ಸಾರಾಂಶ
ಮೂಲ್ಕಿಯ 9 ಮಾಗಣೆಗೆ ಸಂಬಂಧಪಟ್ಟ 32 ಗ್ರಾಮಗಳ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು 2 ದಿವಸದ ಒಳಗೆ ತಮ್ಮ ಅಂಕಪಟ್ಟಿ ಜೆರಾಕ್ಸ್ ಪ್ರತಿ ಮತ್ತು ಪ್ರಾಂಶುಪಾಲರಿಂದ ಪಡೆದ ದೃಢೀಕರಣ ಪತ್ರದೊಂದಿಗೆ ಗೌತಮ್ ಜೈನ್ ಮುಲ್ಕಿ ಅರಮನೆ 9008134362 ವಿನೋದ್ ಎಸ್ ಸಾಲ್ಯಾನ್ ಬೆಳ್ಳಾಯರು 9844603268 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕನ್ನಡಪ್ರಭ ವಾರ್ತೆ ಮೂಲ್ಕಿಮೂಲ್ಕಿ ಅರಮನೆ ವೆಲ್ವೇರ್ ಟ್ರಸ್ಟ್ ವತಿಯಿಂದ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ (ಶೇ.90 ಮತ್ತು ಅದಕ್ಕಿಂತ ಮೇಲೆ ತೇರ್ಗಡೆಯಾಗಿದ್ದಲ್ಲಿ) ವಿದ್ಯಾರ್ಥಿಗಳನ್ನು ಸನ್ಮಾನಿಸುವಂ ಕಾರ್ಯಕ್ರಮ ಮೇ 30ರಂದು ಜರಗಲಿದೆ.
ಮೂಲ್ಕಿಯ 9 ಮಾಗಣೆಗೆ ಸಂಬಂಧಪಟ್ಟ 32 ಗ್ರಾಮಗಳ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು 2 ದಿವಸದ ಒಳಗೆ ತಮ್ಮ ಅಂಕಪಟ್ಟಿ ಜೆರಾಕ್ಸ್ ಪ್ರತಿ ಮತ್ತು ಪ್ರಾಂಶುಪಾಲರಿಂದ ಪಡೆದ ದೃಢೀಕರಣ ಪತ್ರದೊಂದಿಗೆ ಗೌತಮ್ ಜೈನ್ ಮುಲ್ಕಿ ಅರಮನೆ 9008134362 ವಿನೋದ್ ಎಸ್ ಸಾಲ್ಯಾನ್ ಬೆಳ್ಳಾಯರು 9844603268 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.ಮೂಲ್ಕಿ ಅರಮನೆ ವೆಲ್ಫೇರ್ ಟ್ರಸ್ಟ್ ವತಿಯಿಂದ ಮೇ 30ರ ಬೆಳಗ್ಗೆ 10 ಗಂಟೆಗೆ ಮೂಲ್ಕಿ ಸೀಮೆಯ ಅರಮನೆಯ ಧರ್ಮ ಚಾವಡಿಯಲ್ಲಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ( 90%ಮತ್ತು ಅದಕ್ಕಿಂತ ಮೇಲೆ ತೇರ್ಗಡೆಯಾಗಿದ್ದಲ್ಲಿ )ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಜರಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಸೀಮೆ ಅರಸ ಎಂ.ದುಗ್ಗಣ್ಣ ಸಾವಂತರು ವಹಿಸಲಿದ್ದು, ಕನ್ನಡತಿ ಅನು, ಕಾಟಿಪಳ್ಳ ಬ್ರಹ್ಮ ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ತೆಯ ಆಡಳಿತಾಧಿಕಾರಿ ಡಾ. ಗಣೇಶ್ ಅಮೀನ್ ಸಂಕಮಾರ್, ವಂದನ ರೈ ಕಾರ್ಕಳ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಡಳಿತ ಟ್ರಸ್ಟಿ ವಿವೇಕ್ ಆಳ್ವ, ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಎಸ್ ಡಿ ಎಂ ಶಾಲೆ ಮಂಗಳೂರಿನ ಸಂಚಾಲಕಿ ಶ್ರುತ ಜಿತೇಶ್ ವಿಶೆಷ ಅಹ್ವಾನಿತರಾಗಿ ಭಾಗವಹಿಸಲಿದ್ದು ಶ್ರೇಯಾ ಸುಳ್ಯ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆಂದು ಪ್ರಕಟಣೆ ತಿಳಿಸಿದೆ.