆ ಹೋಟೆಲ್‌ನಲ್ಲಿ ಪ್ಲ್ಯಾನ್‌?
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಬುರುಡೆ ಗ್ಯಾಂಗ್‌ ಉಜಿರೆಯ ಖಾಸಗಿ ಹೋಟೆಲ್‌ವೊಂದರಲ್ಲಿ ಸಭೆ ನಡೆಸಿ, ಮುಂದಿನ ಕಾರ್ಯಾಚರಣೆ ಬಗ್ಗೆ ಯೋಜನೆ ರೂಪಿಸಿತ್ತು ಎಂಬುದು ತನಿಖೆ ವೇಳೆ ಎಸ್‌ಐಟಿಗೆ ತಿಳಿದು ಬಂದಿದೆ.

  ಮಂಗಳೂರು :  ಧರ್ಮಸ್ಥಳ ಬುರುಡೆ ಗ್ಯಾಂಗ್‌ ಉಜಿರೆಯ ಖಾಸಗಿ ಹೋಟೆಲ್‌ವೊಂದರಲ್ಲಿ ಸಭೆ ನಡೆಸಿ, ಮುಂದಿನ ಕಾರ್ಯಾಚರಣೆ ಬಗ್ಗೆ ಯೋಜನೆ ರೂಪಿಸಿತ್ತು ಎಂಬುದು ತನಿಖೆ ವೇಳೆ ಎಸ್‌ಐಟಿಗೆ ತಿಳಿದು ಬಂದಿದೆ.

ಗಿರೀಶ್ ಮಟ್ಟಣ್ಣವರ್‌, ಚಿನ್ನಯ್ಯ ಹಾಗೂ ವಿಠಲ ಗೌಡ ಈ ಹೋಟೆಲ್‌ನಲ್ಲಿ ಸಭೆ ನಡೆಸಿದ್ದರು. ಅಲ್ಲೇ ಕೆಲವು ಪ್ಲ್ಯಾನ್ ರೂಪಿಸಿ, ಬುರುಡೆ ತಂಡ ಕಥೆ ಹೆಣೆದಿತ್ತು. ಆ ಬಳಿಕದ ಕಥೆಯಲ್ಲಿ ವಿಠಲ ಗೌಡ ಕಾಣಿಸಿಕೊಳ್ಳದೆ ಮರೆಯಾಗಿದ್ದ. ಆದರೂ ಮಟ್ಟಣ್ಣವರ್, ಜಯಂತ್ ಅವರು ಚಿನ್ನಯ್ಯ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಿದ್ದರು. ಈ ಎಲ್ಲ ವಿಚಾರಗಳನ್ನು ಎಸ್ಐಟಿ ವಿಚಾರಣೆ ವೇಳೆ ಚಿನ್ನಯ್ಯ ಬಾಯಿಬಿಟ್ಟಿದ್ದಾನೆ. ಬುರುಡೆ ತಂದುಕೊಟ್ಟ ಬಳಿಕ ಕಥೆಯಿಂದ ಹೊರಗಿದ್ದಂತೆ ನಟಿಸಿದ್ದ ವಿಠಲ ಗೌಡನನ್ನೂ ಅಧಿಕಾರಿಗಳು ಪ್ರಶ್ನಿಸಿದಾಗ ಬುರುಡೆ ರಹಸ್ಯ ಬಯಲಿಗೆ ಬಂತು ಎಂದು ತಿಳಿದುಬಂದಿದೆ.

ಕಣ್ಣೀರಿಡುತ್ತಲೇ ಜೈಲಿಗೆ ಹೋದ ಬುರುಡೆ ಚಿನ್ನಯ್ಯ 

ಶಿವಮೊಗ್ಗ/ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನನ್ನು ಶನಿವಾರ ತಡರಾತ್ರಿ ಶಿವಮೊಗ್ಗ ಜೈಲಿಗೆ ಶಿಫ್ಟ್‌ ಮಾಡಲಾಯಿತು. ಭದ್ರತೆ ದೃಷ್ಟಿಯಿಂದ ತಡರಾತ್ರಿ 1.20ಕ್ಕೆ ಶಿವಮೊಗ್ಗದ ಜೈಲಿಗೆ ಕರೆತರಲಾಯಿತು. ಆತನಿಗೆ ವಿಚಾರಣಾಧೀನ ಕೈದಿಯಾಗಿ 1104/ 25 ಸಂಖ್ಯೆ ನೀಡಲಾಗಿದೆ. ಜೈಲಿಗೆ ತೆರಳುವಾಗ ಚಿನ್ನಯ್ಯ ಕಣ್ಣೀರು ಹಾಕಿದ್ದು, ತಾನು ತಪ್ಪು ಮಾಡಿದ್ದಾಗಿ ಪಶ್ತಾತಾಪ ಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಮಧ್ಯೆ, ಆತನಿಗೆ ಜಾಮೀನು ಕೋರಿ ಆತನ ಪರ ವಕೀಲರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸೆ.9ರಂದು ಅರ್ಜಿ ವಿಚಾರಣೆಗೆ ಬರಲಿದೆ.

Read more Articles on