ಸಾರಾಂಶ
ಕರಾವಳಿ ಭಾಗದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಎಂದೇ ಪ್ರಖ್ಯಾತಿಯಾದ ಲಕ್ಕಿ ನಾಗೇಶ್, ಚೊಚ್ಚಲ ನಿರ್ದೇಶನದ ‘ಕರ್ಮ’ ವೆಬ್ ಸೀರಿಸ್ ಇದಾಗಿದೆ. ನಿರ್ಮಾಣವನ್ನು ಕೆ.ಆರ್.ರಾಜೇಶ್ ಭಟ್ ಮಾಡಿದ್ದು, ಕಥೆಯನ್ನು ಶರತ್ ಶೆಟ್ಟಿ ಬಿಜೂರ್ ಬರೆದಿದ್ದಾರೆ. ಸನತ್ ಉಪ್ಪುಂದ ಛಾಯಾಗ್ರಹಣ ತಮ್ಮ ಕೈಚಳಕ ತೋರಿಸಿದ್ದು, ಸಂಕಲನ ಶಿವರಾಜ್ ಮೇಹು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಮೊಟ್ಟ ಮೊದಲ ಬಾರಿಗೆ ಕರಾವಳಿಯ ಯುವಕರ ತಂಡ, ಹೊಸತನದ ಆಯಾಮವನ್ನು ಸೃಷ್ಟಿ ಮಾಡಲು ನೈಜ ಘಟನೆ ಆಧಾರಿತ ಕಥೆಯನ್ನು ವೆಬ್ ಸೀರಿಸ್ ಮೂಲಕ ಹೇಳಲು ಹೊರಟಿದೆ. ದೀಪಾವಳಿಯ ಪರ್ವ ಕಾಲದಲ್ಲಿ ಇದರ ಪಸ್ಟ್ ಲುಕ್ ಪೋಸ್ಟರನ್ನು ಗುರುವಾರ ನಟ - ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಬಿಡುಗಡೆ ಮಾಡಿ ಯುವಕರ ತಂಡಕ್ಕೆ ಶುಭ ಹಾರೈಸಿದ್ದಾರೆ.ಕರಾವಳಿ ಭಾಗದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಎಂದೇ ಪ್ರಖ್ಯಾತಿಯಾದ ಲಕ್ಕಿ ನಾಗೇಶ್, ಚೊಚ್ಚಲ ನಿರ್ದೇಶನದ ‘ಕರ್ಮ’ ವೆಬ್ ಸೀರಿಸ್ ಇದಾಗಿದೆ. ನಿರ್ಮಾಣವನ್ನು ಕೆ.ಆರ್.ರಾಜೇಶ್ ಭಟ್ ಮಾಡಿದ್ದು, ಕಥೆಯನ್ನು ಶರತ್ ಶೆಟ್ಟಿ ಬಿಜೂರ್ ಬರೆದಿದ್ದಾರೆ. ಸನತ್ ಉಪ್ಪುಂದ ಛಾಯಾಗ್ರಹಣ ತಮ್ಮ ಕೈಚಳಕ ತೋರಿಸಿದ್ದು, ಸಂಕಲನ ಶಿವರಾಜ್ ಮೇಹು ಮಾಡಿದ್ದಾರೆ.ಹೊಸ ಪ್ರತಿಭೆಗಳಾದ ಆಕರ್ಷ ಪೂಜಾರಿ, ಸರಿತಾ, ರಾಜೇಶ್ ಕೋಣೆ, ಗುರು ಕುಂದಾಪುರ, ಅರುಣ್ ಶೆಟ್ಟಿ, ರಾಜೇಶ್ ಕೆರಗಲ್ ಬಣ್ಣ ಹಚ್ಚಿದ್ದಾರೆ. ಸದ್ಯದಲ್ಲೇ ಈ ವೆಬ್ ಸೀರಿಸ್ ಎಂಟು ಕಂತುಗಳಾಗಿ ತಸ್ಮಯ್ ಪ್ರೊಡಕ್ಷನ್ ಮೂಲಕ ತಸ್ಮಯ್ ಆಡಿಯೋದಲ್ಲಿ ಬಿಡುಗಡೆಯಾಗಲಿದೆ ಎಂದು ತಂಡ ಹೇಳಿದೆ.