ಸಾರಾಂಶ
ಬಡಗಬೆಟ್ಟುವಿನ ಹಿರಿಯ ಹೈನುಗಾರರಾದ ವಿಶ್ವನಾಥ್ ಅವರು ತಮ್ಮ ಗೋವು ಮತ್ತು ಕರುವನ್ನು ವಠಾರಕ್ಕೆ ತಂದು ಗೋಭಕ್ತರಿಗೆ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟರು.
ಕನ್ನಡಪ್ರಭ ವಾರ್ತೆ ಉಡುಪಿ
ದೀಪಾವಳಿ ಪ್ರಯುಕ್ತ ಶನಿವಾರ ಬೆಳಗ್ಗೆ 9.30ರಿಂದ 10.30ರ ವರೆಗೆ ಇಲ್ಲಿನ 80ನೇ ಬಡಗುಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಠಾರದಲ್ಲಿ ಉಡುಪಿ ಜಿಲ್ಲೆ ಮತ್ತು ತಾಲೂಕು ಸಹಕಾರ ಭಾರತಿ, ರಾಜಾಪುರ ಸಾರಸ್ವತ ಸಭಾ ಪರ್ಕಳ ಮತ್ತು 80 ಬಡಗುಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವತಿಯಿಂದ ಗೋಪೂಜಾ ಕಾರ್ಯಕ್ರಮ ಯಶಸ್ವಿಯಾಗಿ ವಿಜೃಂಭಣೆಯಿಂದ ನಡೆಯಿತು.ಬಡಗಬೆಟ್ಟುವಿನ ಹಿರಿಯ ಹೈನುಗಾರರಾದ ವಿಶ್ವನಾಥ್ ಅವರು ತಮ್ಮ ಗೋವು ಮತ್ತು ಕರುವನ್ನು ವಠಾರಕ್ಕೆ ತಂದು ಗೋಭಕ್ತರಿಗೆ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟರು.ಸಹಕಾರ ಭಾರತಿ ಉಡುಪಿ ಜಿಲ್ಲಾ ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ, ಕಾರ್ಯದರ್ಶಿ ವಿಜೇತ್ ಕುಮಾರ್, ರಾಜಾಪುರ ಸಾರಸ್ವತ ಸಭಾ ಅಧ್ಯಕ್ಷ ಎಳ್ಳಾರೆ ಪಾಂಡುರಂಗ ಕಾಮತ್, ಕಾರ್ಯದರ್ಶಿ ಶ್ಯಾಮ್ ರಾಜೇಶ್, ಸದಸ್ಯರಾದ ಸುಜಾತಾ ನಾಯಕ್, ಸುಬ್ಬಣ್ಣ ನಾಯಕ್, ಗಂಗಾಧರ ಪ್ರಭು, ಅರ್ಬಿ ಮಂಜುನಾಥ ನಾಯಕ್, 80 ಬಡಗುಬೆಟ್ಟು ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಜಯಂತಿ ಸುವರ್ಣ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಶಾ ಶೆಟ್ಟಿ, ಸುನಂದಾ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.