ಸಾಮರಸ್ಯ ಬದುಕಿಗೆ ಬಸವತತ್ವ ಪೂರಕ

| Published : May 16 2024, 12:52 AM IST

ಸಾರಾಂಶ

ಬಸವ ಜಯಂತಿ ಆಚರಣೆ ಎಂದರೆ ಸಮಸ್ತ ಮನುಕುಲ ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕು

ಗದಗ: ಲಿಂಗ, ಜಾತಿ ಭೇದದಿಂದ ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣಗೊಳ್ಳುತ್ತಿರುವುದು ಕಂಡು ಬರುತ್ತಿದೆ. ಮನುಷ್ಯ ಕುಲ ಒಂದೇ ಎಂದು ಸಾರುವ ಮೂಲಕ ಸಮಸ್ತ ಮನುಷ್ಯರು ಯಾರೂ ಮೇಲಲ್ಲ ಕೀಳಲ್ಲ ಎಂದು ಬಸವಣ್ಣನವರು ಸಾಮರಸ್ಯ ಬದುಕಿಗೆ ಭದ್ರ ಬುನಾದಿ ಹಾಕಿದ್ದಾರೆ ಎಂದು ಸುಮಿತ್ರಾ ಶಿವಶಂಕರ ಕೋತಂಬರಿ ಹೇಳಿದರು.

ಅವರು ನಗರದ ಅಬ್ದುಲ್ ಕಲಾಂ ಶಾದಿಮಹಲ್ ಎದುರಿಗಿನ ಶಿವಬಸವ ನಗರದ ಶಿವಬಸವ ಸುಧಾರಣಾ ಸಮಿತಿ ಹಾಗೂ ಶಿವಬಸವ ನಗರ ಮಹಿಳಾ ಮಂಡಳ ಆಶ್ರಯದಲ್ಲಿ ಶಿವಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಏರ್ಪಡಿಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಹಾಕಿಕೊಟ್ಟ ಸನ್ಮಾರ್ಗ ಇಂದಿಗೂ ಪ್ರಸ್ತುತ. ಎಲ್ಲ ಧರ್ಮಿಯರನ್ನು ಸಮಾನವಾಗಿ ಕಾಣುವ ಮಹಾನ್ ಕನಸುಗಾರ ಬಸವಣ್ಣನವರು. ಅಂತಹ ಶರಣರ ಸ್ಮರಣೆ ತತ್ವಗಳ ಪರಿಪಾಲನೆ ಇಂದಿನ ಅಗತ್ಯ. ಬಸವ ಜಯಂತಿ ಆಚರಣೆ ಎಂದರೆ ಸಮಸ್ತ ಮನುಕುಲ ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕು. ಅವರ ತತ್ವಾದರ್ಶ ಪಾಲನೆ ಮಾಡುವ ಮೂಲಕ ಮನುಷ್ಯ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮಿತಿಯ ಗೌರವಾಧ್ಯಕ್ಷ ಎಂ.ಟಿ .ಸೋರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು , ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಶಿವಬಸವ ಸುಧಾರಣಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಶಿವಶಂಕರ ಕೋತಂಬರಿ, ಸಾಹಿತಿ ಐ. ಕೆ. ಕಮ್ಮಾರ ಮುಂತಾದವರು ಮಾತನಾಡಿದರು.

ರಾಮಣ್ಣ ಮಡಿವಾಳರ, ಸಿದ್ದರಾಮಶೆಟ್ರು, ಶ್ರೀನಿವಾಸ ಮಿಣಜಗಿ, ಎಸ್.ಕೆ.ಇನಾಮದಾರ, ಬಸಣ್ಣ ಚೌಡಕಿ, ಜೋಗಿನ, ಪ್ರಭು ಬ್ಯಾಲಿಹಾಳ, ಶೇಖಪ್ಪಜ್ಜ ಕನ್ಯಾಳ, ಎಸ್.ಪಿ. ಚಳಗೇರಿ, ಬಿ.ಬಿ. ಹಡಪದ, ಎಚ್.ಎನ್.ಕುರಿ, ಆರ್.ಎಂ. ಕ್ಯಾಮನಗೌಡ್ರ, ವಿಶ್ವನಾಥ ಹಿರೇಮಠ, ಎಸ್.ಎಸ್. ಗಡ್ಡದಮಠ, ಬಿ.ಸಿ.ಇಳಕಲ್ಲ, ನಿಂಗಪ್ಪ ಮಹಿಳಾ ಮಂಡಳದ ಸವಿತಾ ಗಡ್ಡದಮಠ, ರತ್ನಾ ಚಳಿಗೇರಿ, ಸೌಮ್ಯ ಅಸೂಟಿ, ರತ್ನಾ ಕನ್ಯಾಳ, ಮಲ್ಲಮ್ಮ ದಮಾಮಿ, ಕಾವ್ಯಾ ಹುಂಡೇಕರ, ಪೂಜಾ ಹಂಚಿನಾಳ, ಉಷಾ ಗುಡ್ಲಾನೂರ, ರೇಣುಕಾ ಕುಂಬಾರ, ಬಸಮ್ಮಾ, ಸಂಧ್ಯಾ ಬ್ಯಾಲಿಹಾಳ, ಗಂಗಾ ಪೊಲೀಸ್‌ ಪಾಟೀಲ, ಸಂಗೀತ ಕಪಲಿ ಸೇರಿದಂತೆ ಬಡಾವಣೆಯ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಮಂಜುಳಾ ಹಡಪದ ನಿರೂಪಿಸಿ, ವಂದಿಸಿದರು.