ಕನ್ನಡ ರಾಜ್ಯೋತ್ಸವ ಪ್ರತಿಯೊಬ್ಬ ಕನ್ನಡಿಗನ ಮನೆ, ಮನದ ಹಬ್ಬವಾಗಿದೆ

| Published : Nov 02 2024, 01:17 AM IST

ಕನ್ನಡ ರಾಜ್ಯೋತ್ಸವ ಪ್ರತಿಯೊಬ್ಬ ಕನ್ನಡಿಗನ ಮನೆ, ಮನದ ಹಬ್ಬವಾಗಿದೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಹಿಂದುಳಿದ ವರ್ಗಗಳ ಹರಿಕಾರರಾಗಿದ್ದ ಕನ್ನಡ ನಾಡಿನ ದೀಮಂತ ನಾಯಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದಕ್ಷ ಆಡಳಿತದ ಪ್ರಭಾವದಿಂದ ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರಕನ್ನಡ ರಾಜ್ಯೋತ್ಸವ ಪ್ರತಿಯೊಬ್ಬ ಕನ್ನಡಿಗನ ಮನೆ ಮತ್ತು ಮನದ ಹಬ್ಬವಾಗಿದ್ದು ಈ ಸುದಿನ ನಮಗೆ ಅತ್ಯಂತ ಶ್ರೇಷ್ಠವಾದ ದಿನವಾಗಿದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು. ಪುರಸಭೆ ಬಯಲು ರಂಗ ಮಂದಿರದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಲವಾರು ಮಹನೀಯರ ಹೋರಾಟ ಮತ್ತು ಪ್ರತಿಫಲ ಮತ್ತು ಪರಿಶ್ರಮದ ಫಲಿತಾಂಶವಾಗಿ ಕರ್ನಾಟಕ ರಾಜ್ಯ ಉದಯವಾಗಿದ್ದು ನಮ್ಮ ಚೆಲುವ ಕನ್ನಡ ನಾಡನ್ನು ಎಲ್ಲರೂ ಪ್ರೀತಿ ಮತ್ತು ಗೌರವದಿಂದ ಕಾಣಬೇಕು ಎಂದರು. ರಾಜ್ಯದ ಹಿಂದುಳಿದ ವರ್ಗಗಳ ಹರಿಕಾರರಾಗಿದ್ದ ಕನ್ನಡ ನಾಡಿನ ದೀಮಂತ ನಾಯಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದಕ್ಷ ಆಡಳಿತದ ಪ್ರಭಾವದಿಂದ ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡಿದ್ದು ಇದಕ್ಕಾಗಿ ನಾವು ಆ ಮಹಾಪುರುಷನನ್ನು ಸದಾ ಕಾಲ ನೆನೆಯಬೇಕು ಎಂದು ಅಭಿಮಾನದ ಮಾತುಗಳನ್ನಾಡಿದರು. ಅಖಂಡ ಭಾರತದಿಂದ ಕನ್ನಡ ನಾಡನ್ನು ಬೇರ್ಪಡಿಸಲು ಮೊದಲ ಬಾರಿಗೆ 1905ರಲ್ಲಿ ಹಾಲೂರು ವೆಂಕಟರಾಮ ರಾಯರು ಮೊದಲ ಬಾರಿಗೆ ಧ್ವನಿ ಎತ್ತಿದ ನಂತರ 1916ರಲ್ಲಿ ನಡೆದ ಅಧಿವೇಶನದಲ್ಲಿ ಇದನ್ನು ಬೆಂಬಲಿಸಲಾಯಿತು. ಆನಂತರ ಕಾಂಗ್ರೆಸ್ ಅಧಿವೇಶನ ಧ್ವನಿ ಮತದಿಂದ ಅಂಗೀಕರಿಸಿತು. ಮುಂದುವರಿದು 36 ವರ್ಷಗಳ ಪರಿಶ್ರಮದಿಂದ ರಾಜ್ಯ ಉದಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು. ಕೆ.ಆರ್. ನಗರ ಪಟ್ಟಣದ ನಿರ್ಮಾತೃ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಭಾವಚಿತ್ರವನ್ನು ಕ್ಷೇತ್ರದ ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಲ್ಲಿ ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಶಾಸಕರು, ಈ ವಿಚಾರದಲ್ಲಿ ಕೂಡಲೇ ಸಭೆ ನಡೆಸಿ ತಾಲೂಕು ಆಡಳಿತಗಳ ವತಿಯಿಂಧ ಸೂಕ್ತ ಆದೇಶ ಹೊರಡಿಸಬೇಕು ಎಂದು ಕೆ.ಆರ್.ನಗರ ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ ಮತ್ತು ಸಾಲಿಗ್ರಾಮ ತಹಸೀಲ್ದಾರ್ ಎನ್. ಸೋಮನಗೌಡ ನರಗುಂದ್ ಅವರಿಗೆ ಸೂಚಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಮತ್ತು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡಿದ ಶಾಲೆಗಳ ವಿದ್ಯಾರ್ಥಿಗಳ ತಂಡವನ್ನು ಗುರುತಿಸಿ ಗೌರವಿಸಲಾಯಿತು.ಸಭಾ ಕಾರ್ಯಕ್ರಮ ಆರಂಭಕ್ಕೂ ಮೊದಲು ಹಾಸನ ಮೈಸೂರು ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಬಳಿಯಿಂದ ನಾಡದೇವತೆ ಭುವನೇಶ್ವರಿಯ ಭಾವಚಿತ್ರವನ್ನು ವಿವಿಧ ಕಲಾ ತಂಡಗಳೊಂದಿಗೆ ವೈಭವದಿಂದ ಮೆರವಣಿಗೆ ಮಾಡಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮಶಂಕರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಎಸ್. ಮಹದೇವ್, ಉದಯ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ನಿರ್ದೇಶಕ ಕೆ.ಎನ್. ಪ್ರಸನ್ನಕುಮಾರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ಜಿಪಂ ಮಾಜಿ ಸದಸ್ಯರಾದ ಜಿ.ಆರ್. ರಾಮೇಗೌಡ, ಜಯರಾಮೇಗೌಡ, ಪುರಸಭೆ ಸದಸ್ಯರಾದ ಶಿವುನಾಯಕ್, ಶಂಕರ್ಸ್ವಾಮಿ, ತಹಸೀಲ್ದಾರ್ ಗಳಾದ ಜಿ. ಸುರೇಂದ್ರಮೂರ್ತಿ, ಎನ್. ಸೋಮನಗೌಡ ನರಗುಂದ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜ್, ಬಿಇಒ ಆರ್.ಕೃಷ್ಣಪ್ಪ, ಇಒ ವಿ.ಪಿ.ಕುಲದೀಪ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಕನ್ನಡ ಪ್ರೇಮಿಗಳು ಇದ್ದರು. ------------