ಸಾರಾಂಶ
ತಾಲೂಕಿಗೆ ಪೊಲೀಸ್ ಉಪವಿಭಾಗ ಎಂದು ಡಿವೈಎಸ್ಪಿ ಸಬ್ ಡಿವಿಷನ್ ಮಾಡಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳ ಹಿಂದೆ ಅನೇಕ ಉಪವಿಭಾಗಗಳು ಆರಂಭವಾದ ಸಮಯದಲ್ಲಿ ಮಾಡಬಾರದು ಎಂದು ಮನವಿ ಸಲ್ಲಿಸಿದ್ದೆ. ಆದರೆ ಇಂದು ಕಾಂಗ್ರೆಸ್ ಸರ್ಕಾರ ಜನಪ್ರತಿನಿಧಿಗಳು, ಜನಸಾಮಾನ್ಯರ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಕ್ರಮ ಕೈಗೊಂಡಿದೆ ಎಂದು ಶಾಸಕ ಹರೀಶ್ ಪೂಂಜ ಖಂಡಿಸಿದ್ದಾರೆ.
ಜನಪ್ರತಿನಧಿಗಳು, ಜನಸಾಮಾನ್ಯರ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ: ಶಾಸಕ ಆರೋಪ
ಬೆಳ್ತಂಗಡಿ: ತಾಲೂಕಿಗೆ ಪೊಲೀಸ್ ಉಪವಿಭಾಗ ಎಂದು ಡಿವೈಎಸ್ಪಿ ಸಬ್ ಡಿವಿಷನ್ ಮಾಡಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳ ಹಿಂದೆ ಅನೇಕ ಉಪವಿಭಾಗಗಳು ಆರಂಭವಾದ ಸಮಯದಲ್ಲಿ ಮಾಡಬಾರದು ಎಂದು ಮನವಿ ಸಲ್ಲಿಸಿದ್ದೆ. ಆದರೆ ಇಂದು ಕಾಂಗ್ರೆಸ್ ಸರ್ಕಾರ ಜನಪ್ರತಿನಿಧಿಗಳು, ಜನಸಾಮಾನ್ಯರ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಕ್ರಮ ಕೈಗೊಂಡಿದೆ ಎಂದು ಶಾಸಕ ಹರೀಶ್ ಪೂಂಜ ಖಂಡಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಸರ್ಕಲ್ ಇನ್‌ಸ್ಪೆಕ್ಟರ್ಗಳಿದ್ದಾರೆ. ಇಂದು ಪ್ರತಿ ದಿನದ ಎಲ್ಲ ಆಗುಹೋಗುಗಳು ಡಿವೈ ಎಸ್ಪಿ ಕಚೇರಿಯಿಂದ ಕಂಟ್ರೋಲ್ ನಡೆಯುತ್ತದೆ. ಹೀಗಾದಾಗ ಎಲ್ಲ ವ್ಯವಸ್ಥೆಗೆ,ಕೆಲಸಕ್ಕೆ ಜನಸಾಮಾನ್ಯರು ಅಲೆಯುವ ಕೆಲಸ ಮಾಡಬೇಕಾಗುತ್ತದೆ. ನಿತ್ಯದ ಶಾಂತಿಯುತ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಸರ್ಕಾರ ಪ್ರತಿ ಠಾಣೆಗೆ ದಿನಕ್ಕಿಷ್ಟು ಪ್ರಕರಣ ದಾಖಲಿಸಬೇಕೆಂದು ಟಾರ್ಗೆಟ್ ನೀಡಿದೆ. ಇದರಿಂದ ದಿನನಿತ್ಯ ದುಡಿಯುವ ಮಂದಿಗೆ ಫೈನ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರಲ್ಲಿ ಕೇಳಿದರೆ ಸರಕಾರದ ಸೂಚನೆ ಎನ್ನುತ್ತಾರೆ ಎಂದರು.