ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ಐದು ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿನ್ ಸಾಲಗಾರ ಸಾಮಾನ್ಯ ಭಾಗ-೧೨ ಕ್ಷೇತ್ರದ ಈರಣ್ಣ ಪಟ್ಟಣಶೆಟ್ಟಿ(೪೯ಮತ), ಸಾತಿಹಾಳ ಸಾಲಗಾರ ಪರಿಶಿಷ್ಟ ಪಂಗಡ ಭಾಗ-೫ ಕ್ಷೇತ್ರದ ಅಯ್ಯಪ್ಪ ನಂದಿಹಾಳ(೨೩ಮತ), ಯಾಳವಾರ ಸಾಲಗಾರ ಸಾಮಾನ್ಯ ಭಾಗ-೬ ಕ್ಷೇತ್ರದ ಸಾಹೇಬಗೌಡ ಉತ್ನಾಳ(೧೩ಮತ), ಹೂವಿನಹಿಪ್ಪರಗಿ ಸಾಲಗಾರ ಸಾಮಾನ್ಯ ಭಾಗ-೩ ಕ್ಷೇತ್ರದ ಗಿರೀಶ ಚಿಮ್ಮಲಗಿ(೨೬ಮತ), ಕುದರಿಸಾಲವಾಡಗಿ ಸಾಲಗಾರ ಮಹಿಳಾ ಭಾಗ-೪ ಕ್ಷೇತ್ರದಿಂದ ಶಂಕ್ರೆಮ್ಮ ಗೌಡರ(೧೮ಮತ)ಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಇನ್ನು, ಬಿನ್ ಸಾಲಗಾರ ಸಾಮಾನ್ಯ ಭಾಗ-೧೨ದ ಫಲಿತಾಂಶ ಬಾಕಿ ಉಳಿದಿದೆ. ಈ ಬಗ್ಗೆ ಕಲಬುರಗಿ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠದಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶಕ್ಕೆ ಒಳಪಟ್ಟು ಘೋಷಣೆ ಮಾಡಿದ್ದಾಗಿ ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕ ಚೇತನ್ ಭಾವಿಕಟ್ಟಿ ತಿಳಿಸಿದರು.ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ೧೩ ಆಡಳಿತ ಮಂಡಳಿ ಸದಸ್ಯ ಬಲ ಹೊಂದಿದ್ದು, ೧೩ ಸ್ಥಾನಗಳ ಪೈಕಿ ಎಂಟು ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ. ಉಳಿದ ೫ ಸ್ಥಾನಗಳಿಗೆ ನಡೆದ ಚುನಾವಣೆ ನಡೆಯಿತು.
ಬಸವನಬಾಗೇವಾಡಿ ಪರಿಶಿಷ್ಟ ಜಾತಿ ಸಾಲಗಾರ ಭಾಗ-೧ ಕ್ಷೇತ್ರದ ಬಾಬು ಲಮಾಣಿ, ನರಸಲಗಿ ಸಾಲಗಾರ ಹಿಂದುಳಿದ ವರ್ಗ ಅ ಭಾಗ-೨ ಕ್ಷೇತ್ರದ ಬಸಪ್ಪ ರಡ್ಡಿ, ಇಂಗಳೇಶ್ವರ ಸಾಲಗಾರ ಸಾಮಾನ್ಯ ಭಾಗ-೭ ಕ್ಷೇತ್ರದ ಸಿದ್ರಾಮಪ್ಪ ಎಮ್ಮಿ, ಮನಗೂಳಿ ಸಾಲಗಾರ ಮಹಿಳಾ ಭಾಗ-೮ ಕ್ಷೇತ್ರದ ಉಮಾಬಾಯಿ ವಿವೇಕಿ, ಮುಳವಾಡ ಸಾಲಗಾರ ಸಾಮಾನ್ಯ ಭಾಗ-೯ ಕ್ಷೇತ್ರದ ಅಣ್ಣಾಸಾಹೇಬ ಬಿರಾದಾರ, ಕೂಡಗಿ ಸಾಲಗಾರ ಹಿಂದುಳಿದ ವರ್ಗ ಬ ಭಾಗ-೧೦ ಕ್ಷೇತ್ರದ ಹುಚ್ಚಪ್ಪ ಬಾಟಿ, ಹೆಬ್ಬಾಳ ಸಾಲಗಾರ ಸಾಮಾನ್ಯ ಭಾಗ-೧೧ ಕ್ಷೇತ್ರದ ರಾಮನಗೌಡ ಪಾಟೀಲ, ಗೊಳಸಂಗಿ ಸಾಲಗಾರ ಸಾಮಾನ್ಯ ಭಾಗ-೧೩ ಕ್ಷೇತ್ರದ ದಯಾನಂದ ಹೆಬ್ಬಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪ್ರಬಲ ಸ್ಪರ್ಧೆ:
ಬಿನ್ ಸಾಲಗಾರ ಸಾಮಾನ್ಯ ಭಾಗ-೧೨ ಕ್ಷೇತ್ರಕ್ಕೆ ಪ್ರಬಲ ಸ್ಪರ್ಧೆ ಏರ್ಪಟ್ಟಿತ್ತು. ಈ ಕ್ಷೇತ್ರದಿಂದ ಈರಣ್ಣ ಪಟ್ಟಣಶೆಟ್ಟಿ, ಮಲ್ಲಪ್ಪ ಹಾರಿವಾಳ ಸ್ಪರ್ಧೆ ಮಾಡಿದ್ದರು. ಇದರಲ್ಲಿ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಈರಣ್ಣ ಪಟ್ಟಣಶೆಟ್ಟಿ ೪೯ ಮತಗಳನ್ನು ಪಡೆದು ಮೂರನೇ ಬಾರಿಗೆ ಮರು ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ವಿಜಯ ಸಾಧಿಸಿದರು. ಇದರಲ್ಲಿ ಮಲ್ಲಪ್ಪ ಹಾರಿವಾಳ ೩೧ ಮತ ಪಡೆದು ಸೋಲನ್ನು ಅನುಭವಿಸಿದರು.ವಿಜಯೋತ್ಸವಃ ಈರಣ್ಣ ಪಟ್ಟಣಶೆಟ್ಟಿ ಮರುಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳು, ಹಿತೈಷಿಗಳು, ಮುಖಂಡರು, ಕಾರ್ಯಕರ್ತರು ಪರಸ್ಪರ ಗುಲಾಲ್ ಎರಚಿ ಪಟಾಕ್ಷಿ ಸಿಡಿಸಿ ಮೆರವಣಿಗೆ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವ ಜರುಗಿತು.
