ಕರ್ನಾಟದ ಬಡವರ ಧ್ವನಿ ದೇವರಾಜು ಅರಸು

| Published : Aug 22 2025, 12:00 AM IST

ಕರ್ನಾಟದ ಬಡವರ ಧ್ವನಿ ದೇವರಾಜು ಅರಸು
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿತ್ವ. ಅವರು ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ (ಹಿಂದಿನ ಮೈಸೂರು ರಾಜ್ಯ) ಸೇವೆ ಸಲ್ಲಿಸಿದ್ದಾರೆ. ಸಮ ಸಮಾಜದ ಕನಸನ್ನು ಕಂಡಂತಹ ಇವರು ಹಿಂದುಳಿದ ವರ್ಗಗಳ ಮತ್ತು ಬಡವರ ಏಳಿಗೆಗಾಗಿ ಅವರು ಮಾಡಿದ ಕಾರ್ಯಗಳು ಇಂದಿಗೂ ಸ್ಮರಣೀಯವಾಗಿವೆ ಎಂದು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಎಚ್.ಮಲ್ಲಿಕಾರ್ಜುನ್ ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿತ್ವ. ಅವರು ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ (ಹಿಂದಿನ ಮೈಸೂರು ರಾಜ್ಯ) ಸೇವೆ ಸಲ್ಲಿಸಿದ್ದಾರೆ. ಸಮ ಸಮಾಜದ ಕನಸನ್ನು ಕಂಡಂತಹ ಇವರು ಹಿಂದುಳಿದ ವರ್ಗಗಳ ಮತ್ತು ಬಡವರ ಏಳಿಗೆಗಾಗಿ ಅವರು ಮಾಡಿದ ಕಾರ್ಯಗಳು ಇಂದಿಗೂ ಸ್ಮರಣೀಯವಾಗಿವೆ ಎಂದು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಎಚ್.ಮಲ್ಲಿಕಾರ್ಜುನ್ ಪ್ರತಿಪಾದಿಸಿದರು. ತಾಲೂಕು ಆಡಳಿತದಿಂದ ನಡೆದ ಡಿ.ದೇವರಾಜ ಅರಸು ಜಯಂತಿಯಲ್ಲಿ ವಿಶೇಷ ಭಾಷಣಕಾರರಾಗಿ ಆಗಮಿಸಿದ್ದ ಡಾ. ಶಾಂತ ಅತ್ನಿ ಮಾತನಾಡಿ, ದೇವರಾಜು ಅರಸು ಅವರು ಆಗಸ್ಟ್ 20, 1915ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವಿ ಪಡೆದ ನಂತರ, ತಮ್ಮ ಹಳ್ಳಿಗೆ ಹಿಂತಿರುಗಿ ಕೃಷಿಯಲ್ಲಿ ತೊಡಗಿಕೊಂಡರು. ಇದೇ ಸಮಯದಲ್ಲಿ ಅವರು ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡರು.ರಾಜಕೀಯ ಪ್ರವೇಶ:

1952ರಲ್ಲಿ ಮೊದಲ ಬಾರಿಗೆ ಮೈಸೂರು ರಾಜ್ಯದ ಶಾಸಕರಾಗಿ ಆಯ್ಕೆಯಾದರು. ನಂತರದ ದಿನಗಳಲ್ಲಿ ಕರ್ನಾಟಕ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿ, ಆಡಳಿತದಲ್ಲಿ ಅನುಭವ ಪಡೆದರು.ಮುಖ್ಯಮಂತ್ರಿಯಾಗಿ ಸಾಧನೆಗಳು:

1972ರಲ್ಲಿ ಅವರು ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಈ ಅವಧಿಯಲ್ಲಿ ಅವರು ಕೈಗೊಂಡ ಮಹತ್ವದ ನಿರ್ಧಾರಗಳು ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗೆ ಕಾರಣವಾದವು.ಭೂ ಸುಧಾರಣೆ:

"ಉಳುವವನೇ ಭೂಮಿಯ ಒಡೆಯ " ಎಂಬ ಘೋಷಣೆಯೊಂದಿಗೆ ಅವರು ಕ್ರಾಂತಿಕಾರಕ ಭೂ ಸುಧಾರಣಾ ಕಾಯಿದೆಯನ್ನು ಜಾರಿಗೆ ತಂದರು. ಇದರಿಂದ ಲಕ್ಷಾಂತರ ಬಡ ಮತ್ತು ಭೂಹೀನ ಕೃಷಿಕರಿಗೆ ಭೂಮಿಯ ಹಕ್ಕು ದೊರೆಯಿತು, ಇದು ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಸಾಮಾಜಿಕ ಬದಲಾವಣೆಗೆ ಕಾರಣವಾಯಿತು.ಹಿಂದುಳಿದ ವರ್ಗಗಳ ಆಯೋಗ:

