ಡಾ.ಅರುಣಕುಮಾರ ಮೇಲಿನ ದೂರನ್ನು ಪರಿಗಣಿಸದಂತೆ ಒತ್ತಾಯ

| Published : Jun 29 2025, 01:32 AM IST

ಸಾರಾಂಶ

ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ. ಅರುಣಕುಮಾರ ಅವರ ಮೇಲೆ ಕೆಲವರು ಇಲ್ಲಸಲ್ಲದ ಸುಳ್ಳು ಆರೋಪ ಮಾಡಿ ದೂರು ಸಲ್ಲಿಸಿದ್ದು, ಇದನ್ನು ಪರಿಗಣಿಸಬಾರದು

ಭಟ್ಕಳ: ಇಲ್ಲಿಯ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ. ಅರುಣಕುಮಾರ ಅವರ ಮೇಲೆ ಕೆಲವರು ಇಲ್ಲಸಲ್ಲದ ಸುಳ್ಳು ಆರೋಪ ಮಾಡಿ ದೂರು ಸಲ್ಲಿಸಿದ್ದು, ಇದನ್ನು ಪರಿಗಣಿಸಬಾರದು ಎಂದು ಶುಕ್ರವಾರ ಸಾರ್ವಜನಿಕರು ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ಡಾ.ಅರುಣಕುಮಾರ ವಿರುದ್ಧ ಸಣ್ಣಪುಟ್ಟ ವಿಚಾರ ಇಟ್ಟುಕೊಂಡು ಇಲ್ಲಿಂದ ವರ್ಗ ಮಾಡಿಸುವ ಉದ್ದೇಶದಿಂದ ಕೆಲವರು ಇಲ್ಲಸಲ್ಲದ ಆರೋಪ ಹೊರಿಸಿ ದೂರು ನೀಡಿದ್ದಾರೆ. ಅರುಣಕುಮಾರ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಶಸ್ತ್ರಚಿಕಿತ್ಸೆ ಮಾಡಿ ಗುಣಪಡಿಸುತ್ತಿದ್ದಾರೆ. ಇದನ್ನು ನೋಡಲಾಗದ ಕೆಲವರು ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ದೂರು ಸಲ್ಲಿಸಿದ್ದಾರೆ. ಅರುಣಕುಮಾರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.

ಶಿರಸ್ತೇದಾರ ಪ್ರವೀಣಕುಮಾರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆಟೋ- ಚಾಲಕ ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಪರಮೇಶ್ವರ್ ನಾಯ್ಕ ಕಂಡೇಕೋಡ್ಲು, ಮುಟ್ಟಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶೇಷಗಿರಿ ನಾಯ್ಕ ಮುಟ್ಟಳ್ಳಿ, ಶ್ರೀನಿವಾಸ್ ನಾಯ್ಕ ಹನುಮಾನ್ ನಗರ, ಗಣೇಶ ಹಳ್ಳೆರ್ ಮುಂಡಳ್ಳಿ, ರಾಜು ನಾಯ್ಕ ಬೆಳಲಖಂಡ, ಬಾಬು ನಾಯ್ಕ ಕಾರಗದ್ದೆ, ಶಂಕರ್ ನಾಯ್ಕ ಕಡವಿನಕಟ್ಟೆ ಇದ್ದರು.

ಭಟ್ಕಳ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ.ಅರುಣಕುಮಾರ ಮೇಲಿನ ದೂರನ್ನು ಪರಿಗಣಿಸದಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು.