ಸಾರಾಂಶ
ಏ.28ರಂದು ಕೋಡಿಪುರಕ್ಕೆ ಹೋಗುವ ರಸ್ತೆಯಲ್ಲಿ ಮಾದಕ ವಸ್ತುವೊಂದನ್ನು ಯುವಕರು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಐಜೂರು ಠಾಣೆ ಪೊಲೀಸರು ಪಂಚರೊಂದಿಗೆ ದಾಳಿ ನಡೆಸಿದ್ದಾರೆ.
ರಾಮನಗರ:
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ಐಜೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಂಡ್ಯ ತಾಲೂಕು ಕೊತ್ತತ್ತಿ ಗ್ರಾಮದ ವಸಂತ್ ಕುಮಾರ್, ರಾಮನಗರದ ರಾಯರದೊಡ್ಡಿ ವಾಸಿ ಲಿಖಿತ್ ಗೌಡ ಹಾಗೂ ರುದ್ರ ಕುಮಾರ್ ಬಂಧಿತ ಆರೋಪಿಗಳು.
ಏ.28ರಂದು ಕೋಡಿಪುರಕ್ಕೆ ಹೋಗುವ ರಸ್ತೆಯಲ್ಲಿ ಮಾದಕ ವಸ್ತುವೊಂದನ್ನು ಯುವಕರು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಐಜೂರು ಠಾಣೆ ಪೊಲೀಸರು ಪಂಚರೊಂದಿಗೆ ದಾಳಿ ನಡೆಸಿದ್ದಾರೆ.ಆರೋಪಿಗಳ ಬಳಿಯಿದ್ದ ಸುಮಾರು 1 ಕೆ.ಜಿ 268 ಗ್ರಾಂ ತೂಕದ ಮಾದಕ ವಸ್ತು ಹಾಗೂ 710 ರು. ನಗದು ಹಣವನ್ನು ಅಮಾನತ್ತು ಪಡಿಸಿಕೊಂಡ ಪೊಲೀಸರು, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.