ಚನ್ನರಾಯಪಟ್ಟಣ: ಬಕ್ರೀದ್ ಹಬ್ಬದ ಅಂಗವಾಗಿ ಗುರುವಾರ ನಗರದ ಬಾಗೂರು ರಸ್ತೆಯ ಈದ್ಗಾ ಮೈದಾನಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಬೆಳಿಗ್ಗೆ ಸರಿಯಾಗಿ ೯.೧೫ ಕ್ಕೆ ಸಾವಿರಾರು ಮುಸ್ಲಿಂ ಬಾಂಧವರು ಒಂದೆಡೆ ಸೇರಿ ವಿಶೇಷ ನಮಾಜ್ ಮಾಡಿದರು. ನಗರದ ಇತರೆ ಭಾಗಗಳ ಮಸೀದಿ ಗಳಲ್ಲಿಯೂ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಎ. ಗೋಪಾಲಸ್ವಾಮಿ ಮಾತನಾಡಿ, ಸಮಸ್ತ ನಾಗರಿಕ ಬಂಧುಗಳಿಗೆ ಬಕ್ರೀದ್ ಹಬ್ಬದ ತುಂಬು ಹೃದಯದ ಶುಭಾಶಯಗಳು. ಬಕ್ರೀದ್ ಎಂದರೇ ತ್ಯಾಗ ಮತ್ತು ಬಲಿದಾನದ ಸಂಕೇತ ಎಂದರು. ಬಕ್ರೀದ್ ನಿಮಿತ್ತ ಮುಸ್ಲಿಂ ಬಾಂಧವರು ಹೊಸ ಬಟ್ಟೆ ಧರಿಸಿ, ಪರಸ್ಪರ ಆಲಿಂಗನ ಮಾಡಿಕೊಂಡು ಶುಭ ಕೋರಿದರು. ಪೊಲೀಸ್ ಇಲಾಖೆಯಿಂದ ಬಂದೂಬಸ್ತ್‌ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಚೌಕ್ ಮಸೀದಿ ಆಡಳಿತ ಅಧಿಕಾರಿಗಳಾದ ಟಿ ಮುನವರ್‌ ಪಾಷಾ, ಮಾಜಿ ಪುರಸಭಾ ಸದಸ್ಯರಾದ ಆನ್ಸರ್ ಪಾಷಾ, ಮಹಬೂಬ್ ಪಾಷಾ, ಕೆಡಿಪಿ ಸದಸ್ಯರಾದ ಕಬ್ಬಾಳು ಮಹೇಶ್, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ನಿರ್ದರ್ಶಕರಾದ ಬಾಲು, ಕಾಂಗ್ರೆಸ್ ಮುಖಂಡರಾದ ಲವಣ್ಣ ಮತ್ತು ಇತರರು ಹಾಜರಿದ್ದರು.