ಸಾರಾಂಶ
ಸ್ವರ್ಗ ಬೇರೆಲ್ಲೂ ಇಲ್ಲ, ಈ ಭೂಲೋಕದಲ್ಲಿಯೇ ಕಂಡುಕೊಳ್ಳಬೇಕು, ಸಾಧ್ಯವಾದರೆ ಸೃಷ್ಠಿಸಿಕೊಳ್ಳಬೇಕು, ಅಮೃತ ಕನ್ನಡ ಭಾಷೆಯಲ್ಲಿಯೇ ಇದೆ, ಕನ್ನಡಭಾಷೆಗಿರುವ ಐತಿಹ್ಯ, ಸ್ವಾರಸ್ಯ ಮತ್ಯಾವುದೇ ಭಾಷೆಗಿಲ್ಲ ಎನ್ನುವುದನ್ನು ಅರಿಯಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಜಾನಪದ ಸಕಲ ಸಾಹಿತ್ಯಕ್ಕೂ ಮೂಲಾಧಾರವಾಗಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.ನಗರದಲ್ಲಿರುವ ಹರ್ಡಿಕರ್ ಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ಯುಗಾದಿ ಸಂವತ್ಸರ ಅಂಗವಾಗಿ ರಾಜ್ಯ ಮಟ್ಟದ ಯುಗಾದಿ ಕವಿಗೋಷ್ಠಿ, ಕಲ್ಲರಳಿ ಹೂವಾಗಿ ಕವನಸಂಕಲನ ಬಿಡುಗಡೆ- ಸಾಧಕರಿಗೆ ಅಭಿನಂದನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಮತ್ತು ಸಾಹಿತಿಗಳು ಮೂಲ ಜಾನಪದವನ್ನು ಮರೆತು, ವ್ಯಕ್ತಿಗತ ಸಾಹಿತ್ಯರಚನೆ ಮುಂದಾಗುತ್ತಿದ್ದಾರೆ, ಇಂದಿನ ಪರಿಸ್ಥಿತಿ, ಸಮಾಜದ ಅಂಕುಡೊಂಕುಗಳನ್ನು ಕಟ್ಟಿಕೊಡುವುದನ್ನು ದೂರವಿಸಿದ್ದಾರೆ ಎಂದು ಎಚ್ಚರಿಸಿದರು.ಜಾನಪದ ಉಳಿಸಿ ಬೆಳೆಸುವುದು ಪ್ರತಿ ಸಾಹಿತಿಯ ಧ್ಯೇಯವಾಗಬೇಕಿದೆ, ಜಾನಪದ ಸಾಹಿತಿಗಳಿಂದ ಉಳಿದರೆ,ಕಲೆಗಳು ಕಲಾವಿದರಿಂದ ಬೆಳವಣಿಗೆ ಕಾಣುತ್ತವೆ. ಮೂಲ ಸಾಹಿತ್ಯವು ಸಂಗೀತ ಮತ್ತು ಗಾಯಕರಿಂದ ಕಲಾರಸಿಕರಿಗೆ ತಲುಪುತ್ತದೆ ಎಂದರು.
