ಎಚ್ಡಿಕೆ ಗೆಲುವಿಗೆ ಪ್ರತಿ ಬೂತ್ ಹೆಚ್ಚು ಲೀಡ್ ಮುಖ್ಯ: ಜಿ.ಮುನಿರಾಜು

| Published : Apr 13 2024, 01:09 AM IST / Updated: Apr 13 2024, 12:38 PM IST

ಎಚ್ಡಿಕೆ ಗೆಲುವಿಗೆ ಪ್ರತಿ ಬೂತ್ ಹೆಚ್ಚು ಲೀಡ್ ಮುಖ್ಯ: ಜಿ.ಮುನಿರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಬೂತ್ ನಲ್ಲಿ 370ಕ್ಕೂ ಹೆಚ್ಚು ಲೀಡ್ ಪಡೆಯುವುದು ಬಿಜೆಪಿ ಪಕ್ಷದ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಮುಖಂಡರು ಕೆಲಸ ಮಾಡಬೇಕು. ಮತದಾನಕ್ಕೆ 14 ದಿನಗಳು ಬಾಕಿ ಇದ್ದು, ಪ್ರಚಾರಕ್ಕೆ ಹೆಚ್ಚಿನ ಸಮಯ ನೀಡಬೇಕು.

 ಹಲಗೂರು :  ಮಂಡ್ಯ ಲೋಕಸಭಾ ಚುನಾವಣಾ ಜೆಡಿಎಸ್- ಬಿಜೆಪಿ ಮೈತ್ರಿ ಎಚ್.ಡಿ.ಕುಮಾರಸ್ವಾಮಿ ಗೆಲುವಿಗೆ ಪ್ರತಿ ಬೂತ್ ನಲ್ಲಿ 370ಕ್ಕೂ ಹೆಚ್ಚು ಲೀಡ್ ಪಡೆಯುವುದು ಮುಖ್ಯವಾಗಿದೆ ಎಂದು ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಮುನಿರಾಜು ಕರೆ ನೀಡಿದರು.

ಹಲಗೂರಿನ ಮುತ್ತತ್ತಿ ರಸ್ತೆಯ ಕಾಳಿಕಾಂಭ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಎಚ್ .ಡಿ.ಕುಮಾರಸ್ವಾಮಿ ಗೆಲುವಿಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.

ಪ್ರತಿ ಬೂತ್ ನಲ್ಲಿ 370ಕ್ಕೂ ಹೆಚ್ಚು ಲೀಡ್ ಪಡೆಯುವುದು ಬಿಜೆಪಿ ಪಕ್ಷದ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಮುಖಂಡರು ಕೆಲಸ ಮಾಡಬೇಕು. ಮತದಾನಕ್ಕೆ 14 ದಿನಗಳು ಬಾಕಿ ಇದ್ದು, ಪ್ರಚಾರಕ್ಕೆ ಹೆಚ್ಚಿನ ಸಮಯ ನೀಡಬೇಕು ಎಂದು ಸಲಹೆ ನೀಡಿದರು.

ಏ.13 ರಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮಳವಳ್ಳಿ ತಾಲೂಕಿನಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಸದುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.

ಈ ವೇಳೆ ಬಿಜೆಪಿ ಜಿಲ್ಲಾ ಚುನಾವಣಾ ಉಸ್ತುವಾರಿ ರೂಪ, ಜಿಲ್ಲಾ ಸಂಯೋಜಕ ಕೃಷ್ಣೇಗೌಡ, ತಾಲೂಕು ಘಟಕದ ಅಧ್ಯಕ್ಷ ಕೃಷ್ಣ, ಜಿಲ್ಲಾ ಸಹ ವಕ್ತಾರ ಎಚ್.ಬಿ.ಶಿವಲಿಂಗಸ್ವಾಮಿ, ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ಬಾಲಚಂದ್ರ, ಪ್ರಧಾನ ಕಾರ್ಯದರ್ಶಿ ನಾಗೇಶ್, ಯುವ ಮೋರ್ಚಾ ಅಧ್ಯಕ್ಷ ಅಂಜನ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋದಿ ರವಿ, ಮಹೇಶ್, ಗಂಗಾಧರ್ ಸೇರಿ ಹಲವರು ಇದ್ದರು.