ಹಿಂದುಳಿದ ವರ್ಗಗಳ ಸರ್ವೇಕ್ಷಣೆಗಾಗಿ ಎಲ್. ಜಿ. ಹಾವನೂರು ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿದರು. ಈ ಆಯೋಗದ ವರದಿಯ ಆಧಾರದ ಮೇಲೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಜಾರಿಗೊಳಿಸಿದರು. ಇದು ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಒಂದು ಮಹತ್ವದ ಹೆಜ್ಜೆಯಾಯಿತು.ಹೆಸರು ಬದಲಾವಣೆ:

ಅವರ ಆಡಳಿತಾವಧಿಯಲ್ಲಿ, 1973ರ ನವೆಂಬರ್ 1ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.ಡಿ. ದೇವರಾಜ ಅರಸು ಅವರು 1982ರಲ್ಲಿ ನಿಧನರಾದರು. ಆದರೆ, ಅವರ ಸಾಮಾಜಿಕ ನ್ಯಾಯ ಮತ್ತು ಸಮಾಜ ಸುಧಾರಣೆಯ ಆಶಯಗಳು ಇಂದಿಗೂ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಚಿಂತನೆಗಳ ಮೇಲೆ ಪ್ರಭಾವ ಬೀರುತ್ತಿವೆ. ಅವರನ್ನು "ಸಾಮಾಜಿಕ ನ್ಯಾಯದ ಹರಿಕಾರ " ಎಂದೇ ಸ್ಮರಿಸಲಾಗುತ್ತದೆ ಎಂದು ಅವರು ತಿಳಿಸಿದರು ಜಿಲ್ಲಾ ಹಿಂದುಳಿದ ವರ್ಗಗಳ ಮುಖಂಡ ಡಿ.ದೇವರಾಜು ಅರಸು ಪ್ರಶಸ್ತಿ ಪುರಸ್ಕೃತ ಬಿ.ಸಿ ಶಂಕರಾಚಾರ್ ಮಾತನಾಡಿ, ಡಿ.ದೇವರಾಜು ಅರಸುರವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಎಂಟು ವರ್ಷಗಳ ಕಾಲ ಕರ್ನಾಟಕ ರಾಜ್ಯದ ಪಾಲಿಗೆ ಸುವರ್ಣ ಯುಗ ಎಂದು ಹೇಳಿದರೆ ತಪ್ಪಾಗಲಾರದು. ಕಾರಣ ಬಡವರ ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಅವರು ಅವಧಿಯಲ್ಲಿ ಹಾಕಿಕೊಂಡಂತಹ 20 ಅಂಶಗಳ ಕಾರ್ಯಕ್ರಮ ಇಡೀ ದೇಶದ ಗಮನವನ್ನು ಸೆಳೆಯಿತು. ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದು ಉಳುವನಿಗೆ ಭೂಮಿಯ ಒಡೆಯ, 60 ವರ್ಷ ತುಂಬಿದ ವಯೋವೃದ್ದರಿಗೆ 40 ರೂಪಾಯಿ ಮಾಶಾಸನ, ಅಂಗವಿಕಲರ ಮಾಶಾಸನ, 15 ರೂಗಳ ವಿದ್ಯಾರ್ಥಿ ವೇತನ, ಬಡವರ ಹಸಿವನ್ನ ನೀಗಿಸಲು ಅಂತ್ಯೋದಯ ಯೋಜನೆ ಅಡಿಯಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ತೆರೆದು ಉಚಿತ ಅಕ್ಕಿಯನ್ನು ವಿತರಿಸುವ ಕಾರ್ಯಕ್ರಮ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಬಡವರಿಗೆ ಸೂರನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಆಶ್ರಯ ಮನೆಗಳ ನಿರ್ಮಾಣ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.

ಸಮಾಜದಲ್ಲಿ ಇದ್ದಂತ ಕಂದಾಚಾರಗಳಾದ ದೇವದಾಸಿ ಪದ್ಧತಿ ನಿಷೇಧ, ವಿಧವಾ ಪುನರ್ವಿವಾಹಹಕ್ಕೆ ಕಾನೂನನ್ನ ತಂದು ವಿಧವೆಯರಿಗೂ ಮರು ವಿವಾಹಕ್ಕೆ ದಾರಿದೀಪವಾದರೂ ಹೀಗೆ ಜನಪರವಾದಂಥಹ ಅಂತಹ ಹತ್ತು ಹಲವು ಕಾರ್ಯಕ್ರಮಗಳನ್ನ ಜಾರಿಗೆ ಜಾತಿ ಭೇದವಿಲ್ಲದೆ ಧರ್ಮಭೇದವಿಲ್ಲದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದು ಅವುಗಳನ್ನು ಅನುಷ್ಠಾನ ಮಾಡಿದ್ದ ಕೀರ್ತಿ ಇಂದು ಜನಮಾನಸದಲ್ಲಿ ಉಳಿದಿದೆ ಎಂದರು.