ಸಾವಿರ ಕಂಬ ಬಸದಿಗೆ ರವೀನಾ ಟಂಡನ್‌ ಪುತ್ರಿಯಿಂದ ಆನೆ ಗಿಫ್ಟ್‌

| N/A | Published : Aug 30 2025, 11:26 AM IST

rasha thadani hairstyles

ಸಾರಾಂಶ

ಯಾಂತ್ರೀಕೃತ ಐರಾವತವನ್ನು ಜೈನಕಾಶಿ ಮೂಡುಬಿದಿರೆಯ ಐತಿಹಾಸಿಕ ಸಾವಿರ ಕಂಬದ ಬಸದಿಗೆ ಬಾಲಿವುಡ್ ತಾರೆ ರವೀನಾ ಟಂಡನ್ ಮತ್ತು ಆಕೆಯ ಪುತ್ರಿ ರಾಶಾ ತಾದಾನಿ ಕೊಡುಗೆಯಾಗಿ ನೀಡಿದರು.

  ಮೂಡುಬಿದಿರೆ: (ದಕ್ಷಿಣ ಕನ್ನಡ) : ಯಾಂತ್ರೀಕೃತ ಐರಾವತವನ್ನು ಜೈನಕಾಶಿ ಮೂಡುಬಿದಿರೆಯ ಐತಿಹಾಸಿಕ ಸಾವಿರ ಕಂಬದ ಬಸದಿಗೆ ಬಾಲಿವುಡ್ ತಾರೆ ರವೀನಾ ಟಂಡನ್ ಮತ್ತು ಆಕೆಯ ಪುತ್ರಿ ರಾಶಾ ತಾದಾನಿ ಕೊಡುಗೆಯಾಗಿ ನೀಡಿದರು.

ಪಳಗಿಸಿದ ಆನೆಗಳನ್ನು ಬಳಸುವುದರಿಂದ ಕಾಡಿನ ಸಹಜ ಬದುಕನ್ನು ಕಸಿದುಕೊಂಡು ಹಿಂಸೆ ನೀಡಿದಂತಾಗುತ್ತದೆ ಎಂದು ಅದರ ವಿರುದ್ಧ ನೈಜ ಆನೆಗಳನ್ನೇ ಹೋಲುವ ಮೆಕ್ಯಾನಿಕಲ್ ಆನೆಗಳನ್ನು ಪ್ರೋತ್ಸಾಹಿಸಿ ಎನ್ನುತ್ತಿರುವ ಪೇಟಾ ಇಂಡಿಯಾದ ಮುಂಬೈ ಮೂಲದ ಪ್ರೇರಣೆಯಿಂದ ಬಾಲಿವುಡ್ ತಾರಾ ಕುಟುಂಬದ ಕೊಡುಗೆಯಾಗಿ ಈ ಐರಾವತ ಒದಗಿ ಬಂದಿದೆ. 

 ಜೈನಕಾಶಿಯಲ್ಲಿ ಚಾತುರ್ಮಾಸನಿರತ 108 ಗುಲಾಬ್ ಭೂಷಣ ಮುನಿ ಮಹಾರಾಜರು ನೂತನ ಐರಾವತವನ್ನು ಅನಾವರಣಗೊಳಿಸಿದರು. ಮೆಕ್ಯಾನಿಕಲ್ ಐರಾವತ ದೇಶದಲ್ಲೇ ಮೊದಲ ಬಾರಿಗೆ ಜೈನ ಬಸದಿಗೆ ಬಂದಂತಾಗಿದೆ. 3 ಮೀ. ಎತ್ತರ, 800 ಕೆ.ಜಿ. ಭಾರವಾಗಿದ್ದು ರಬ್ಬರ್, ಫೈಬರ್, ಮೆಟಲ್, ಮೆಶ್, ಫೋಮ್, ಕಬ್ಬಿಣ ಹಾಗೂ ಐದು ಮೋಟಾರುಗಳ ನೆರವಿನಿಂದ ನಿರ್ಮಿಸಲಾಗಿದೆ. ವಿದ್ಯುತ್ ಸಂಪರ್ಕ ನೀಡಿ ಅದನ್ನು ನೈಜ ಆನೆಯಂತೆ ಬಳಸಿಕೊಳ್ಳಲು ಸಾಧ್ಯವಿದೆ.

Read more Articles on