ಸಾರಾಂಶ
ಮೂರು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳ ಸಂಭ್ರಮ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಪ್ರತಿವರ್ಷದಂತೆ ಈ ವರ್ಷವೂ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಗೌರಿದೇವಿ ದೇವಸ್ಥಾನದ ಸಮಿತಿ ಹಾಗೂ ಭಕ್ತರ ಸಹಯೋಗದಲ್ಲಿ ಗೌರಿದೇವಿ ಜಾತ್ರಾ ಮಹೋತ್ಸವವನ್ನು ನ.9 ರಿಂದ 12ರವರೆಗೆ ಆಚರಣೆ ಮಾಡಲಾಗುವುದು ಎಂದು ದೇವಸ್ಥಾನದ ಸಮಿತಿ ವ್ಯವಸ್ಥಾಪಕ ಆರ್.ಓಬಯ್ಯ, ಎಸ್.ಬಿ.ಚಂದ್ರಮೌಳಿ ತಿಳಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿ, ಭಾನುವಾರ ಬೆಳಗಿನ ಜಾವ ಆರಿದ್ರ ನಕ್ಷತ್ರದ ತುಲಾ ಲಗ್ನದಲ್ಲಿ ಗೌರಿದೇವಿಯ ಮಹಾಕಳಸ ಸ್ಥಾಪನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ನ.10ರ ಸೋಮವಾರ ರಾತ್ರಿ 10ಕ್ಕೆ ಗೌರಿದೇವಿ ಉತ್ಸವವು ಈಶ್ವರಸ್ವಾಮಿ ದೇವಸ್ಥಾನದಿಂದ ಸುಮಂಗಳಿಯರು, ಕುಮಾರಿಯರ ಆರಾತಿ, ಭಜನೆ, ನಂದಿಧ್ವಜ, ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿ ಹೊರಡುವುದು. ನ.11ರ ಮಂಗಳವಾರ ಬೆಳಗ್ಗೆ 8ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಿರುತ್ತದೆ. ನ.12ರ ಬುಧವಾರ ಸಂಜೆ 5ಕ್ಕೆ ಗೌರಿದೇವಿಗೆ ಉಡಿತುಂಬಿ ವೀರಗಾಸೆ, ಕೋಲಾಟ ಕಾರ್ಯಕ್ರಮದೊಂದಿಗೆ ರಾತ್ರಿ 12ಕ್ಕೆ ಸ್ವಸ್ಥಾನಕ್ಕೆ ಕಳಿಸಲಾಗುವುದು.
ಗೌರಿದೇವಿ ಜಾತ್ರಾ ಮಹೋತ್ಸವಕ್ಕೆ ಶಾಸಕ ಟಿ.ರಘುಮೂರ್ತಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಿವೃತ್ತ ಬ್ಯಾಂಕ್ ಅಧಿಕಾರಿ ಎಸ್.ರುದ್ರಮುನಿ, ನಿವೃತ್ತ ಎಸ್‌ಬಿಐ ಅಧಿಕಾರಿ ಆರ್.ಜಯಣ್ಣ, ಲೋಕೋಪಯೋಗಿ ಇಲಾಖೆ ಬಿ.ರಾಜಣ್ಣ, ಮಲ್ಲೇಶ್ವರ ಟ್ರೇಡರ್ ಕಂಪನಿ ಮಾಲೀಕರು ದೊಡ್ಡೇರಿಯ ಸಿ.ಎಸ್.ಪ್ರಸಾದ್ ಮತ್ತು ಮಕ್ಕಳು, ಡಿ.ಎಂ.ಸಿದ್ದಯ್ಯ ಮತ್ತು ಕುಟುಂಬ ವರ್ಗ, ವಕೀಲರಾದ ಮಲ್ಲಿಕಾರ್ಜುನ್ ಮತ್ತು ಕುಟುಂಬ ವರ್ಗ, ಗ್ರಾಪಂಚಾಯಿತಿ ಆಡಳಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಗೌರಿದೇವಿ ಜಾತ್ರೆಗೆ ಹೆಚ್ಚಿನ ಭಕ್ತರು ಆಗಮಿಸಿ ಯಶಸ್ವಿಗೊಳಿಸುವಂತೆ ಟಿ.ಮಲ್ಲೇಶ್, ಬಡ್ಡಿಶಿವಣ್ಣ, ಪ್ರಕಾಶ್‌ಒಡೆಯರ್, ಯರಬಾಲಪ್ಪ, ಶಿವಶಂಕರ್ ಮುಂತಾದವರು ಮನವಿ ಮಾಡಿದ್ಧಾರೆ.;Resize=(128,128))
;Resize=(128,128))
;Resize=(128,128))
;Resize=(128,128))