ಪಂಚಮಸಾಲಿ ಪೀಠಾಧಿಪತಿ ವಿರುದ್ಧ ಅವಹೇಳನಕಾರಿ ಪೋಸ್ಟ್‌-ಬಂಧನಕ್ಕೆ ಆಗ್ರಹ

| Published : Aug 10 2024, 01:37 AM IST

ಪಂಚಮಸಾಲಿ ಪೀಠಾಧಿಪತಿ ವಿರುದ್ಧ ಅವಹೇಳನಕಾರಿ ಪೋಸ್ಟ್‌-ಬಂಧನಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಮಸಾಲಿ ಸಮಾಜದ ಕೂಡಲಸಂಗಮದ ಪೀಠಾಧಿಪತಿ ಜಯಮೃತ್ಯುಂಜಯ ಸ್ವಾಮೀಜಿ ಕಾರು ಖರೀದಿಸಿದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಮತ್ತು ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸುವಂತೆ ಪಂಚಮಸಾಲಿ ಸಮಾಜದ ಮುಖಂಡರು ಕಾರಟಗಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರಟಗಿ: ಪಂಚಮಸಾಲಿ ಸಮಾಜದ ಕೂಡಲಸಂಗಮದ ಪೀಠಾಧಿಪತಿ ಜಯಮೃತ್ಯುಂಜಯ ಸ್ವಾಮೀಜಿ ಕಾರು ಖರೀದಿಸಿದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಮತ್ತು ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸುವಂತೆ ಇಲ್ಲಿನ ಪಂಚಮಸಾಲಿ ಸಮಾಜದವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪಟ್ಟಣದಲ್ಲಿ ತಾಲೂಕು ಪಂಚಮಸಾಲಿ ಸಮಾಜದ ಮುಖಂಡರು ಇಲ್ಲಿನ ಪೊಲೀಸ್ ಠಾಣೆಗೆ ತೆರಳಿ ಸ್ವಾಮೀಜಿಗಳ ವಿರುದ್ಧ ‘ಕಾರಟಗಿ ನಾಗರಿಕ ಸಮಾಜ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ೯೫೧೩೯೫೬೫೭೯ ನಂಬರ್‌ನಿಂದ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ. ಕೂಡಲೇ ಈ ವ್ಯಕ್ತಿಯನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು.

ಸ್ವಾಮೀಜಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರ ಪೋಸ್ಟ್ ಮಾಡುವ ಮೂಲಕ ತೇಜೋವಧೆ ಮಾಡುವ ವ್ಯವಸ್ಥಿತ ಷಡ್ಯಂತ ನಡೆದಿದೆ. ಈ ವ್ಯಕ್ತಿ ಸ್ವಾಮೀಜಿ ಕೊಲೆಗೆ ಸಂಚು ರೂಪಿಸಿರುವ ಉದ್ದೇಶದಿಂದ ಬೆದರಿಕೆಯ ಪೋಸ್ಟ್ ಮಾಡಿದ್ದು ಆತಂಕಕಾರಿ. ಇದರಿಂದಾಗಿ ಪಂಚಮಸಾಲಿ ಸಮಾಜದ ಜನರು ಭಯಭೀತರಾಗಿದ್ದು, ಕೂಡಲೇ ೯೫೧೩೯೫೬೫೭೯ ನಂಬರ್ ಹೊಂದಿದ ವ್ಯಕ್ತಿಯನ್ನು ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿ ಆಗ್ರಹಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ, ಜಿಲ್ಲಾ ಸೈಬರ್ ಕ್ರೈಮ್ ವಿಭಾಗಕ್ಕೆ ಮತ್ತು ಸ್ಥಳೀಯ ಠಾಣೆಗೆ ಒಟ್ಟು ಮೂರು ಪ್ರತ್ಯೇಕ ಮನವಿಯನ್ನು ಪಂಚಮಸಾಲಿ ಸಮಾಜದಿಂದ ಸಲ್ಲಿಸಲಾಯಿತು.

ಈ ವೇಳೆ ಪಂಚಮಸಾಲಿ ದಾಸೋಹ ಸಮಿತಿ ರಾಜ್ಯಾಧ್ಯಕ್ಷ ಚೆನ್ನಬಸಪ್ಪ ಸುಂಕದ್, ಕಾರಟಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ತಾಲೂಕು ಘಟಕದ ಅಧ್ಯಕ್ಷ ಪಾಲಾಕ್ಷಪ್ಪ ಕೆಂಡದ್, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಉಳೇನೂರು ಗ್ರಾಪಂ ಅಧ್ಯಕ್ಷ ಶಿವರಾಜ್ ಈಳಿಗನೂರು, ಶಿವಪೂಜಿ ಶರಣಪ್ಪ, ನಾಗೇಶ ಸಿಂಧನೂರು, ವಿರೂಪಾಕ್ಷಿ ಚಿಂಚಲಿ, ಗುಂಡಪ್ಪ ಕುಳಗಿ, ಸಿ. ಪುರುಷೋತ್ತಮ, ಅಂದಾನಗೌಡ ಮೈಲಾಪುರ, ಭದ್ರಗೌಡ ಪನ್ನಾಪುರ, ಶಿವಶರಣೇಗೌಡ ಯರಡೋಣಾ, ಶರಣಪ್ಪ ಕೋತ್ವಾಲ್, ಲಿಂಗಪ್ಪ ಸಾಲುಂಚಿಮರ, ಬಸವರಾಜ ಗುಂಡೂರು, ಬಜಾರ್ ನಾಗರಾಜ್, ವಿಜಯಕುಮಾರ್ ಕೋಲ್ಕಾರ್, ಅಮರೇಶ ಪೊಲೀಸ್ ಪಾಟೀಲ್, ಬಸವರಾಜ ಅಂಗಡಿ, ವಿರನಗೌಡ ಬೂದುಗುಂಪಾ, ಶರಣಪ್ಪ ಕಲಕೇರಿ, ಬೆನಕನಾಳ ಶರಣಪ್ಪ ಇದ್ದರು.