ಈ ವೇಳೆ ಮಾತನಾಡಿದ ಈರಣ್ಣ ಪಟ್ಟಣಶೆಟ್ಟಿ, ಕಳೆದ ೨೦ವರ್ಷಗಳಿಂದ ರೈತ ಬಾಂಧವರ ನಿಸ್ವಾರ್ಥ ಸೇವೆಯ ಪ್ರತಿಫಲವಾಗಿ ರೈತರು ಪಿಎಲ್‌ಡಿಇ ಬ್ಯಾಂಕಿಗೆ ಮೂರನೇ ಬಾರಿಗೆ ಆಯ್ಕೆ ಮಾಡಿದ್ದು ಸಂತಸ ತಂದಿದೆ. ನಾನು ಈ ಚುನಾವಣೆಯಲ್ಲಿ ಯಾರ ಮುಂದೆಯೂ ಮತ ನೀಡುವಂತೆ ಕೇಳದೇ ಇದ್ದರೂ ಸೇವೆ ಗುರುತಿಸಿ ಮರು ಆಯ್ಕೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ರೈತರಿಗೆ ಹೆಚ್ಚಿನ ಸೇವೆ ಮಾಡಲು ಸದಾ ಬದ್ಧ. ಉಳಿದ ೧೨ ಸ್ಥಾನಗಳಿಗೂ ನಮ್ಮವರೇ ಆಯ್ಕೆಯಾಗಿದ್ದಾರೆ. ಕಲಬುರಗಿ ಉಚ್ಛನ್ಯಾಯಾಲಯದ ಪೀಠಕ್ಕೆ ಹೋದ ಪ್ರಕರಣದ ಮತಎಣಿಕೆ ಬಂದರೂ ಯಾವುದೇ ಪರಿಣಾಮ ಬೀರದು ಎಂದರು.ಸಂಗಣ್ಣ ಕಲ್ಲೂರ, ಶಂಕರಗೌಡ ಬಿರಾದಾರ, ಲೋಕನಾಥ ಅಗರವಾಲ, ರವಿ ಪಟ್ಟಣಶೆಟ್ಟಿ, ಮಹಾಂತೇಶ ಆದಿಗೊಂಡ, ಸಂಕನಗೌಡ ಪಾಟೀಲ, ಸಿ.ಎಸ್.ಪಾಟೀಲ, ಎಂ.ಬಿ.ತೋಟದ, ಸುರೇಶಗೌಡ ಪಾಟೀಲ, ಹರೀಶ ಅಗರವಾಲ, ರವಿ ರಾಠೋಡ, ಕಾಶೀನಾಥ ರಾಠೋಡ, ವ್ಹಿ.ಬಿ.ಮರ್ತುರ, ಸಾಹೇಬಗೌಡ ಉತ್ನಾಳ, ರಮಜಾನ ಮುಜಾವರ, ಗುರುನಗೌಡ ಪಾಟೀಲ, ಸಿದ್ರಾಮಪ್ಪ ಪಾತ್ರೋಟಿ, ಸಂಗಯ್ಯ ಕಾಳಹಸ್ತೇಶ್ವರಮಠ, ಅಶೋಕ ಗುಳೇದ, ಮಲ್ಲು ಒಡೆಯರ, ಶ್ರೀಕಾಂತ ಪಟ್ಟಣಶೆಟ್ಟಿ, ಪ್ರಕಾಶ ಪಡಶೆಟ್ಟಿ, ಶಾಂತು ಪಡಶೆಟ್ಟಿ, ದಸ್ತಗೀರ ವಜ್ಜಲ, ಮನ್ನಾನ ಶಾಬಾದಿ, ಸಂಗಮೇಶ ಜಾಲಗೇರಿ, ಸಂಗನಗೌಡ ಚಿಕ್ಕೊಂಡ ಸೇರಿದಂತೆ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು.