ಏಕದಂತ ಸಮಿತಿಯಿಂದ ದೀಪಾವಳಿ: ಬಡವರಿಗೆ ರೇಷನ್

| Published : Oct 20 2025, 01:04 AM IST

ಸಾರಾಂಶ

ಸಮಿತಿಯಿಂದ ನಡೆಯುವ ಈ 5ನೇ ವರ್ಷದ ಕಾರ್ಯಕ್ರಮಕ್ಕೆ ಪರ್ಯಾಯ ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ ಅವರು ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಶ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಪ್ರಾರ್ಥನೆ ಮುಖೆನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಪಣಿಯಾಡಿ ಶ್ರೀ ಏಕದಂತ ಸೇವಾ ಸಮಿತಿಯು ದಾನಿಗಳ ಸಹಕಾರದಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ 27 ಕುಟುಂಬಗಳಿಗೆ ತಲಾ 2000 ರು. ನಂತೆ 54000 ರು. ಮೊತ್ತದ ಆಹಾರ ಸಾಮಗ್ರಿಗಳನ್ನು ವಿತರಿಸಿದೆ.ಸಮಿತಿಯಿಂದ ನಡೆಯುವ ಈ 5ನೇ ವರ್ಷದ ಕಾರ್ಯಕ್ರಮಕ್ಕೆ ಪರ್ಯಾಯ ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ ಅವರು ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಶ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಪ್ರಾರ್ಥನೆ ಮುಖೆನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ನಾಗರಾಜ್ ಪಣಿಯಾಡಿ, ಗೌರವಾಧ್ಯಕ್ಷ ತಲ್ಲೂರು ಚಂದ್ರಶೇಖರ್ ಶೆಟ್ಟಿ, ಸಂಚಾಲಕ ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ ಮತ್ತು ಪ್ರಮುಖರಾದ ವಿಠಲಮೂರ್ತಿ ಆಚಾರ್ಯ, ಸುಧಾಕರ್ ಪೂಜಾರಿ, ಪ್ರವೀಣ್ ಕುಂಜಿಬೆಟ್ಟು, ದಿವಾಕರ್ ಸಾಲಿಯಾನ್, ಕೆ. ನಾರಾಯಣ ಶೆಟ್ಟಿ, ಜ್ಯೋತಿ ಶ್ರೀಯಾನ್, ಗೀತಾ ಸೇರಿಗಾರ್, ಶೋಭಾ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.