ಸಾರಾಂಶ
ಗ್ರಹಣದ ವೇಳೆ ಆಹಾರ ಸೇವಿಸುವ ಮೂಲಕ ಮೂಢನಂಬಿಕೆ ಆಚರಣೆ ಮಾಡದಂತೆ ಮೂಢ ನಂಬಿಕೆ ವಿರೋಧಿ ಒಕ್ಕೂಟದ ಕಾರ್ಯಕರ್ತರು ಜಾಗೃತಿ ಮೂಡಿಸಿದರು.
ಬೆಂಗಳೂರು: ಗ್ರಹಣದ ವೇಳೆ ಆಹಾರ ಸೇವಿಸುವ ಮೂಲಕ ಮೂಢನಂಬಿಕೆ ಆಚರಣೆ ಮಾಡದಂತೆ ಮೂಢ ನಂಬಿಕೆ ವಿರೋಧಿ ಒಕ್ಕೂಟದ ಕಾರ್ಯಕರ್ತರು ಜಾಗೃತಿ ಮೂಡಿಸಿದರು.
ಸೋಮವಾರ ನಗರದ ಪುರಭವನದ ಮೆಟ್ಟಿಲುಗಳ ಮೇಲೆ ಸಮೋಸಾ, ಬಜ್ಜಿ ಮತ್ತಿತರ ತನಿಸು ಸೇವಿಸಿ ಚಹಾ ಕುಡಿಯುವ ಮೂಲಕ ಪದಾಧಿಕಾರಿಗಳು ಗ್ರಹಣದ ಆಚರಣೆ ಖಂಡಿಸಿದರು.ಸಂಚಾಲಕ ಟಿ. ನರಸಿಂಹಮೂರ್ತಿ ಮಾತನಾಡಿ, ಸೂರ್ಯ ಗ್ರಹಣ, ಚಂದ್ರ ಗ್ರಹಣ ಪ್ರತಿ ವರ್ಷ ನಡೆಯುವ ಪ್ರಕ್ರಿಯೆ. ಆದರೆ ಕೆಲ ಜ್ಯೋತಿಷಿಗಳು ಮಾಧ್ಯಮಗಳ ಮೂಲಕ ಇಲ್ಲ ಸಲ್ಲದ ವಿವರಣೆ ಕೊಡುತ್ತಾರೆ. ಜನರಿಗೆ ಕೆಲವು ಪ್ರಸ್ತುತವಲ್ಲದ ಸಲಹೆ ನೀಡುತ್ತಾರೆ. ಇವೆಲ್ಲ ಮೂಢನಂಬಿಕೆಗಳಾಗಿವೆ. ಜನರಿಗೆ ಅರಿವು ಮೂಡಿಸಲು ಅಭಿಯಾನವನ್ನು ನೆಡೆಸಿದ್ದೇವೆ ಎಂದು ಹೇಳಿದರು.
ಜನರಿಗೆ ಸರಿಯಾದ ವೈಜ್ಞಾನಿಕ ದಾರಿ ತೋರಿಸಲು ಸುಮಾರು 20 ವರ್ಷದಿಂದ ಮೂಢ ನಂಬಿಕೆ ವಿರೋಧಿ ಒಕ್ಕೂಟದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.