ಸಾರಾಂಶ
ಬರ ಪರಿಸ್ಥಿತಿಯಲ್ಲೂ ರಾಜಕಾರಣ ಮಾಡುವುದನ್ನು ಬಿಜೆಪಿ ನಾಯಕರು ಬಿಡಬೇಕು ಎಂದರು.
ಕನ್ನಡಪ್ರಭವಾರ್ತೆ ಬಳ್ಳಾರಿಬರ ಅಧ್ಯಯನ ತಂಡ ವರದಿ ಅವೈಜ್ಞಾನಿಕ ಎಂದಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ಬಿಜೆಪಿ ನಾಯಕರಿಗೆ ಕೇಂದ್ರ ಅಧ್ಯಯನ ತಂಡದ ಮೇಲೂ ನಂಬಿಕೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ಸಹ ಬರ ವೀಕ್ಷಣೆ ಮಾಡಿದ್ದಾರೆ. ಬರ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರದ ಬರ ಅಧ್ಯಯನ ತಂಡ ಬಂದುಹೋದ ಬಳಿಕವೂ ಬಿಜೆಪಿಯವರು ಈ ರೀತಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರಲ್ಲದೆ, ಕೇಂದ್ರ ಅಧ್ಯಯನ ತಂಡದ ಮೇಲೂ ಬಿಜೆಪಿ ನಾಯಕರಿಗೆ ವಿಶ್ವಾಸವಿಲ್ಲವೇ ಎಂದು ಕೇಳಿದರು. ಬರ ಪರಿಸ್ಥಿತಿಯಲ್ಲೂ ರಾಜಕಾರಣ ಮಾಡುವುದನ್ನು ಬಿಜೆಪಿ ನಾಯಕರು ಬಿಡಬೇಕು ಎಂದರು.ಬರ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಮೂವರು ಮಂತ್ರಿಗಳು ಕೇಂದ್ರಕ್ಕೆ ತೆರಳಿದ್ದರು. ಆದರೆ, ಕೇಂದ್ರ ನಾಯಕರು ಸ್ಪಂದಿಸಿಲ್ಲ. ರೈತರಿಗೆ ಪರಿಹಾರ ನೀಡಿದರೆ ಕರ್ನಾಟಕ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಸಚಿವರ ಭೇಟಿಗೆ ಸಮಯವೂ ನೀಡಿಲ್ಲ. ರಾಜ್ಯದ ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ. ಅವರಿಗೆ ಈ ರಾಜ್ಯದ ರೈತರ ಬಗ್ಗೆ ಕಾಳಜಿಗಳಿಲ್ಲವೇ? ಅವರೆಲ್ಲ ಮೌನ ವಹಿಸಿರುವುದು ಏಕೆ ಎಂದು ಸಚಿವ ನಾಗೇಂದ್ರ ಪ್ರಶ್ನಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))