ಈ ಸಂಬಂಧ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ವಿಚಾರಣೆ ನಡೆಯಿತು. ತಮ್ಮ ಮೊಮ್ಮಗ ಮನು ಸಹಾಯದಿಂದ ಆಟೋದಲ್ಲಿ ಆಗಮಿಸಿದ ಗಾಯಾಳು ಗೌರಮ್ಮ ಮೆಟ್ಟಿಲು ಹತ್ತಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದೆ ವಕೀಲ ಸಂಘದ ಆವರಣದಲ್ಲಿ ಕುಳಿತಿದ್ದರು.
ಕನ್ನಡಪ್ರಭ ವಾರ್ತೆ ಮದ್ದೂರು
ಅಪಘಾತದಲ್ಲಿ ತೊಡೆ ಮುರಿದುಕೊಂಡಿದ್ದ ವೃದ್ಧೆಯೊಬ್ಬರು ಮೆಟ್ಟಿಲು ಹತ್ತಿ ನ್ಯಾಯಾಲಯಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಕೆ ಇದ್ದ ಸ್ಥಳಕ್ಕೆ ಆಗಮಿಸಿದ ನ್ಯಾಯಾಧೀಶರು, ಪರಿಹಾರದ ಹಣ ಬಿಡುಗಡೆ ಮಾಡಲು ಆದೇಶ ನೀಡಿ ಮಾನವೀಯತೆ ಮೆರೆದ ಪ್ರಸಂಗ ಪಟ್ಟಣದ ನ್ಯಾಯಾಲಯದಲ್ಲಿನ ಲೋಕ ಅದಾಲತ್‌ನಲ್ಲಿ ನಡೆಯಿತು.ಇಲ್ಲಿನ ರಾಮ್ ರಹೀಮ್ ನಗರ ಬಡಾವಣೆಯ ನಿವಾಸಿ 75 ವರ್ಷದ ಗೌರಮ್ಮ ಕಳೆದ 2025ರ ಜುಲೈ 15ರಂದು ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಬಳಿ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಆಕೆಯ ಬಲತೊಡೆ ಮುರಿದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಪಘಾತ ಮಾಡಿದ ಟೆಂಪೋ ಮಾಲೀಕರ ವಿರುದ್ಧ ವಕೀಲ ಎಚ್.ಎಂ.ಸೋಸಲೇಗೌಡ ಅವರಿಂದ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ವಿಚಾರಣೆ ನಡೆಯಿತು. ತಮ್ಮ ಮೊಮ್ಮಗ ಮನು ಸಹಾಯದಿಂದ ಆಟೋದಲ್ಲಿ ಆಗಮಿಸಿದ ಗಾಯಾಳು ಗೌರಮ್ಮ ಮೆಟ್ಟಿಲು ಹತ್ತಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದೆ ವಕೀಲ ಸಂಘದ ಆವರಣದಲ್ಲಿ ಕುಳಿತಿದ್ದರು.ವಿಚಾರ ತಿಳಿದ ಒಂದನೇ ಅಪರ ಸಿವಿಲ್ ನ್ಯಾಯಾಧೀಶೆ ಎನ್.ಬಿ .ಮೋಹನ್ ಕುಮಾರಿ ಅವರು ಗೌರಮ್ಮ ಇದ್ದ ಸ್ಥಳಕ್ಕೆ ಹೋಗಿ ವಿಚಾರಣೆ ಮಾಡಿ ದಾಖಲಾತಿಗಳನ್ನು ಪರಿಶೀಲನೆ ನಡೆಸಿ 2.70 ಲಕ್ಷ ರು. ವಿಮಾ ಪರಿಹಾರ ಬಿಡುಗಡೆಗೆ ಆದೇಶ ಹೊರಡಿಸಿದರು.