ಸಾರಾಂಶ
ಹಲಗೂರು: ಚನ್ನಪಟ್ಟಣ ರಸ್ತೆಯ ಲಯನ್ಸ್ ಸಂಸ್ಥೆ ಆವರಣದಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರ ನಡೆಯಿತು.
ಶಿಬಿರಕ್ಕೆ ತಳಗವಾದಿ ಲಯನ್ಸ್ ಕ್ಲಬ್ಬ್ ಪ್ರಾಂತೀಯ ಅಧ್ಯಕ್ಷ ಟಿ.ಎನ್.ಸೋಮೇಗೌಡ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಸಾರ್ವಜನಿಕರ ಸೇವೆಗಾಗಿ ಅನೇಕ ಕಾರ್ಯಕ್ರಮವನ್ನು ಆಯೋಜಿಸಿ ಉತ್ತಮ ಸೇವೆ ಸಲ್ಲಿಸುತ್ತಿರುವುದರ ಬಗ್ಗೆ ಶ್ಲಾಘಿಸಿದರು.ಒಬ್ಬ ಮಹಿಳೆ ಮನೆಯಲ್ಲಿ ಸುಮ್ಮನೆ ಕುಳಿತು ಕೊಳ್ಳುವ ಬದಲು ತಮ್ಮ ಕೈಯಲ್ಲಿ ಒಂದು ವೃತ್ತಿ ಇದ್ದರೆ ಜೀವನ ಸಾಗಿಸಬಹುದು. ಸಂಪಾದನೆ ಮಾಡಲು ಅವಕಾಶ ಸಿಕ್ಕಂತಾಗುತ್ತದೆ. ಶಿಬಿರದ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಮಂಗಳಮ್ಮ ಮಾತನಾಡಿ, ವೃತ್ತಿಯಿಂದ ನಮ್ಮ ಕುಟುಂಬವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದೇನೆ. ಬುದ್ಧಿವಂತಿಕೆಯಿಂದ ಒಂದೇ ತಿಂಗಳಲ್ಲಿ ನೀವು ಕೂಡ ತರಬೇತಿ ಪಡೆಯಬಹುದು. ಕಾರ್ಯಕ್ರಮ ಕೇವಲ ಮೂರು ತಿಂಗಳು ಮಾತ್ರ ಇರುವುದರಿಂದ ಪ್ರತಿಯೊಬ್ಬರೂ ಶ್ರದ್ದೆಯಿಂದ ಕೆಲಸವನ್ನು ಕಲಿತು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರಾಂತೀಯ ಅಧ್ಯಕ್ಷ ಸೋಮೇಗೌಡ, ವಲಯಾಧ್ಯಕ್ಷ ಚಿಕ್ಕೆಗೌಡ, ಹಲಗೂರಿನ ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಹರ್, ಕಾರ್ಯದರ್ಶಿ ಎ.ಟಿ.ಶ್ರೀನಿವಾಸ್, ಪ್ರವೀಣ್, ಡಾ ಶಂಷುದ್ದೀನ್ ಎಲ್ಲಾ ಲಯನ್ ಸದಸ್ಯರು ಹಾಜರಿದ್ದರು.
ಅಹಿಂದ ಸಂರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾಗಿ ಮಲವರಾಜ್ ಆಯ್ಕೆಮದ್ದೂರು:
ಅಹಿಂದ ಸಂರಕ್ಷಣಾ ವೇದಿಕೆ ತಾಲೂಕು ನೂತನ ಅಧ್ಯಕ್ಷರಾಗಿ ಮಾಲಗಾರನಹಳ್ಳಿ ಮಲವರಾಜ್ ಹಾಗೂ ಸಂಚಾಲಕರಾಗಿ ಅಸೀಫ್ ಪಾಷಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ವೇದಿಕೆ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಶೆಟ್ರು ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ನೂತನ ಅಧ್ಯಕ್ಷ ಮಲವರಾಜ್ ಅವರು ವೇದಿಕೆಯನ್ನು ಬೂತ್, ಹೋಬಳಿ, ತಾಲೂಕು ಮಟ್ಟದಲ್ಲಿ ಸಂಘಟನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಹಿಂದ ಜನಾಂದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಬೇಕು ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷ ಮಲವರಾಜ್ ಮಾತನಾಡಿ, ನಿಮ್ಮಗಳ ಆಶಯದಂತೆಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಹಳ್ಳಿ ಹಳ್ಳಿಗೆ ಭೇಟಿ ನೀಡಿ ವೇದಿಕೆಯನ್ನು ಬಲಪಡಿಸುವ ಜತೆಗೆ ಯಾವುದೇ ಚ್ಯುತಿ ಬಾರದಂತೆ ನಡೆದು ಕೊಳ್ಳುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.ಸಭೆಯಲ್ಲಿ ವೇದಿಕೆ ನೂತನ ಸದಸ್ಯರಾಗಿ ಕಾರ್ಕಳ್ಳಿಬಸವರಾಜು, ಜೋಗಯ್ಯ, ರಾಚಯ್ಯ, ರುಕ್ಮಿಣಿಗೌಸು, ಅನಂದಚಾರಿ ರವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷ ಮರಿಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಖಜಾಂಚಿ ರಮೇಶ್, ಸಹ ಕಾರ್ಯದರ್ಶಿ ಡಿ.ಸಿ.ಮಹೇಂದ್ರ, ಸಂಘಟನಾ ಕಾರ್ಯದರ್ಶಿ ಪಿ.ಶಶಿಕುಮಾರ್, ನಿರ್ದೇಶಕರಾದ ಕೆ.ಟಿ.ಶಿವಕುಮಾರ್, ಮಹದೇವಯ್ಯ, ದಾಕ್ಷಾಯಿಣಿ ವೆಂಕಟೇಶ್, ಪ್ರಮೀಳಾ, ನಗರಕೆರೆ ಜಯರಾಮು, ಆನಂದ್, ಚಿಕ್ಕನಂಜಚಾರಿ ಮುಖಂಡರಾದ ನಾಗರಾಜ್, ನಗರ ಕೆರೆ ಬಸವಚಾರಿ, ರಾಚಯ್ಯ, ಗೋವಿಂದರಾಜ್, ಸುರೇಶ್ ಇದ್ದರು.
;Resize=(128,128))
;Resize=(128,128))
;Resize=(128,128))