ಕುಷ್ಟಗಿ: ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಫೆ. 28ರಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ಹಾಗೂ ಸಂಘದ ಸುವರ್ಣ ಮಹೋತ್ಸವ, ಧನ್ಯತಾ ಸಮಾರಂಭ ನಡೆಯಲಿದ್ದು, ಕುಷ್ಟಗಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕ, ಶಿಕ್ಷಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕುಷ್ಟಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಿಂಗಪ್ಪ ಗುನ್ನಾಳ ಹೇಳಿದರು.
ಪಟ್ಟಣದ ಗುರುಭವನದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ ಟ್ಯಾಕ್ಸ್,ಇ-ಫೈಲಿಂಗ್ ಲೋಕಾರ್ಪಣೆ ಮಾಡಲಿದ್ದಾರೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಾಲ ಸಂಜೀವಿನಿ ಯೋಜನೆಯ ಲೋಕಾರ್ಪಣೆ ಸೇರಿದಂತೆ ಅನೇಕ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಲಕ್ಷಾಂತರ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದ ಅವರು, ಈ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಇಲಾಖೆಯಿಂದ ಒಒಡಿ ಸೌಲಭ್ಯ, ವಸತಿ ವ್ಯವಸ್ಥೆ, ಊಟ ಮತ್ತು ಉಪಾಹಾರ ವ್ಯವಸ್ಥೆ ಮಾಡಲಾಗಿದ್ದು, ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಬೀರಪ್ಪ ಕುರಿ, ಮಹೇಶ ಪಡಿ, ಯಲ್ಲನಗೌಡ ಪಾಟೀಲ, ವಿದ್ಯಾ ಕಂಪಾಪುರಮಠ, ಮುರ್ತುಜಾಬಿ, ರುದ್ರೇಶ ಬೂದಿಹಾಳ, ಹೊನ್ನಪ್ಪ ಡೊಳ್ಳಿನ, ಮಂಜಪ್ಪ ಪೂಜಾರ, ಯಮನಪ್ಪ ಲಮಾಣಿ, ಸಿದ್ರಾಮಪ್ಪ ಅಮರಾವತಿ, ಮಲ್ಲಪ್ಪ ಕುದರಿ, ಹೈದರಲಿ ಜಾಲಿಹಾಳ, ಚಂದಪ್ಪ ಹಕ್ಕಿ, ಶರಣಪ್ಪ ತೆಮ್ಮಿನಾಳ, ಮಲ್ಲಪ್ಪ ಕಿರಗಿ, ಅಯ್ಯಪ್ಪ ಸುರುಳ, ಶಿವಪ್ಪ ವಾಗ್ಮೋರೆ, ಇಮಾಮಸಾಬ್ ಮುಲ್ಲಾ, ಕಳಕಮಲ್ಲೇಶ ಭೋಗಿ, ಸಂಗಪ್ಪ ಬೆಲ್ಲದ, ಕಲ್ಪನಾ, ಗೌರಮ್ಮ ತಳವಾರ, ರುದ್ರಮ್ಮ ಗುತ್ತೂರ ಇದ್ದರು.