ಸಾರಾಂಶ
ನವನಗರದ ಬಾಲಕಿಯರ ಬಾಲ ಮಂದಿರದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಬಾಲಮಂದಿರದ ಮಕ್ಕಳೊಂದಿಗೆ ಹೊಸ ವರ್ಷವನ್ನು ಕೇಕ್ ಕತ್ತಿರುವ ಮೂಲಕ ಆಚರಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಬಾಲಕಿಯರ ಬಾಲ ಮಂದಿರದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಬಾಲಮಂದಿರದ ಮಕ್ಕಳೊಂದಿಗೆ ಹೊಸ ವರ್ಷವನ್ನು ಕೇಕ್ ಕತ್ತಿರುವ ಮೂಲಕ ಆಚರಣೆ ಮಾಡಿದರು.ಈ ವೇಳ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳು ಪ್ರತಿದಿನ ಏನಾದರೊಂದು ಹೊಸತನ ಕಲಿಯುವ ಸಂಕಲ್ಪ ಮಾಡಬೇಕು. ಒಂದೇ ದಿನದಲ್ಲಿ ಸಂಗೀತ ಕಲಿಯಲು ಆಗದು. ಆದರೆ, ಪ್ರಯತ್ನ, ಶ್ರಮಪಟ್ಟರೆ ಯಾವುದಾದರೂ ಸಾಧಿಸಬಹುದು. ಜಗತ್ತು ನೋಡುವ ದೃಷ್ಟಿ ಒಂದು ಕಡೆ ಇದ್ದರೆ, ನಮ್ಮನ್ನು ನೋಡುವ ದೃಷ್ಟಿ ಬದಲಾಗಬೇಕು. ಬಾಲ ಮಂದಿರದ ಅಂಬಿಕಾ ಬೊವೇರ್ ವಿದ್ಯಾರ್ಥಿ ಕರಾಟೆಯಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ, ತನ್ನನ್ನು ಗುರುತಿಸುವ ಕೆಲಸ ಮಾಡಿದ್ದಾಳೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಗುಲಾಬ ನದಾಫ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಸ್ತಗಿರಿ ಮುಲ್ಲಾ, ಸರಕಾರಿ ಬಾಲ ಮಂದಿರದ ಅಧೀಕ್ಷಕಿ ಜಯಮಾಲಾ ದೊಡಮನಿ ಸೇರಿದಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಘಟಕ ಹಾಗೂ ಬಾಲ ಮಂದಿರದ ಸಿಬ್ಬಂದಿಗಳು ಉಪಸ್ಥಿತರಿದ್ದರು.