ಸಂಭ್ರಮದ ದಿಗಂಬರೇಶ್ವರ ರಥೋತ್ಸವ

| Published : Apr 25 2024, 01:05 AM IST

ಸಾರಾಂಶ

ಇಲ್ಲಿನ ಆರಾಧ್ಯ ದೇವ ಜಗದ್ಗುರು ದಿಗಂಬರೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಭವ್ಯ ರಥೋತ್ಸವ ಜರುಗಿತು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಇಲ್ಲಿನ ಆರಾಧ್ಯ ದೇವ ಜಗದ್ಗುರು ದಿಗಂಬರೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಭವ್ಯ ರಥೋತ್ಸವ ಜರುಗಿತು.ಪ್ರತಿವರ್ಷ ಪಟ್ಟಣದ ದಿಗಂಬರೇಶ್ವರ ಮಠದ ಜಾತ್ರೆಯು ದವನದ ಹುಣ್ಣಿಮೆಯ ದಿನದಂದು ಪ್ರಾರಂಭವಾಗಿ ನಿರಂತರವಾಗಿ ಐದು ದಿನಗಳ ಕಾಲ ನಾಡಿನ ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿದ ಜರಗುತ್ತದೆ. ಸಂಜೆ 7 ಗಂಟೆಗೆ ದಿಗಂಬರೇಶ್ವರ ಮಠದ ಪೀಠಾಧಿಪತಿ ಯೋಗಿ ಕಲ್ಲಿನಾಥ ದೇವರು ನೇತೃತ್ವದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಮಹಾ ರಥೋತ್ಸವ ಜರುಗಿತು. ರಥೋತ್ಸವಕ್ಕೆ ಪಿ.ಎಸ್.ಐ ಪ್ರವೀಣ ಗರೇಬಾಳ ನೇತೃತ್ವದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು.