ಸಾರಾಂಶ
ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಗೆ ಸೇರಿದ ಮಲ್ಲಾಪುರ ಗ್ರಾಮದಲ್ಲಿ ಸರ್ವೇ ನಂ:೧೩/ಪಿ೩ ರಲ್ಲಿ ೪ ಎಕರೆ ೨೦ ಗುಂಟೆ ಜಮೀನು ಇದ್ದು, ನಮ್ಮ ತಂದೆ ರುದ್ರಯ್ಯ ಬಿನ್ ಲೇಟ್ ಭೈರಯ್ಯ ರವರ ಹೆರಿನಲ್ಲಿದೆ. ಈ ಜಮೀನಿಗೆ ಸಂಬಂಧಪಟ್ಟ ಎಲ್ಲಾ ಮೂಲ ದಾಖಲಾತಿಗಳನ್ನು ಹೊಂದಿರುತ್ತೇವೆ. ಹೀಗಿದ್ದರೂ ಕೂಡ ಈ ಜಾಗಕ್ಕೆ ಅಕ್ರಮವಗಿ ಗುಡಿಸಲು ಹಾಕಲು ನಮ್ಮ ಗ್ರಾಮದವರೇ ಆದ ಓದೇಶ ಮತ್ತು ಭೈರಯ್ಯ ಎಂಬುವವರು ಮುಂದಾಗಿರುತ್ತಾರೆ ಎಂದು ದೂರಿದರು.
ಕನ್ನಡಪ್ರಭ ವಾರ್ತೆ ಹಾಸನ
ಸರ್ವೇ ನಂ:೧೩/ಪಿ೩ರಲ್ಲಿ ೪ ಎಕರೆ ೨೦ ಗುಂಟೆ ಜಮೀನು ಇದ್ದು, ಈ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ಹಾಕಲಾಗಿದ್ದು, ಈ ಬಗ್ಗೆ ದೂರು ನೀಡಿದರೂ ಸಹ ಗುಡಿಸಲು ತೆರವುಗೊಳಿಸುವಲ್ಲಿ ಬೇಲೂರು ತಹಸೀಲ್ದಾರರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಡಿಸಿ ಕಚೇರಿ ಆವರಣದಲ್ಲಿ ಶುಕ್ರವಾರ ಮಲ್ಲಾಪುರ ಗ್ರಾಮಸ್ಥರು ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಇದೇ ವೇಳೆ ಗ್ರಾಮದ ಮೋಹನ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಗೆ ಸೇರಿದ ಮಲ್ಲಾಪುರ ಗ್ರಾಮದಲ್ಲಿ ಸರ್ವೇ ನಂ:೧೩/ಪಿ೩ ರಲ್ಲಿ ೪ ಎಕರೆ ೨೦ ಗುಂಟೆ ಜಮೀನು ಇದ್ದು, ನಮ್ಮ ತಂದೆ ರುದ್ರಯ್ಯ ಬಿನ್ ಲೇಟ್ ಭೈರಯ್ಯ ರವರ ಹೆರಿನಲ್ಲಿದೆ. ಈ ಜಮೀನಿಗೆ ಸಂಬಂಧಪಟ್ಟ ಎಲ್ಲಾ ಮೂಲ ದಾಖಲಾತಿಗಳನ್ನು ಹೊಂದಿರುತ್ತೇವೆ. ಹೀಗಿದ್ದರೂ ಕೂಡ ಈ ಜಾಗಕ್ಕೆ ಅಕ್ರಮವಗಿ ಗುಡಿಸಲು ಹಾಕಲು ನಮ್ಮ ಗ್ರಾಮದವರೇ ಆದ ಓದೇಶ ಮತ್ತು ಭೈರಯ್ಯ ಎಂಬುವವರು ಮುಂದಾಗಿರುತ್ತಾರೆ. ಈ ಬಗ್ಗೆ ಅನೇಕ ಬಾರಿ ತಹಸೀಲ್ದಾರ್ ಮಮತಾರವರಿಗೆ ದೂರು ನೀಡಿದರೂ ಕೂಡ ಪ್ರಯೋಜನವಾಗಿರುವುದಿಲ್ಲ. ಕಾರಣ ತಹಸೀಲ್ದಾರರೇ ಅವರಿಗೆ ಗುಡಿಸಲು ಹಾಕಲು ಕುಮ್ಮುಕ್ಕು ನೀಡಿತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಅನುಮಾನಿಸಿದರು.
ಈ ಮಧ್ಯೆ ಸುಮಾರು ೨ ರಿಂದ ೩ ಬಾರಿ ಸರ್ವೆಯನ್ನು ಸಹ ಮಾಡಿಸಲಾಗಿರುತ್ತದೆ. ಮತ್ತು ಸ್ಥಳಕ್ಕೆ ತಹಸೀಲ್ದಾರರು ಬಂದಾಗ ಓದೇಶ ಬಿನ್ ಭೈರಯ್ಯ, ಭೈರಯ್ಯ ಬಿನ್ ದೊಡ್ಡಯ್ಯ ಮತ್ತು ಇತರರು ಕದ್ದು ಓಡಿ ಹೋಗಿದ್ದಾರೆ ಮತ್ತು ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡಲು ಮುಂದಾಗಿದ್ದಾರೆ ಆದರೂ ಸಹ ಯಾವುದೇ ಇದೂವರೆಗೂ ಕಾನೂನು ಕ್ರಮ ಜರುಗಿಸಿರುವುದಿಲ್ಲ. ಈ ಎಲ್ಲಾ ಬೆಳವಣಿಗೆಯನ್ನು ನೋಡಿದರೆ ತಹಸೀಲ್ದಾರ್ ರಾಜಕೀಯ ಮತ್ತು ಹಣದ ಆಮಿಷಕ್ಕೆ ಒಳಗಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ ಎಂದು ಆರೋಪಿಸಿದರು. ಆದ್ದರಿಂದ ಕೂಡಲೇ ಬಡವರ ವಿರೋಧಿ ತಹಸೀಲ್ದಾರನ್ನು ಸೇವೆಯಿಂದ ಅಮಾನತುಗೊಳಿಸಿ ಅಕ್ರಮವಾಗಿ ಹಾಕಿರುವ ಗುಡಿಸಲನ್ನು ತೆರವುಗೊಳಿಸಿ ನಮಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿದರು.ಪ್ರತಿಭಟನೆಯಲ್ಲಿ ಗ್ರಾಮದ ಮೋಹನ್ ಕುಟುಂಬದವರಾದ ಕೆ.ಆರ್. ಅನಿತಾ, ಶಿವಮ್ಮ, ಲಕ್ಷ್ಮಣ್, ಪ್ರಿಯಾಂಕ, ಚೇತನ್, ರುದ್ರಯ್ಯ, ಇತರರು ಉಪಸ್ಥಿತರಿದ್ದರು.