ಕನ್ನಡಪ್ರಭ ವಾರ್ತೆ ಎಚ್.ಡಿ .ಕೋಟೆಶುಂಠಿ ಬೆಳೆಗೆ ಕಳೆನಾಶಕ ಸಿಂಪಡಣೆ ವೇಳೆ ರೈತನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಜಿ.ಬಿ. ಸರಗೂರು ಗ್ರಾಮದಲ್ಲಿ ಜರುಗಿದೆ.ನಾಗೇಶ್ (42) ಮೃತಪಟ್ಟವರು. ಬೆಳಗ್ಗೆ ಹೊಲಕ್ಕೆ ಹೋದ ರೈತ ನಾಗೇಶ್‌, ಮಧ್ಯಾಹ್ನವರೆಗೂ ಮನೆಗೆ ಮರಳದ ಹಿನ್ನೆಲೆ ಕುಟುಂಬಸ್ಥರು ಭೇಟಿ ನೀಡಿದಾಗ ಆತ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಔಷಧ ಸಿಂಪಡಿಸಿರುವುದೇ ಸಾವಿಗೆ ಕಾರಣ ಎನ್ನಲಾಗಿದೆ. ಜೀವಮಾರಕ ಔಷಧಿಗಳನ್ನು ಸರ್ಕಾರವು ನಿಷೇಧಿಸಬೇಕು ಹಾಗೂ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.----------------