ಕೆಟ್ಟ ಹವ್ಯಾಸಗಳು ಹಿತ ಎನಿಸಿದರೂ ಮುಂದೆ ಕಾಯಿಲೆಯಾಗಿ ಕಾಡುತ್ತದೆ

| Published : Sep 02 2024, 02:11 AM IST

ಕೆಟ್ಟ ಹವ್ಯಾಸಗಳು ಹಿತ ಎನಿಸಿದರೂ ಮುಂದೆ ಕಾಯಿಲೆಯಾಗಿ ಕಾಡುತ್ತದೆ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದಲ್ಲಿ ಕೆಟ್ಟ ಹವ್ಯಾಸಗಳು ಎಷ್ಟೇ ಹಿತ ಎನಿಸಿದರೂ ಮುಂದೊಂದು ದಿನ ಕಾಯಿಲೆಯಾಗಿ ಕಾಡುತ್ತವೆ. ಒಳ್ಳೆಯ ಹವ್ಯಾಸಗಳು ಎಷ್ಟೇ ಕಹಿ ಎನಿಸಿದರೂ ಮುಂದೊಂದು ದಿನ ಜೀವ ರಕ್ಷಕ ಔಷಧಿಯಾಗಿ ಕಾಪಾಡುತ್ತವೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆಯ ಹಿರಿಯ ಸದಸ್ಯ ಪ್ರಭಾಕರ್‌ರಾವ್ ಮಂಗಳೂರ್ ಹೇಳಿದರು.

ಹಾವೇರಿ: ಜೀವನದಲ್ಲಿ ಕೆಟ್ಟ ಹವ್ಯಾಸಗಳು ಎಷ್ಟೇ ಹಿತ ಎನಿಸಿದರೂ ಮುಂದೊಂದು ದಿನ ಕಾಯಿಲೆಯಾಗಿ ಕಾಡುತ್ತವೆ. ಒಳ್ಳೆಯ ಹವ್ಯಾಸಗಳು ಎಷ್ಟೇ ಕಹಿ ಎನಿಸಿದರೂ ಮುಂದೊಂದು ದಿನ ಜೀವ ರಕ್ಷಕ ಔಷಧಿಯಾಗಿ ಕಾಪಾಡುತ್ತವೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆಯ ಹಿರಿಯ ಸದಸ್ಯ ಪ್ರಭಾಕರ್‌ರಾವ್ ಮಂಗಳೂರ್ ಹೇಳಿದರು.ತಾಲೂಕಿನ ಕಬ್ಬೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏರ್ಪಡಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದುಶ್ಚಟಗಳು ಪ್ರಾರಂಭವಾಗಿ ಮುಂದೆ ವ್ಯಸನವಾಗುವವು, ಚಟಗಳನ್ನು ಹೇಗಾದರೂ ಮಾಡಿ ಕಳೆದುಕೊಳ್ಳಬಹುದು. ಆದರೆ ವ್ಯಸನದಿಂದ ದೂರವಾಗುವುದು ಕಷ್ಟ ಎಂದು ಪ್ರಭಾಕರ್ ತಿಳಿಸಿದರು.ಸಾಹಿತಿ ಹನುಮಂತಗೌಡ ಗೊಲ್ಲರ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಆತಂಕಕಾರಿ ವಿಷಯವೆಂದರೆ ಪ್ರತಿವರ್ಷ ಭಾರತದಲ್ಲಿ ೫೫೦೦೦ ಅಪ್ರಾಪ್ತರು ಗುಟ್ಕಾ ವ್ಯಸನಿಗಳಾಗುತ್ತಾರೆ, ಒಂದು ಬಾರಿ ಗುಟ್ಕಾ ಸೇವನೆಯಿಂದ ನಾಲ್ಕು ಸಾವಿರ ವಿಧವಾದ ರಾಸಾಯನಿಕಗಳು ನಮ್ಮ ದೇಹ ಸೇರುತ್ತವೆ. ಗರ್ಭಿಣಿಯರು ಬೇರೆಯವರು ಬಿಟ್ಟ ಹೊಗೆ ಸೇವಿಸಿದರೆ ಗರ್ಭಸ್ತ ಶಿಶುವಿಗೆ ಕ್ಯಾನ್ಸರ್ ತಗಲುವ ಅಪಾಯವಿದೆ, ದೇಶದ ಅತ್ಯಂತ ದೊಡ್ಡ ಸಂಪತ್ತು ಮಾನವ ಸಂಪತ್ತು, ಅದೇ ಕುಲಗೆಟ್ಟು ಹೋಗುತ್ತಿದೆ ಎಂದು ಹೇಳಿ, ವಿದ್ಯಾರ್ಥಿಗಳಿಗಿಂದ ಸ್ವಾಸ್ಥ್ಯ ಸಂಕಲ್ಪ ಪ್ರತಿಜ್ಞೆ ಮಾಡಿಸಿದರು.ಯೋಜನಾಧಿಕಾರಿ ನಾರಾಯಣ್ ಜಿ ಮಾತನಾಡಿ, ಧರ್ಮಸ್ಥಳ ಪೂಜ್ಯರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇದು ಮಹತ್ವದ್ದಾಗಿದ್ದು, ಹಳಿ ತಪ್ಪುತ್ತಿರುವ ಯುವ ಜನಾಂಗಕ್ಕೆ ಅರಿವು ಮೂಡಿಸುವುದು ಇಂದು ಅಗತ್ಯ ಎಂದರು.ಮುಖ್ಯ ಶಿಕ್ಷಕ ಶಿವಪ್ಪ ತಿಪ್ಪಣ್ಣನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವ ಜನ್ಮ ದೊಡ್ಡದು, ಅದನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಉತ್ತಮ ಹವ್ಯಾಸಗಳು ವ್ಯಕ್ತಿತ್ವ ವಿಕಾಸಕ್ಕೆ ಪೂರಕ, ಮಕ್ಕಳು ಸಚ್ಚಾರಿತ್ರವಂತರಾಗಬೇಕು ಎಂದು ಹೇಳಿದರು.ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಹಿರೇಮಠ, ಶಿಕ್ಷಕರಾದ ಜಿ.ಎನ್. ನೀಲಗಂಟಿ, ಎಸ್.ಸಿ. ಕಲ್ಮನಿ, ಎಸ್.ಎಂ. ಹುಲಗೇರಿ, ಎಸ್.ಜಿ. ವಾದೋನಿ, ನಾಗರಾಜ್, ಸೇವಾ ಪ್ರತಿನಿಧಿ ಪುಷ್ಪ ಹೊನ್ನತ್ತಿ ಮತ್ತಿತರರು ಇದ್ದರು. ಸಿಂಚನ, ಕವಿತಾ ಸಂಗಡಿಗರು ಪ್ರಾರ್ಥಿಸಿದರು. ಮೇಲ್ವಿಚಾರಕಿ ಸುವನ್ ಸ್ವಾಗಸಿದರು. ಗುರುಮಾತೆ ವೀರಮ್ಮ ಪ್ರಸಾದಿಮಠ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಿ.ಸಿ. ಲಮಾಣಿ ವಂದಿಸಿದರು.