ಬೆಳ್ತಂಗಡಿ ತಾಲೂಕಿನಲ್ಲಿ ಅರಣ್ಯ ಇಲಾಖೆಯ ದೌರ್ಜನ್ಯ ಮತ್ತೆ ಹೆಚ್ಚಾಗಿದೆ. ಮಲವಂತಿಗೆ, ಶಿಬಾಜೆಯಲ್ಲಿ ಕೃಷಿಕರ ಕೃಷಿ ನಾಶ ಮಾಡಿ ಒಕ್ಕಲೆಬ್ಬಿಸುವ ಕೆಲಸ ಮಾಡಿಸಿದೆ. ಜಂಟಿ ಸರ್ವೇ ನಡೆಸಿದಾಗ ಸುಮಾರು 700 ಹೆಕ್ಟೇರ್ ಹೆಚ್ಚುವರಿ ಭೂಮಿ ಸಿಕ್ಕಿದೆ. ಅದನ್ನು ಕೃಷಿಕರಿಗೆ ನೀಡಬಹುದಾಗಿತ್ತು. ಆದರೆ ಇದನ್ನು ನೀಡಿಲ್ಲ. ಹಾಗಾಗಿ ಕೃಷಿಕರನ್ನು ಒಕ್ಕಲೆಬ್ಬಿಸುವ ಮೊದಲು ಈ ಕೆಲಸ ಮಾಡಬೇಕಿದೆ ಎಂದರು.ಬೆಳ್ತಂಗಡಿ ತಾಲೂಕಿನ ಪ್ರಮುಖ ರಸ್ತೆಗಳು ಹಾಳಾಗಿ ಹೋಗಿವೆ. ಬೆಳ್ತಂಗಡಿ-ಮೂಲ್ಕಿ ರಸ್ತೆಗೆ 18 ಲಕ್ಷ ರೂ. ಅನುದಾನ, ಗೋಳಿತೊಟ್ಟು-ದಿಡುಪೆ 41 ಕಿ.ಮೀ. 30 ಲಕ್ಷ ರೂ. ನಿಗದಿ ಪಡಿಸಿದೆ. ರಸ್ತೆಗೆ ಹೊಂಡ ಮುಚ್ಚಲೂ ಅನುದಾನ ನೀಡದ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರದ್ದಾಗಿದೆ. ನಿರ್ವಹಣೆಗೂ ಹಣ ನೀಡದ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರದ್ದಾಗಿದೆ ಎಂದು ದೂರಿದರು. ಈಗಾಗಲೆ ರಸ್ತೆ ಕಾಮಗಾರಿ ಸರಿಯಾಗಿ ನಡೆಸದಿದ್ದಲ್ಲಿ ನಾಗರಿಕರು ಎಚ್ಚೆತ್ತು ಸಂಬಂಧಪಟ್ಟವರ ಅಥವಾ ನನ್ನ ಗಮನಕ್ಕೆ ತರುವಂತೆ ಶಾಸಕರು ತಿಳಿಸಿದರು.ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಸುಮಾರು 7 ಬಾರಿ ಸರಕಾರಕ್ಕೆ ಮನವಿ ಮಾಡಿದ್ದೇನೆ. ಆದರೆ ಅನುದಾನ ಒದಗಿಸಿಲ್ಲ. ಸರ್ಕಾರ ನನಗೆ ನೀಡಿರುವ 12 ಕೋ.ರೂ. ಎಸ್.ಎಚ್.ಡಿ.ಪಿ. ಅನುದಾನವನ್ನು ಉಪ್ಪಿನಂಗಡಿ ರಸ್ತೆಗೆ ಮೀಸಲಿರಿಸಿದ್ದೇನೆ. ಸರ್ಕಾರ ಟೆಂಡರ್ ಕರೆದಾಗ ರಸ್ತೆ ಸರಿಪಡಿಸುವ ಭರವಸೆ ನೀಡುತ್ತೇನೆ. ಬೆಳ್ತಂಗಡಿ ಪ.ಪಂ. ಸಂಬಂಧಿಸಿದಂತೆ ಡಾ.ವೀರೇಂದ್ರ ಹೆಗ್ಗಡೆಯವರು ರಾಜ್ಯದಭಾ ನಿಧಿಯಿಂದ 2 ಕೋಟಿ ರು. ಅನುದಾನವನ್ನು ಹುಣ್ಸೆಕಟ್ಟೆ ಮಲ್ಲೊಟ್ಟು ರಸ್ತೆಗೆ ನೀಡಿದ್ದಾರೆ. ಈ ಮೂಲಕ ಅಭಿವೃದ್ಧಿ ನಡೆಸಲಾಗುವುದು ಎಂದರು.ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ಕೋಟ್ಯಾನ್. ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾ ಕಾರಂತ್, ಉಪಾಧ್ಯಕ್ಷ ರವಿ ಬರಮೇಲು, ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))