ಗದಗ: ಮಾಧ್ಯಮಗಳ ಭರಾಟೆಯಿಂದ ಕಲೆ ಹೊಸತನದತ್ತ ಮುಖ ಮಾಡುತ್ತಿದೆ. ಆದ್ದರಿಂದ ಕಲಾ ಅಧ್ಯಯನದಲ್ಲಿ ಬದಲಾವಣೆ ತರಬೇಕು. ಕಲೆ, ಕಲಾವಿದರ ಅಸ್ತಿತ್ವಕ್ಕೆ ಸರ್ಕಾರದ ಸಹಕಾರ ಅಗತ್ಯ ಎಂದು ವಿಜಯ ಲಲಿತಕಲಾ ಸಂಸ್ಥೆ ಅಧ್ಯಕ್ಷ ಪ್ರೊ. ಅಶೋಕ ಅಕ್ಕಿ ತಿಳಿಸಿದರು.ನಗರದ ತೋಂಟದ ಸಿದ್ದಲಿಂಗ ಶ್ರೀಗಳ ಕನ್ನಡ ಭವನ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ದೃಶ್ಯ ಕಲಾವಿದರ ಸಂಘ ಹಾಗೂ ಪೂರ್ಣತಾರೆ ಜನಸೇವಾ ಸಂಸ್ಥೆ ಸಹಯೋಗದಲ್ಲಿ ಜರುಗಿದ ವಿಶ್ವಕಲಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಪದ ಚಿತ್ರಕಲೆ ಕುರಿತು ಡಾ. ವಿಜಯಲಕ್ಷ್ಮೀ ಗೇಟಿ ಉಪನ್ಯಾಸ ನೀಡಿ, ಜನಪದ ಕಲೆಗಳು ಮಾನವನ ಬದಕಿನ ತಲ್ಲಣ ಮತ್ತು ಸಂಸ್ಕೃತಿ ಸಾಂಪ್ರದಾಯಗಳನ್ನು ಬಿಂಬಿಸುತ್ತವೆ. ಅಂತಹ ಕಲೆಗಳನ್ನು ಜನಪದರು ಕೆಮ್ಮಣ್ಣು, ಸುಣ್ಣ, ಸಗಣಿಯ ಮೂಲಕ ಭಿತ್ತಿ ಹಾಗೂ ಅಂಗಳದಲ್ಲಿ ರೇಖಾಚಿತ್ರ ಮುಖಾಂತರ ವ್ಯಕ್ತಪಡಿಸುತ್ತಿದದ್ದರು.ರಂಗೋಲಿ, ಹಸೆ ಚಿತ್ತಾರದ ರಚನೆ ಆಯುರ್ವೇದದ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದ ರಂಗೋಲಿ ಕಲೆ ಮನೆ ಮನೆಯ ಮಹಿಳೆಯರ ಇಷ್ಟದ ಕಲೆಯಾಗಿದೆ. ಹಬ್ಬ ಹರಿದಿನಗಳಲ್ಲಿ ಗೋಡೆಯ ವಿನ್ಯಾಸದ ಮುಖಾಂತರ ಚಿತ್ರ ರಚನೆಯ ಸಂಭ್ರಮದಲ್ಲಿ ಜನಪದರು ಜನಪದ ಕಲೆಯಲ್ಲಿ ಮಗ್ನರಾಗುತ್ತಿದ್ದರು. ನಂತರ ಸಾಂಪ್ರದಾಯ ಕಲೆಗಳಿಗೆ ರಾಜಾಶ್ರಯ ದೊರೆತು ವಿಫುಲವಾಗಿ ಬೆಳೆದು ಬಂದವು. ಕಾಳಿಘಾಟ, ಬೂಂದಿ, ಕಿಶನಗಡ, ಮೈಸೂರು ಶೈಲಿ ಇತ್ಯಾದಿ ಸಂಪ್ರದಾಯಗಳು ಬೆಳೆದು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳಿಗೆ ಪ್ರಾಧ್ಯಾನ್ಯತೆ ಇರುವುದರಿಂದ ಲಲಿತಕಲೆಗಳಿಗೆ ಅಂಕ ನಿಗದಿಯಾದರೆ ಮಾತ್ರ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ವ್ಯಕ್ತಿಯ ಸಂಪೂರ್ಣ ವಿಕಾಸಕ್ಕೆ ಕಲೆ, ಸಾಹಿತ್ಯ, ಸಂಗೀತ ಮಹತ್ವದ್ದು ಎಂದರು.ಜಾನಪದ ವಿವಿ ಕುಲಸಚಿವ ಷಹಜಾನ ಮುದಕವಿ ಮಾತನಾಡಿ, ಕಲಾ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ. ಕಲಾ ಪೋಷಕರು, ಕಲಾ ವಿದ್ವಾಂಸರು ಕಲೆಯ ಬೆಳವಣಿಗೆಗೆ ಇಚ್ಛಾಶಕ್ತಿಯನ್ನು ಹೊಂದಬೇಕು. ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ಕ್ಷೇತ್ರದ ಬೆಳವಣಿಗೆಗೆ ಆಸಕ್ತಿ ವಹಿಸಿ ವಿಶ್ವವಿದ್ಯಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ತಿಳಿಸಿದರು.ದೃಶ್ಯ ಕಲಾವಿದರ ಸಂಘದ ಅಧ್ಯಕ್ಷ ಡಾ. ಬಿ.ಎಲ್. ಚವಾಣ ಮಾತನಾಡಿದರು. ಈ ವೇಳೆ ಎಂ.ಆರ್. ಹೆಬ್ಬಳ್ಳಿ, ಬಿ.ಕೆ. ನಿಂಬನಗೌಡರ, ಬಸವರಾಜ ನೆಲಜೇರಿ, ರಮೇಶ ಮುರಗೋಡ ಕಲಾವಿದರನ್ನು ಸನ್ಮಾನಿಸಲಾಯಿತು. ವೈಷ್ಣವಿ ರಾಠೋಡ ನೃತ್ಯ ಪ್ರದರ್ಶನ ಜನಮನ ಸೆಳೆಯಿತು. ರತ್ನಕ್ಕ ಪಾಟೀಲ, ಕೆ.ಎಚ್. ಬೇಲೂರ, ವಿಶ್ವನಾಥ ಖಾನಾಪೂರ, ಟಿ.ಬಿ. ಕರದಾನಿ, ಅನ್ನದಾನಿ ಹಿರೇಮಠ, ಮಂಜುಳಾ ವೆಂಕಟೇಶಯ್ಯ, ಅನುಸೂಯಾ ಮಿಟ್ಟಿ, ರತ್ನಾ ಪುರಂತರ, ವೀಣಾಕುಮಾರಿ ಚವಾಣ, ಪಿ.ಆರ್. ಕುಲಕರ್ಣಿ, ಶೋಭಾ, ವೀರೇಶ, ಸತೀಶ ಕುಲಕರ್ಣಿ, ಗುರುನಾಥ ಪವಾರ, ಶಶಿಕಾಂತ ಕೊರ್ಲಹಳ್ಳಿ, ರಾಜಶೇಖರ ಕರಡಿ, ಈಶ್ವರಪ್ಪ ಕುಬುಸದ, ಕು.ಶಿ. ಜಯದೇವಭಟ್, ಬಾಹುಬಲಿ ಜೈನರ್, ವಿದ್ಯಾಧರ ದೊಡ್ಡಮನಿ, ಸೈಯದಉಸ್ಮಾನ ಕೊಪ್ಪಳ, ಶೇಖಣ್ಣ ಕಳಸಾಪೂರಶೆಟ್ರ, ತಯ್ಯಬಲಿ ಹೊಂಬಳ, ಗಂಗಪ್ಪ ಮುದಗಲ್, ಪೃಧ್ವಿರಾಜ ಚವಾಣ, ವಿ.ಎಲ್. ಬೆಳಗಳಿ, ಅನ್ನಪೂರ್ಣ ಬಿದರೂರ, ದಿವ್ಯಾ ಕಲಕೋಟಿ, ರಕ್ಷಿತಾ ಗೋಟೂರ, ಪ್ರೀತಿ ಬೆಂತೂರ, ಕಾರ್ತಿಕ ಬಡಿಗೇರ, ಗಿರೀಶ ಶಿಳ್ಳಿ, ಸುರೇಶ ಮನಗೋಳಿಕರ ಮೊದಲಾದವರು ಇದ್ದರು. ಡಾ. ದತ್ತಪ್ರಸನ್ನ ಪಾಟೀಲ್ ಸ್ವಾಗತಿಸಿದರು. ಕಳಕೇಶ ಅರಕೇರಿ ಪ್ರಾರ್ಥಿಸಿದರು. ಬಸವರಾಜ ನೆಲಜೇರಿ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.