ಸಂಘಟನೆಗಳಿಂದ ಮಾತ್ರ ಸೌಲಭ್ಯಗಳನ್ನು ಪಡೆಯಲು ಸಾಧ್ಯ

| Published : Nov 22 2024, 01:16 AM IST

ಸಾರಾಂಶ

ಸಮಾಜದಲ್ಲಿ ಸಂಘಟನೆಗಳಿಂದ ಮಾತ್ರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್ ತಿಳಿಸಿದರು. ಜನರು ಜಾತಿ ಜಾತಿಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಎಲ್ಲರೂ ಒಂದೇ ಎಂಬ ಭಾವನೆ ಅನುಸರಿಸಿ ನಿಜವಾದ ಪ್ರತಿಭಾವಂತರನ್ನು ಬೆಂಬಲಿಸುವ ಕೆಲಸ ಮಾಡಬೇಕು. ಸಂಘಟನೆ ಹೆಚ್ಚು ಬಲ ಪಡೆದುಕೊಂಡರೆ ಸರ್ಕಾರಗಳ ಯೋಜನೆಗಳನ್ನು ಪ್ರಶ್ನಿಸುವ ಮತ್ತು ಸವಲತ್ತುಗಳನ್ನು ಪಡೆಯಲು ಮುಂದಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸಮಾಜದಲ್ಲಿ ಸಂಘಟನೆಗಳಿಂದ ಮಾತ್ರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್ ತಿಳಿಸಿದರು.ಅವರು ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ನಡೆದ ಕರ್ನಾಟಕ ದಲಿತ ಸಮನ್ವಯ ಸಮಿತಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಮಾಜದಲ್ಲಿ ಜಾತಿವ್ಯವಸ್ಥೆ ಮಿತಿಮೀರಿದ್ದು ರಾಜಕೀಯದಲ್ಲಿ ಜಾತಿ ವ್ಯವಸ್ಥೆ ತಾಂಡವವಾಡುತ್ತಿದೆ, ಜನರು ಜಾತಿ ಜಾತಿಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಎಲ್ಲರೂ ಒಂದೇ ಎಂಬ ಭಾವನೆ ಅನುಸರಿಸಿ ನಿಜವಾದ ಪ್ರತಿಭಾವಂತರನ್ನು ಬೆಂಬಲಿಸುವ ಕೆಲಸ ಮಾಡಬೇಕು. ಸಂಘಟನೆ ಹೆಚ್ಚು ಬಲ ಪಡೆದುಕೊಂಡರೆ ಸರ್ಕಾರಗಳ ಯೋಜನೆಗಳನ್ನು ಪ್ರಶ್ನಿಸುವ ಮತ್ತು ಸವಲತ್ತುಗಳನ್ನು ಪಡೆಯಲು ಮುಂದಾಗುತ್ತದೆ ಎಂದರು.

ಹೆಚ್ಚಾಲೆ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶಂಕರೇಗೌಡ ಮಾತನಾಡಿ, ಯಾವುದೇ ಸಂಘಟನೆ ಸ್ವಹಿತಾಸಕ್ತಿಯಿಂದ ಹೊರತಾಗಿರಬೇಕು. ಜ್ವಲಂತ ಸಮಸ್ಯೆಗಳಾದ ಬಗ್ಗೆ ಚರ್ಚೆ ಮಾಡಿ ಪರಿಹಾರಗಳನ್ನು ಕಂಡುಕೊಳ್ಳುವ ಈ ಸಮಯದಲ್ಲಿ ಕ್ಷುಲ್ಲಕ ಕಾರಣಗಳಿಗೆ ಮಾತನಾಡುವಂತಾಗಿದೆ. ದ್ವೇಷಮಯದ ಇಂದಿನ ಕಾಲದಲ್ಲಿ ನಮ್ಮ ದಾರ್ಶನಿಕರ ಚಿಂತನೆಗಳು ಪ್ರಸ್ತುತವಾಗಿವೆ ಎಂದರು.

ರಾಜ್ಯದಲ್ಲಿ 130 ಮಾದರಿಯ ಜನಪದ ಕಲೆಗಳಿದ್ದು ಇಂದು ಅನೇಕ ಕಲೆಗಳು ನಶಿಸಿಹೋಗಿವೆ. ಜನಪದ ಕಲೆಗಳನ್ನು ಸರ್ಕಾರವೂ ಸೇರಿದಂತೆ ಎಲ್ಲರೂ ನಿರ್ಲಕ್ಷಿಸುತ್ತಿರುವ ಪರಿಣಾಮ ಮೂಲೆಗುಂಪಾಗುತ್ತಿವೆ. ಜನಪದ ಕಲಾವಿದರು ಸರ್ಕಾರದ ಅನುದಾನವನ್ನೇ ನಂಬಿ ಬದುಕುವಂತಾಗಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಹಸಿಲ್ದಾರ್ ನವೀನ್‌ಕುಮಾರ್, ಶಂಕರೇಗೌಡ, ಜಿಲ್ಲಾ ಸಂಚಾಲಕ ದಿಂಡಗೂರು ಗೋವಿಂದರಾಜ್, ವೈದ್ಯಾಧಿಕಾರಿ ಡಾ.ವಿ.ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ದೀಪಿ, ಪುರಸಭಾ ಅಧ್ಯಕ್ಷೆ ಬನಶಂಕರಿ ರಘು, ತಾಲೂಕು ಕಸಪ ಅಧ್ಯಕ್ಷ ಎಚ್. ಎನ್. ಲೋಕೇಶ್, ಉದ್ಯಮಿ ಆನಂದ್‌ಗೌಡ ಡಿ. ಎಸ್, ರೈತ ಸಂಘದ ಅಧ್ಯಕ್ಷರಾದ ಮಾಳೇನಹಳ್ಳಿ ಹರೀಶ್, ರಾಮಚಂದ್ರು, ಸಂಘದ ಮುಖಂಡರಾದ ಜಬೀಉಲ್ಲಾಬೇಗ್, ರೋಹಿತ್‌ ಮಡಿವಾಳ್, ಪಾರ್ಥ ಮತ್ತಿತರಿದ್ದರು.