ಚಿಕ್ಕಮಗಳೂರುಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಆಗುತ್ತಿರುವ ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ರಸ ಗೊಬ್ಬರದ ಬೆಲೆ ಹೆಚ್ಚುವ ಮತ್ತು ಗೊಬ್ಬರ ಅಭಾವದ ಆತಂಕದಿಂದ ರೈತರು ಭಾರೀ ಪ್ರಮಾಣದ ಗೊಬ್ಬರ ಖರೀದಿಸಿ ಸಂಗ್ರಹಿಸಲು ಮುಂದಾಗಿದ್ದಾರೆ.
ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ತಿರುಮಲೇಶ್ ಮಂಗಳವಾರ ಆನ್‌ಲೈನ್ ಮೂಲಕ ಗೊಬ್ಬರ ಮಾರಾಟಗಾರರೊಂದಿಗೆ ಸಭೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಆಗುತ್ತಿರುವ ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ರಸ ಗೊಬ್ಬರದ ಬೆಲೆ ಹೆಚ್ಚುವ ಮತ್ತು ಗೊಬ್ಬರ ಅಭಾವದ ಆತಂಕದಿಂದ ರೈತರು ಭಾರೀ ಪ್ರಮಾಣದ ಗೊಬ್ಬರ ಖರೀದಿಸಿ ಸಂಗ್ರಹಿಸಲು ಮುಂದಾಗಿದ್ದಾರೆ.
ಅದರಲ್ಲಿ ಕಾಫಿ ಪ್ಲಾಂಟರ್ ಮತ್ತು ದೊಡ್ಡ ಹಿಡುವಳಿದಾರರು ಅನಗತ್ಯವಾಗಿ ಗೊಬ್ಬರ ಖರೀದಿ ಮಾಡುತ್ತಿರುವುದು ಕಂಡು ಬಂದಿದೆ.ಇನ್ನೂ ಯುದ್ಧ ಆರಂಭಗೊಂಡ ನಂತರದಲ್ಲಿ ಚಿಕ್ಕಮಗಳೂರು ಜಿಲ್ಲೆಯೊಂದರಲ್ಲಿ ಸುಮಾರು 80 ಸಾವಿರ ಟನ್‌ನಷ್ಟು ಅದರಲ್ಲೂ ಬೇಸಿಗೆ ಅವಧಿಯಲ್ಲಿ ರಸಗೊಬ್ಬರ ಮಾರಾಟವಾಗಿರುವುದು ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹಿಂದಿನ ವರ್ಷಗಳಲ್ಲಿ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಇಷ್ಟೊಂದು ಪ್ರಮಾಣದ ರಸಗೊಬ್ಬರ ಮಾರಾಟದ ಉದಾಹರಣೆ ಇಲ್ಲ. ಆದರೆ, ಈ ವರ್ಷ ಭಾರೀ ಪ್ರಮಾಣದ ರಸ ಗೊಬ್ಬರ ಮಾರಾಟವಾಗಿದೆ.
ಯುದ್ಧ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ರಸ ಗೊಬ್ಬರದ ಬೆಲೆ ಹೆಚ್ಚಿಸುವುದಾಗಿ ಕಂಪನಿಗಳು ಮಾಹಿತಿ ನೀಡಿವೆ. ಇದು ಮತ್ತಷ್ಟು ರೈತರನ್ನು ಆಂತಕಕ್ಕೀಡು ಮಾಡಿದ್ದು, ಮುಂಗಾರು ಆರಂಭಗೊಂಡ ನಂತರ ಬಳಸುವ ಗೊಬ್ಬರವನ್ನು ಈಗಲೇ ಖರೀದಿಸಲು ಮುಗಿಬಿದ್ದಿದ್ದಾರೆ.ಪೂರೈಕೆಯಲ್ಲೂ ವ್ಯತ್ಯಯ; ಕಳೆದ ಒಂದೂವರೆ ತಿಂಗಳಿನಿಂದ ಜಿಲ್ಲೆಯಲ್ಲಿ ಗೊಬ್ಬರದ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಕೆಲವು ಕಂಪನಿಗಳು ಗೊಬ್ಬರ ಪೂರೈಕೆ ಮಾಡುತ್ತಿಲ್ಲ. ಜತೆಗೆ, ದರ ಹೆಚ್ಚಿಸಲು ತೀರ್ಮಾನಿಸಿವೆ. ಹೊಸ ದರ ಬಂದಿಲ್ಲ. ಒಂದೆರಡು ದಿನದಲ್ಲಿ ಹೊಸ ದರ ಪ್ರಕಟಿಸಲಿವೆ. ಕೇಂದ್ರ ಸರ್ಕಾರದ ಸಬ್ಸಿಡಿ ಹೊರತು ಪಡಿಸಿ ದರ ಹೆಚ್ಚಳ ಮಾಡಲಿವೆ.
ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 20ಕ್ಕೂ ಅಧಿಕ ಬಾರಿ ಗೊಬ್ಬರದ ಬೆಲೆಗಳು ಏರಿಕೆ ಆಗಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಗೊಬ್ಬರ ಮಾರಾಟಗಾರರೊಬ್ಬರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.--- ಬಾಕ್ಸ್---
ಕೃಷಿ ಇಲಾಖೆಯಿಂದ ಗೊಬ್ಬರ ಮಾರಾಟಕ್ಕೆ ಕಡಿವಾಣಜಿಲ್ಲೆಯಲ್ಲಿ ಭಾರೀ ಪ್ರಮಾಣ ರಸ ಗೊಬ್ಬರ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಇರುವ ರೈತರಿಗೆ ಮಾತ್ರ ಗೊಬ್ಬರ ಪೂರೈಕೆ ಮಾಡುವಂತೆ ಚಿಕ್ಕಮಗಳೂರಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್ ಮಂಗಳವಾರ ಗೊಬ್ಬರ ಮಾರಾಟ ಗಾರರಿಗೆ ಸೂಚಿಸಿದ್ದಾರೆ.ಜಿಲ್ಲೆಯ ರಸಗೊಬ್ಬರ ಮಾರಾಟಗಾರರೊಂದಿಗೆ ಆನ್‌ಲೈನ್ ಸಭೆ ನಡೆಸಿದ ಅವರು, ರೈತರಿಗೆ ಬೇಸಿಗೆ ಅವಧಿಯಲ್ಲಿ ಗೊಬ್ಬರ ವಿತರಿಸಿದರೆ ಮಳೆಗಾಲದಲ್ಲಿ ಸಮಸ್ಯೆ ಉಂಟಾಗಬಹುದು. ಜತೆಗೆ, ಶ್ರೀಮಂತರು ಮಾತ್ರ ಬಂಡವಾಳ ಹೂಡಿಕೆ ಮಾಡಿ ಅಗತ್ಯವಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಗೊಬ್ಬರ ಸಂಗ್ರಹಿಸಿಕೊಳ್ಳಬಹುದು. ಇದರಿಂದ ಮಳೆಗಾಲದಲ್ಲಿ ಸಣ್ಣ ರೈತರಿಗೆ ತೊಂದರೆ ಉಂಟಾಗಲಿದೆ.
ಹೀಗಾಗಿ, ಯಾವುದೇ ಕಾರಣಕ್ಕೂ ಗೊಬ್ಬರ ಶೇಖರಣೆ ಮಾಡುವುದಕ್ಕಾಗಿ ಖರೀದಿಗೆ ಬಂದ ರೈತರಿಗೆ ಗೊಬ್ಬರ ಮಾರಾಟ ಮಾಡಬೇಡಿ. ಗೊಬ್ಬರದ ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ. ಮಳೆಗಾಲ ಆರಂಭಗೊಂಡ ಬಳಿಕ ವಿತರಣೆ ಮಾಡ ಲಾಗುವುದು ಎಂದು ಜಾಗೃತಿ ಮೂಡಿಸುವಂತೆ ಮಾರಾಟಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಜತೆಗೆ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಕೃತಕವಾಗಿ ಗೊಬ್ಬರದ ಅಭಾವ ಸೃಷ್ಟಿಸುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ ಎಂದು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.-- ಬಾಕ್ಸ್ --
ಕಾಫಿನಾಡಿನಲ್ಲಿಯೇ ಯಾಕೆ ಗೊಬ್ಬರದ ಅಭಾವ?ಭತ್ತ, ರಾಗಿ, ಜೋಳ, ಅಡಕೆ, ತೆಂಗು ಬೆಳೆಗೆ ಕನಿಷ್ಠ ಪ್ರಮಾಣದ ಗೊಬ್ಬರ ಸಾಕು. ಎಕರೆಗೆ 3 ರಿಂದ 4 ಕ್ವಿಂಟಾಲ್ ಸಾಕು. ಆದರೆ, ಕಾಫಿ ತೋಟಗಳು ಸಾವಿರಾರು ಎಕರೆ ಇರುವುದರಿಂದ ಒಂದು ಬಾರಿ ನೀಡುವುದಕ್ಕೆ ನೂರಾರು ಕ್ವಿಂಟಾಲ್ ಗೊಬ್ಬರ ಬೇಕು. ಹೀಗಾಗಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಗದಿತ ಅವಧಿಗೂ ಮುನ್ನವೇ ರೈತರು ಗೊಬ್ಬರ ಖರೀದಿಗೆ ಮುಂದಾಗಿದ್ದಾರೆ.
-- ಬಾಕ್ಸ್--
ದರ ಏರಿಕೆ ಪಟ್ಟಿ (ಪ್ರತಿ ಚೀಲಕ್ಕೆ)ಗೊಬ್ಬರಹಳೇ ದರಹೊಸ ದರ ಏ.1 ರಿಂದ
20:20:0:131500 ರು.1800 ರು.10:26:262025 ರು.2250 ರು.
12:32:162025 ರು.2250 ರು.14:35:1421752400
19:19:1920752300ಎಂಒಪಿ18501975
ಡಿಎಪಿ13501350ಟಿಎಸ್‌ಪಿ13001300
--ಫೋಟೋ:
ಚಿಕ್ಕಮಗಳೂರು ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್ ಮಂಗಳವಾರ ಆನ್‌ಲೈನ್ ಮೂಲಕ ಗೊಬ್ಬರ ಮಾರಾಟಗಾರರೊಂದಿಗೆ ಸಭೆ ನಡೆಸಿ ಅನಗತ್ಯವಾಗಿ ಮತ್ತು ಸಂಗ್ರಹಕ್ಕೆ ಗೊಬ್ಬರ ಮಾರಾಟ ಮಾಡದಂತೆ ಸೂಚಿಸಿದರು.