ಪಾವಗಡ ಪಟ್ಟಣದಿಂದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಶ್ರೀ ಭಕ್ತ ಕನಕದಾಸರ ಜನ್ಮಸ್ಥಳ ಬಾಡ ಗ್ರಾಮಕ್ಕೆ ಹಾಗೂ ಅವರ ಕರ್ಮ ಭೂಮಿ ಕಾಗಿನೆಲೆ ಕ್ಷೇತ್ರಕ್ಕೆ ಸರ್ಕಾರಿ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ಕೆಎಸ್‌ಆರ್‌ಟಿಸಿ ಜಿಲ್ಲಾ ವಿಭಾಗದ ಮುಖ್ಯಸ್ಥರಲ್ಲಿ ಭಕ್ತರು ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಪಾವಗಡ
ಪಾವಗಡ ಪಟ್ಟಣದಿಂದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಶ್ರೀ ಭಕ್ತ ಕನಕದಾಸರ ಜನ್ಮಸ್ಥಳ ಬಾಡ ಗ್ರಾಮಕ್ಕೆ ಹಾಗೂ ಅವರ ಕರ್ಮ ಭೂಮಿ ಕಾಗಿನೆಲೆ ಕ್ಷೇತ್ರಕ್ಕೆ ಸರ್ಕಾರಿ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ಕೆಎಸ್‌ಆರ್‌ಟಿಸಿ ಜಿಲ್ಲಾ ವಿಭಾಗದ ಮುಖ್ಯಸ್ಥರಲ್ಲಿ ಭಕ್ತರು ಮನವಿ ಮಾಡಿದ್ದಾರೆ. ಈ ನಾಡು ಕಂಡ ಶ್ರೀ ಭಕ್ತ ಕನಕದಾಸರ ಜನ್ಮಸ್ಥಳ ಬಾಡ ಗ್ರಾಮಕ್ಕೆ ಹಾಗೂ ಅವರ ಕರ್ಮ ಭೂಮಿ ಕಾಗಿನೆಲೆ ಕ್ಷೇತ್ರಕ್ಕೆ ತಾಲೂಕಿನ ಸಾರ್ವಜನಿಕರು ಹಾಗೂ ಭಕ್ತರು ಅನೇಕ ವರ್ಷಗಳಿಂದ ಅಧಿಕ ಸಂಖ್ಯೆಯಲ್ಲಿ ಪ್ರವಾಸ ಹೋಗಿ ಬರುತ್ತಿದ್ದಾರೆ. ನಮ್ಮ ತಾಲೂಕಿನಿಂದ ಸದರಿ ಕ್ಷೇತ್ರಗಳಿಗೆ ನೇರ ಮಾರ್ಗವಾಗಿ ಯಾವುದೇ ಕೆಎಸ್‌ಆರ್‌ಟಿಸಿ ಬಸ್ ಸೌಯರ್ಕ ಇರುವುದಿಲ್ಲ. ಪ್ರವಾಸಿಗರು ಎರಡು ಮೂರು ಸ್ಥಳಗಳಲ್ಲಿ ಇಳಿದು, ಎರಡು ಮೂರು ಬಸ್ಸುಗಳನ್ನು ಹತ್ತುವುದರಿಂದ ಚಿಕ್ಕ ಮಕ್ಕಳು,ವೃದ್ಧರು, ಮಹಿಳೆಯರನ್ನು ಕರೆದುಕೊಂಡು,ಲಗೇಜುಗಳನ್ನು ಹಿಡಿದು,ಪ್ರಯಾಣ ಮಾಡುವುದು ಬಹಳ ಕಷ್ಟ ಮತ್ತು ತೊಂದರೆಯಾಗುತ್ತಿದೆ. ಅದೇ ರೀತಿ ನಮ್ಮ ಪಕ್ಕದ ಆಂಧ್ರಪ್ರದೇಶದ ಮಡಕಶಿರಾ, ಕಲ್ಯಾಣದುರ್ಗ, ಪೆನಗೊಂಡ, ಹಿಂದೂಪುರ ಸತ್ಯಸಾಯಿ ಜಿಲ್ಲೆಯ ಇತರೆ ತಾಲೂಕು ಹಾಗೂ ಗ್ರಾಮಗಳಿಂದ ಸದರಿ ಸ್ಥಳಕ್ಕೆ ಪ್ರವಾಸ ಹೋಗುವವರ ಸಂಖ್ಯೆಯು ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಪ್ರಸಿದ್ಧ ಪ್ರವಾಸಿ ಸ್ಥಳಗಳಿಗೆ ಹೋಗಿ ಬರಲು ಬಸ್ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಸಿದರು. ಇದೇ ವೇಳೆ ಕಾಳಿದಾಸ ವಿದ್ಯಾವರ್ಧಕ ಸಂಘದ ಜಿಲ್ಲಾಧ್ಯಕ್ಷ ಮೈಲಪ್ಪ, ಅಲ್ಕುಂದಪ್ಪ. ರವಿಕುಮಾರ್, ಪಿ.ವಿ.ಅನಿಲ್, ಪುನೀತ್, ಪೂಜಾ ಫ್ಯಾಷನ್ ಬಾಬು, ಜಗನ್ನಾಥ್, ಉದ್ಯಮಿರಾಮು, ಓಂಕಾರ್ , ಮಂಜು ಇತರರಿದ್ದರು.