ಸಾಧನೆಗೆ ಪರಿಶ್ರಮ ಶ್ರದ್ಧೆ ಮುಖ್ಯ: ಅವಿನಾಶ

| Published : Feb 10 2025, 01:47 AM IST

ಸಾರಾಂಶ

ವಿದ್ಯಾರ್ಥಿ ಜೀವನ ಸಸಿ ಇದ್ದಂತೆ, ಈ ಹಂತದಲ್ಲಿ ಸರಿಯಾದ ಪಾಲನೆ,ಪೋಷಣೆ ಮಾಡುವದರ ಜತೆಗೆ ಸಂಸ್ಕಾರ ತುಂಬಿದಲ್ಲಿ ಸಸಿ ಬಿದ್ದದ್ದು ಹೆಮ್ಮರವಾಗಿ ಬೆಳೆದ ಯಾವ ರೀತಿಯಾಗಿ ಫಲಪುಷ್ಷ, ಗಾಳಿ, ಆಮ್ಲಜನಕ ಕೊಡುತ್ತದೆ

ರೋಣ: ಭವಿಷ್ಯದ ಜೀವನ ಉಜ್ವಲತೆಗೆ ಹಾಗೂ ಸಾಧನೆಗೆ ಸತತ ಪರಿಶ್ರಮ, ಶ್ರದ್ಧೆ ಅತೀ ಮುಖ್ಯವಾಗಿದ್ದು, ವಿದ್ಯಾರ್ಥಿ ದಿಸೆಯಿಂದಲೇ ಸಾಧನೆ ಹಾದಿ ಸುಗಮಗೊಳಿಸಿಕೊಳ್ಳುವಲ್ಲಿ ವಿದ್ಯಾಬ್ಯಾಸದಲ್ಲಿ ಶ್ರದ್ಧೆ, ಆಸಕ್ತಿ ವಹಿಸಬೇಕು ಎಂದು ಸಿದ್ರಾಮೇಶ್ವರ ವಿದ್ಯಾ ವರ್ದಕ ಸಮಿತಿ ಚೇರಮನ್ ಅವಿನಾಶ ಸಾಲಿಮನಿ ಹೇಳಿದರು.

ಅವರು ಶನಿವಾರ ಸಂಜೆ ಪಟ್ಟಣದ ಸಿದ್ರಾಮೇಶ್ವರ ವಿದ್ಯಾವರ್ಧಕ ಸಮಿತಿಯ ಗ್ರೀನ್ ವುಡ್ ಇಂಟರ್‌ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ 13 ನೇ ವಾರ್ಷಿಕೋತ್ಸ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿ ಜೀವನ ಸಸಿ ಇದ್ದಂತೆ, ಈ ಹಂತದಲ್ಲಿ ಸರಿಯಾದ ಪಾಲನೆ,ಪೋಷಣೆ ಮಾಡುವದರ ಜತೆಗೆ ಸಂಸ್ಕಾರ ತುಂಬಿದಲ್ಲಿ ಸಸಿ ಬಿದ್ದದ್ದು ಹೆಮ್ಮರವಾಗಿ ಬೆಳೆದ ಯಾವ ರೀತಿಯಾಗಿ ಫಲಪುಷ್ಷ, ಗಾಳಿ, ಆಮ್ಲಜನಕ ಕೊಡುತ್ತದೆಯೋ, ಅದರಂತೆ ವಿದ್ಯಾರ್ಥಿ ದಿಶೆಯಲ್ಲಿಯೇ ಉತ್ತಮ ಸಂಸ್ಕಾರ, ನೈತಿಕ ಮೌಲ್ಯ ತುಂಬಬೇಕು. ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ ಕಲಿಸುವುದು ಅವರ ಸಮಗ್ರ ಬೆಳವಣಿಗೆಗೆ ಅವಶ್ಯಕವಾಗಿದೆ ಮತ್ತು ಜವಾಬ್ದಾರಿಯುತ, ಸಹಾನುಭೂತಿಯ ವ್ಯಕ್ತಿಗಳಾಗಿರಲು ಅವರಿಗೆ ತರಬೇತಿ ನೀಡುತ್ತದೆ. ಉತ್ತಮ ನೈತಿಕ ಮೌಲ್ಯ ಅಳವಡಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳು ಸಕಾರಾತ್ಮಕ ವ್ಯಕ್ತಿತ್ವ ನಿರ್ಮಿಸಲು ಸಹಾಯ ಮಾಡುತ್ತದೆ ಎಂದರು.

ಯುವ ಮುಖಂಡ ಸಂಜಯ ರಡ್ಡೆಡರ ಮಾತನಾಡಿ, ಮಕ್ಕಳಲ್ಲಿನ‌ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಟಿವಿ, ಮೋಬೈಲ್, ಧಾರವಾಹಿಗಳಿಂದ ದೂರವಿದ್ದು ಪುಸ್ತಕ ಓದುವದರಲ್ಲಿ ಶಾಲೆಗಳಲ್ಲಿನ ಪಾಠ ಪುನರ್ ಮನನ ಮಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಪಾಲಕರ‌ದ್ದು ಗುರುತರ ಕರ್ತವ್ಯವಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ‌ ಶಿಕ್ಷಣ ನೀಡುವಲ್ಲಿ ಗ್ರೀನ್ ವುಡ್ ಇಂಟರ್‌ನ್ಯಾಷನಲ್‌ ಶಾಲೆಯು ಶ್ರಮಿಸುತ್ತಿರುವದ ಶ್ಲಾಘನೀಯವಾಗಿದೆ ಎಂದರು.

ಗ್ರಿನ್ ವುಡ್ ಇಂಟರ್‌ನ್ಯಾಷನಲ್ ಸಾಧಕ 2025 ಪ್ರಶಸ್ತಿಯನ್ನು ಬಾಲ ನಟ ಹರೀಶ.ವ್ಹಿ.ಪತ್ತಾರ ಅವರಿಗೆ ನೀಡಿ ಗೌರವಿಸಲಾಯಿತು. 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೆ. 95.52 ರಷ್ಟು ಅಂಕ ಪಡೆದ ವಿದ್ಯಾರ್ಥಿನಿ ಸಂಗೀತಾ ಕೊಡೆಕಲ್ಲ ಸೇರಿದಂತೆ ಅನೇಕ ಸಾಧಕರಿಗೆ ಗಣ್ಯರನ್ನು ಸನ್ಮಾನಿಸಲಾಯಿತು.

ಸಾನ್ನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಮೇಘಾ ಸಾಲಿಮನಿ, ಪತ್ರಕರ್ತ ಮಂಜುನಾಥ ರಾಠೋಡ, ಶಾಲಾ ಆಡಳಿತಾಧಿಕಾರಿ ಎಸ್.ಎಂ. ಕೊಟಗಿ, ಹನಮಂತ ಚಲವಾದಿ, ಗೀತಾ ನೀಲಗಾರ, ಕೆ.ವಿ. ಕಂಬಿ, ಮುಖ್ಯೋಪಾಧ್ಯಾಯ ಮಹೇಶ ಅಚ್ಚಿನಗೌಡ್ರ, ಪಲ್ಲವಿ ರಾಠೋಡ ಮುಂತಾದವರು ಉಪಸ್ಥಿತರಿದ್ದರು. ಪ್ರಿನ್ಸಿಪಾಲ ಸುನೀತಾ ರಾಬಾ ಸ್ವಾಗತಿಸಿದರು.ಅಭಿಷೇಕ ಇನಾಮದಾರ ನಿರೂಪಿಸಿದರು.