ಬಡವರ ಅಭ್ಯುದಯಕ್ಕೆ ಶ್ರಮಿಸಿದ ಮಾಜಿ ಪ್ರಧಾನಿ

| Published : Dec 28 2024, 12:47 AM IST

ಸಾರಾಂಶ

ಡಾ.ಮನಮೋಹನ್‌ಸಿಂಗ್‌ ಜಾರಿಗೆ ತಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಆಹಾರ ಭದ್ರತಾ ಕಾಯ್ದೆಯಂತಹ ಯೋಜನೆಗಳು ದೇಶದ ಕೋಟ್ಯತರ ಜನರ ಬಡತನವನ್ನು ನೀಗಿಸಿತು. ಶಿಕ್ಷಣ ಕಾಯ್ದೆಯ ಮೂಲಕ ಬಡವರ ಮಕ್ಕಳಿಗೂ ಪ್ರತಿಷ್ಠಿತ‌ ಶಾಲೆಗಳಲ್ಲಿ ಓದಲು ಅವಕಾಶ ಕಲ್ಪಿಸಿತು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಜಾಗತಿಕ ಇತಿಹಾಸದಲ್ಲಿ ಮನಮೋಹನ್ ಸಿಂಗ್ ಅವರ ಹೆಸರು ಅಜರಾಮರವಾಗಿರುತ್ತದೆ. ಅವರು ಬಡವರಿಗಾಗಿ ನರೇಗಾ, ಆಹಾರ ಭದ್ರತಾ ಕಾಯ್ದೆ, ಆಧಾರ್, ಮಾಹಿತಿ ಹಕ್ಕು ಕಾಯಿದೆಯಂತಹ ಹಲವು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ ಎಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಕಾಂಗ್ರೆಸ್‌ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ್ದ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರವರಿಗೆ ಶ್ರದ್ಧಾಜಲಿ ಸಭೆಯಲ್ಲಿ ಅವರು ಮಾತನಾಡಿದರು.

ವಿಶ್ವ ಕಂಡ ಶ್ರೇಷ್ಠ ಆರ್ಥಿಕ ತಜ್ಞ

ಹಣಕಾಸು ಸಚಿವರಾಗಿ, ರಿಸರ್ವ್ ಬ್ಯಾಂಕ್ ಗೌವರ್ನರ್ ಆಗಿ, ಸತತ 10 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿ ತಮ್ಮ ಜ್ಞಾನ ಮತ್ತು ಬದ್ಧತೆ ಮೂಲಕ ದೇಶಕ್ಕೆ ಸೇವೆ ಸಲ್ಲಿಸಿದ ವಿಶ್ವ ಕಂಡಂತಹ ಶ್ರೇಷ್ಠ ಆರ್ಥಿಕ ತಜ್ಞರಾದ ಡಾ. ಮನಮೋಹನ್ ಸಿಂಗ್ ಅವರು ಅಗಲಿದ ಸುದ್ದಿ ತಿಳಿದು ಅತೀವ ದುಃಖವಾಯಿತು ಎಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹೇಳಿದರು.ಅವರು ಜಾರಿಗೆ ತಂದಂತಹ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಆಹಾರ ಭದ್ರತಾ ಕಾಯ್ದೆಯಂತಹ ಯೋಜನೆಗಳು ದೇಶದ ಕೋಟ್ಯತರ ಜನರ ಬಡತನವನ್ನು ನೀಗಿಸಿತು. ಶಿಕ್ಷಣ ಕಾಯ್ದೆಯ ಮೂಲಕ ಬಡವರ ಮಕ್ಕಳಿಗೂ ಪ್ರತಿಷ್ಠಿತ‌ ಶಾಲೆಗಳಲ್ಲಿ ಓದಲು ಅವಕಾಶ ಕಲ್ಪಿಸಿತು. ಮಾಹಿತಿ ಕಾಯ್ದೆಯ ಜಾರಿಗೊಳಿಸುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆಯನ್ನು ತಂದರು. ದೇಶಕ್ಕೆ ಕೊಡುಗೆಯಾಗಿರುವ ಅವರ ಸಾಧನೆಗಳು ಎಂದಿಗೂ ಅಜರಾಮರವಾಗಲಿದೆ ಎಂದರು.

ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಚಂದ್ರ ಕುಮಾರ,ಪುರಸಭೆ ಸದಸ್ಯರಾದ ವೆಂಕಟೇಶ್,ಮಹದೇವ ಶಫಿ,ಸುಹೇಲ್ ,ಆರೋಕ್ಯ ರಾಜನ್,ಮುಖಂಡ ಪಾರ್ಥಸಾರಥಿ,ರಂಗರಾಮಯ್ಯ,ಅ.ನಾ.ಹರೀಶ್ ಇದ್ದರು.