ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಸಹಕಾರ ಸಂಘಗಳಿಂದ ರೈತರಿಗೆ ಸಾಲ ಸೌಲಭ್ಯ ನೀಡುವುದರಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಿದೆ. ಪಡೆದ ಸಾಲದ ಮರುಪಾವತಿಯಿಂದ ಸಂಘದ ಬೆಳವಣಿಗೆ ಮತ್ತು ಲಾಭಾಂಶ ಅಧಿಕವಾಗುತ್ತದೆ ಎಂದು ಹರೀಶಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಶಿವಾನಂದ ನಾಯ್ಕ ತೆಲಗುಂದ್ಲಿ ಹೇಳಿದರು.ತಾಲೂಕಿನ ಹರೀಶಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿ,ಯಾವುದೇ ಒಂದು ಸಂಘಟನೆಗಳು ಪ್ರಗತಿಪರವಾಗಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯ. ಸಂಘವು ಈ ಬಾರಿ ೧.೨೩ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.
ತಾಪಂ ಮಾಜಿ ಸದಸ್ಯ ಸುನಿಲ್ ಗೌಡ ಮಾತನಾಡಿ, ಸಹಕಾರ ಸಂಘದ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈ ಜೋಡಿಸಿದರೆ ಸಂಘವು ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದರು.ಸಹಕಾರ ಸಂಘದ ಉಪಾಧ್ಯಕ್ಷ ಎಂ.ಮಾರ್ಯಪ್ಪ ಬೆನ್ನೂರು ಮಾತನಾಡಿ, ಸಹಕಾರ ಸಂಘದಿಂದ ೧೯೦ ರೈತರಿಗೆ ಬೆಳೆ ಸಾಲ, ಹೈನುಗಾರಿಕೆ ಸಾಲ, ಮಧ್ಯ ಮಾವಧಿ ಸಾಲ, ಪಂಪ್‌ಸೆಟ್ ಸಾಲ, ಕೃಷಿ ಜಮೀನು ಸಾಲ, ಅಲ್ಲದೇ ಸ್ವ ಸ್ವಹಾಯ ಗುಂಪುಗಳಿಗೆ ಸಾಲವನ್ನು ನೀಡಲಾಗಿದೆ. ಇನ್ನು ಹಲವಾರು ರೈತರು ಕೃಷಿ ಚಟುವಟಿಕೆಗಳಿಗೆ ಸಾಲಗಳ ಬೇಡಿಕೆ ಇಟ್ಟಿದ್ದಾರೆ ನಿರಂತರವಾಗಿ ಸ್ಪಂದನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಪಿ.ಪಿ.ಸುನಿಲ್‌ಕುಮಾರ್ ವಾರ್ಷಿಕ ವರದಿ ಮಂಡಿಸಿದರು.ಸಹಕಾರ ಸಂಘದ ನಿರ್ದೇಶಕರಾದ ಸುರೇಶ ಮಾಧಾ ನಾಯ್ಕ, ಲೋಕ್ಯಾ ನಾಯ್ಕ, ಕೆ.ಎಸ್. ಶಿವಾಜಿರಾವ್, ಎನ್.ರಾಜು ನಾಯ್ಕ, ಮಹಾಬಲೇಶ್ವರ ನಾಯ್ಕ, ಕುಮಾರ್, ಶಿವಪ್ಪ, ರೇಖಾ, ಕೃಷ್ಣನಾಯಕ ಬಿ, ಸಂಘದ ಸಿಬ್ಬಂದಿ ಎಸ್.ಶಶಿಕುಮಾರ್, ಬಿ.ಎನ್.ಮದನ್‌ಕುಮಾರ್, ಡಿ.ಚಂದನ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.