ದೇವರ ಹಸು ಸಾವು: ಗ್ರಾಮಸ್ಥರಿಂದ ಅದ್ಧೂರಿ ಅಂತ್ಯಕ್ರಿಯೆ

| Published : Sep 20 2025, 01:03 AM IST

ಸಾರಾಂಶ

ದೇವರಹಿಪ್ಪರಗಿ: ಪಟ್ಟಣದ ಐತಿಹಾಸಿಕ ರಾವುತರಾಯ ದೇವರ ಹಸು ಶುಕ್ರವಾರ ಮೃತಪಟ್ಟಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಪಟ್ಟಣದ ಮಲ್ಲಯ್ಯನ ದೇವಸ್ಥಾನದ ಮುಂಭಾಗದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ದೇವರ ಹಸು ತನ್ನ 20 ಕರುಗಳೊಂದಿಗೆ ಪಟ್ಟಣದಲ್ಲಿ ಓಡಾಡಿಕೊಂಡಿತ್ತು. ಹಲವು ದಿನಗಳಿಂದ ವಯೋಮಾನದ ಹಸು ಪಟ್ಟಣದಲ್ಲಿ ಹಸರು ಮೇಯ್ದು ಮನೆಯಂಗಳ ಹಾಗೂ ದೇವಸ್ಥಾನದ ಆವರಣದಲ್ಲಿ ಮಲಗುತ್ತಿದ್ದವು. ಇಂದು ಬೆಳಗ್ಗೆ ಮೃತಪಟ್ಟಿದ್ದು, ಸ್ಥಳೀಯರ ಆಘಾತಕ್ಕೆ ಕಾರಣವಾಯಿತು.

ದೇವರಹಿಪ್ಪರಗಿ: ಪಟ್ಟಣದ ಐತಿಹಾಸಿಕ ರಾವುತರಾಯ ದೇವರ ಹಸು ಶುಕ್ರವಾರ ಮೃತಪಟ್ಟಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಪಟ್ಟಣದ ಮಲ್ಲಯ್ಯನ ದೇವಸ್ಥಾನದ ಮುಂಭಾಗದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ದೇವರ ಹಸು ತನ್ನ 20 ಕರುಗಳೊಂದಿಗೆ ಪಟ್ಟಣದಲ್ಲಿ ಓಡಾಡಿಕೊಂಡಿತ್ತು. ಹಲವು ದಿನಗಳಿಂದ ವಯೋಮಾನದ ಹಸು ಪಟ್ಟಣದಲ್ಲಿ ಹಸರು ಮೇಯ್ದು ಮನೆಯಂಗಳ ಹಾಗೂ ದೇವಸ್ಥಾನದ ಆವರಣದಲ್ಲಿ ಮಲಗುತ್ತಿದ್ದವು. ಇಂದು ಬೆಳಗ್ಗೆ ಮೃತಪಟ್ಟಿದ್ದು, ಸ್ಥಳೀಯರ ಆಘಾತಕ್ಕೆ ಕಾರಣವಾಯಿತು.ಮೃತ ಹಸುವಿಗೆ ಪಟ್ಟಣದ ಪ್ರಮುಖರು ಪೂಜೆ ಸಲ್ಲಿಸಿದರು. ಈ ವೇಳೆ ಮುಖಂಡರುಗಳಾದ ಸಂಗಪ್ಪ ಯಂಭತ್ನಾಳ, ಸತೀಶ ಸೌದಿ,ಸಾಹೇಬಗೌಡ ದಾನಗೊಂಡ, ಪ್ರವೀಣ ಸೌದಿ, ಹಣುಮಂತ ಹಿಕ್ಕಣಗುತ್ತಿ, ಶಿವಾನಂದ ಸಣ್ಣಕ್ಕಿ, ಕುಮಾರ ಮಸಿಬಿನಾಳ, ಉಮೇಶ ಅಸ್ಕಿ, ಮುದುಕಪ್ಪ ಮಸಿಬಿನಾಳ, ಚಿದಾನಂದ ಬಾವಿಮನೆ, ಯಲ್ಲಾಲಿಂಗ ಪೂಜಾರಿ ಸೇರಿದಂತೆ ಗೋ ಮಾತಾ ರಕ್ಷಕ ಯುವಕರ ಪಡೆ, ರಾವುತರಾಯ ಮಲ್ಲಯ್ಯನ ಸದ್ಭಕ್ತರು ದೇವರ ಹಸುವಿನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.