ಮಾ.19 ರಿಂದ ಆರಂಭಗೊಂಡ ದತ್ತ ಮಾಯಿಜಾತ್ರಾ ಮಹೋತ್ಸವ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಶ್ರೀ ದತ್ತ ಮಹಾಯಾಗ, ಶ್ರೀ ಚಂಡಿಕಾ ಮಹಾಯಾಗದ ಮಹಾಪೂರ್ಣಾಹುತಿ ಮತ್ತು ಶ್ರೀ ದತ್ತಾತ್ರೇಯ ಸ್ವಾಮಿಯ ಮಹಾರಥೋತ್ಸವದೊಂದಿಗೆ ತಾಲೂಕಿನ ಸಿರ್ಗಾಪುರದ ಶ್ರೀ ಗುರುದತ್ತ ಚೈತನ್ಯ ಶೋಡಶಿ ಸೇವಾ ಆಶ್ರಮದಲ್ಲಿ ಕಳೆದ ಹತ್ತು ದಿನಗಳಿಂದ ನಡೆದ ಶ್ರೀ ದತ್ತ ಮಾಯಿ ಜಾತ್ರಾ ಮಹೋತ್ಸವ ಮತ್ತು ವಸಂತ ನವರಾತ್ರಿಉತ್ಸವ ಶನಿವಾರ ಸಂಪನ್ನಗೊಂಡಿತು.ಮಾ.19 ರಿಂದ ಆರಂಭಗೊಂಡ ದತ್ತ ಮಾಯಿಜಾತ್ರಾ ಮಹೋತ್ಸವ ಮತ್ತು ವಸಂತ ನವರಾತ್ರಿ ಉತ್ಸವದಲ್ಲಿ ನಾಂದಿ, ಗಣಪತಿ ಪೂಜೆ, ಗಣಪತಿ ಹೋಮ, ಚಂಡಿಕಾ ಹೋಮ, ಸಾಮೂಹಿಕ ಕಾಳ ಸರ್ಪಶಾಂತಿ ,ಆಶ್ಲೇಷ ಬಲಿ, ಸಾಮೂಹಿಕ ದುರ್ಗಾ ದೀಪ ನಮಸ್ಕಾರ, ಪ್ರತಿದಿನ ಪಲ್ಲಕ್ಕಿಉತ್ಸವ, ದತ್ತ ಮೂಲ ಮಂತ್ರಜಪ, ಚಂಡಿಕಾ ಪಾರಾಯಣ, ದುರ್ಗಾ ಸಪ್ತಶತಿ ಪಾರಾಯಣ, ಭಕ್ತರಿಂದ ಭಜನೆ, ನಾಮ ಸಂಕೀರ್ತನೆ ಸೇರಿದಂತೆ ಹತ್ತು ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಶನಿವಾರ ಬೆಳಗ್ಗೆ ಆಶ್ರಮದಲ್ಲಿ ಗಂಗಾ ಪೂಜೆ, ಲಕ್ಷ ಸಂಖ್ಯೆ ಶ್ರೀ ದತ್ತಾತ್ರೇಯ ಮಹಾಯಾಗ, ಶ್ರೀ ಚಂಡಿಕಾ ಮಹಾಯಾಗ, ಶ್ರೀ ದತ್ತಾತ್ರೇಯ ವಿಗ್ರಹಕ್ಕೆ, ದತ್ತ ಪಾದುಕೆಗಳಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ನಡೆದವು. ಇದೇ ವೇಳೆ ಭಕ್ತರಿಂದ ಸಾಮೂಹಿಕ ಭಜನೆ, ನಾಮ ಸಂಕೀರ್ತನೆ, ವೈದಿಕ ಬಳಗದಿಂದ ಶ್ರೀ ಸೂಕ್ತ, ದುರ್ಗಾ ಸೂಕ್ತ ಪಠಣ ನೆರವೇರಿತು,ಮಧ್ಯಾಹ್ನ ಗುರು ಶ್ರೀ ಅಶೋಕ ಶರ್ಮಅವರ ನೇತೃತ್ವದಲ್ಲಿದತ್ತ ಮಹಾಯಾಗ ಮತ್ತು ಚಂಡಿಕಾ ಮಹಾಯಾಗದ ಮಹಾ ಪೂರ್ಣಾಹುತಿ ಜರುಗಿತು, ನಂತರ ನಾದಸ್ವರ, ಕೇರಳದ ಪಂಚವಾದ್ಯ, ನೂರಾರು ಭಕ್ತರ ನಡುವೆದತ್ತ ವಿಗ್ರಹದಅಡ್ಡ ಪಲ್ಲಕ್ಕಿಉತ್ಸವ,ಪ್ರಾಕಾರೋತ್ಸವ, ಮಹಾಮಂಗಳಾರತಿ, ಉಯ್ಯಾಲೋತ್ಸವ, ಸಾರ್ವಜನಿಕಅನ್ನ ಸಂತರ್ಪಣೆ ನೆರವೇರಿತು.ಈ ವೇಳೆ ಮಾತನಾಡಿದ ಆಶ್ರಮದ ಪ್ರಧಾನ ಗುರು ಶ್ರೀ ಅಶೋಕ್ ಶರ್ಮ, ಲೋಕ ಕಲ್ಯಾಣಾರ್ಥವಾಗಿ ಪ್ರತಿ ವರ್ಷ ಆಶ್ರಮದಲ್ಲಿ ದತ್ತ ಮಾಯಿ ಜಾತ್ರೆ ಮತ್ತು ವಸಂತ ನವರಾತ್ರಿ ಉತ್ಸವವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.ಸಂಜೆ ನಾದಸ್ವರ, ಕೇರಳದ ಪಂಚವಾದ್ಯ, ಮತ್ತುಗ್ರಾಮೀಣ ವಾದ್ಯಗಳು, ಸಾಂಸ್ಕೃತಿಕ ಕಲಾತಂಡಗಳು,ನೂರಾರು ಭಕ್ತರ ಹರ್ಷೋದ್ಗಾರದ ನಡುವೆ ಶ್ರೀ ದತ್ತಾತ್ರೇಯ ಸ್ವಾಮಿಯ ಮಹಾ ರಥೋತ್ಸವ, ಬನ್ನಿ ಪೂಜೆ ಜರುಗಿತು. 10 ದಿನಗಳ ಕಾಲ ನಡೆದ ಉತ್ಸವದಲ್ಲಿ ನಗರ, ಸುತ್ತಮುತ್ತಲ ಗ್ರಾಮಗಳ ಮತ್ತು ಹೊರ ಊರುಗಳ ಭಕ್ತರು ಪಾಲ್ಗೊಂಡಿದ್ದರು.