ಕಸಾಪನಗರ ಘಟಕ ಅಧ್ಯಕ್ಷೆ ಸಿ.ಜೆ.ಸುಜಾತಕೃಷ್ಣ ಮಾತನಾಡಿ, ಸ್ವರ್ಗ ಬೇರೆಲ್ಲೂ ಇಲ್ಲ, ಈ ಭೂಲೋಕದಲ್ಲಿಯೇ ಕಂಡುಕೊಳ್ಳಬೇಕು, ಸಾಧ್ಯವಾದರೆ ಸೃಷ್ಠಿಸಿಕೊಳ್ಳಬೇಕು, ಅಮೃತ ಕನ್ನಡ ಭಾಷೆಯಲ್ಲಿಯೇ ಇದೆ, ಕನ್ನಡಭಾಷೆಗಿರುವ ಐತಿಹ್ಯ, ಸ್ವಾರಸ್ಯ ಮತ್ಯಾವುದೇ ಭಾಷೆಗಿಲ್ಲ ಎನ್ನುವುದನ್ನು ಅರಿಯಬೇಕು ಎಂದರು.ಕನ್ನಡತನ-ಕನ್ನಡಭಾಷಾಭಿಮಾನವನ್ನು ಮುಂದಿನ ತಲೆಮಾರಿಗೆ ಕಟ್ಟಿಕೊಡುವ ನಿಟ್ಟಿನಲ್ಲಿ ಸನ್ನದ್ದರಾಗಬೇಕಿದೆ, ಪುಸ್ತಕಕ್ಕಿಂತ ಒಳ್ಳಯ ಸ್ನೇಹಿತನಿಲ್ಲ, ಕೋಪ, ತಾಪ, ದ್ವೇಷ ಮಾಡಿಕೊಳ್ಳದ ಏಕೈಕ ಗೆಳೆಯ ಪುಸ್ತಕ, ಕೃತಿಗಳಾಗಿವೆ ಎಂದು ಸಲಹೆ ನೀಡಿದರು.
ಸಾಹಿತಿ ಮಹಾಲಿಂಗಯ್ಯ ಯಮದೂರು ಮಾತನಾಡಿ, ಮಂಡ್ಯ ನೆಲ ಶೇ.೧೦೦ರಷ್ಟು ಅಚ್ಚಕನ್ನಡ ಮಾತನಾಡುವ ಜಿಲ್ಲೆಯಾಗಿದೆ, ಕೃಷಿ ಪ್ರಧಾನ ಜಿಲ್ಲೆಯಲ್ಲಿ ಹೆಚ್ಚಾಗಿ ಕಬ್ಬು-ಭತ್ತ,ರಾಗಿ ಬೆಳೆದು ಸಕ್ಕರೆನಾಡಾಗಿದೆ, ಜಾನಪದ, ಆಧುನಿಕ ಸಾಹಿತ್ಯ, ಸಾಂಸ್ಕೃತಿಕ,ರಾಜಕೀಯ, ಶಿಕ್ಷಣ, ಸಹಕಾರ, ಹೋರಾಟ, ಆಧ್ಯಾತ್ಮಿಕ, ಉದ್ಯೋಗ ಕ್ಷೇತ್ರದಲ್ಲಿಯೂ ಮುನ್ನಡೆ ಸಾಧಿಸುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ನಡೆಯಿತು, ಸಾಧಕರಿಗೆ ಅಭಿನಂದನೆ ಸಲ್ಲಿಸಲಾಯಿತು, ೩೨ನೇ ಕವನ ಸಂಕಲನ ಕಲ್ಲರಳಿ ಹೂವಾಗಿ ಗಣ್ಯರಿಂದ ಲೋಕಾರ್ಪಣೆಗೊಂಡಿತು.
ಸಮಾರಂಭದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಪೋತೇರ ಮಹದೇವು, ಹಾವೇರಿ ಜಿಲ್ಲಾಧ್ಯಕ್ಷ ನಾಗರಾಜು, ಮೈಸೂರು ಅಧ್ಯಕ್ಷೆ ಮಂಜುಳಾ ರಮೇಶ್, ಡಾ.ಗಿರೀಶ್‌ಭೈರವ, ವೈದ್ಯ ಡಾ.ಎಚ್.ಸಿ.ಆನಂದ್, ಜಾನಪದ ಸಾಹಿತಿ ವೀರಪ್ಪ ಕೀಲಾರ, ಕಾನೂನು ಪ್ರಾಧ್ಯಪಕ ಡಾ.ಜಯಕುಮಾರ್, ರುದ್ರೇಶ್ ಸ್ವಾಮೀಜಿ, ಶಿಕ್ಷಕಿ ಶ್ಯಾಮಲತಾ ಮತ್ತಿತರರಿದ್ದರು.