ಸಾರಾಂಶ
ಮೂಲ್ಕಿ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಶಿಸ್ತು, ದೇಶ ಭಕ್ತಿ, ಪ್ರಾಮಾಣಿಕತೆ ಮತ್ತು ಅವರ ಪ್ರತಿಭೆಗೆ ವೇದಿಕೆಯನ್ನು ಕಲ್ಪಿಸುವ ಕಾರ್ಯ ಸ್ಕೌಟ್ಸ್ ಮೂಲಕ ನಡೆಯುತ್ತಿದೆ ಎಂದು ಮೂಲ್ಕಿ ಲಯನ್ಸ್ ಕ್ಲಬ್ ಆಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ.ಎಂ. ಹೇಳಿದರು.ಭಾರತ್ ಸ್ಕೌಟ್ ಎಂಡ್ ಗೈಡ್ಸ್ ದಕ್ಷಿಣ ಕನ್ನಡದ ಮೂಲ್ಕಿ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ಮೂಲ್ಕಿಯ ಲಯನ್ಸ್ , ಲಿಯೋ ಕ್ಲಬ್ ಮತ್ತು ಮೂಲ್ಕಿ ಕಾರ್ನಾಡಿನ ಸಿಎಸ್‌ಐ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಕಾರ್ನಾಡು ಸಿ ಎಸ್ ಐ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಶಾಲೆ ಮತ್ತು ಕಾಲೇಜುಗಳ ಜಾನಪದ ಹಾಗು ದೇಶ ಭಕ್ತಿ ಗೀತೆ ವಿಭಾಗದ ಗೀತಾಗಾಯನ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಮಾರಂಭದ ಆಧ್ಯಕ್ಷತೆಯನ್ನು ಮೂಲ್ಕಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಹಾಗು ಜಿಲ್ಲಾ ಸಹಾಯಕ ಆಯುಕ್ತ ಎಂ. ಸರ್ವೋತ್ತಮ ಆಂಚನ್ ವಹಿಸಿ ಮಾತನಾಡಿ, ಸರ್ಕಾರದ ಶಿಕ್ಷಣ ಇಲಾಖೆಯ ಸಹಕಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವ್ಯವಸ್ಥೆಯಲ್ಲಿ ಸ್ಕೌಟ್ ವಿದ್ಯಾರ್ಥಿಗಳಿಗೆ ಕೆಲವು ರೀತಿಯ ಅವಕಾಶವನ್ನು ಗುರುತಿಸಲಾಗಿದೆ ಇದನ್ನು ದೊರಕಿಸುವಲ್ಲಿ ಮೂಲ್ಕಿ ಸ್ಥಳೀಯ ಸಂಸ್ಥೆ ಉತ್ತಮ ಸಾಧನೆಯನ್ನು ಮಾಡಿದೆ ಎಂದು ಹೇಳಿದರು.ಸಿಎಸ್‌ಐ ಶಾಲಾ ಸಂಚಾಲಕ ರಂಜನ್ ಜತ್ತನ್ನಾ ಶುಭಾ ಶಂಸನೆಗೈದರು. ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ , ಲಯನ್ಸ್ ಕೋಶಾಧಿಕಾರಿ ಸುಶೀಲ್ ಬಂಗೇರ, ಸಿಎಸ್‌ಐ ಶಾಲಾ ಪ್ರಾಂಶುಪಾಲರಾದ ಶಾಂತಿ ಸುಹಾಸಿನಿ, ಲಯನ್ಸ್ ಜಿಲ್ಲಾ ಪದಾಧಿಕಾರಿಗಳಾದ ಸದಾಶಿವ ಹೊಸದುರ್ಗಾ, ಪ್ರಶಾಂತ್ ಶೆಟ್ಟಿ, ತೀರ್ಪುಗಾರರಾದ ಕಲಾವತಿ ಪ್ರೇಮನಾಥ್ , ಪೂಜಾ ಎಸ್. ಆಚಾರ್ ಕುಳಾಯಿ ಉಪಸ್ಥಿತರಿದ್ದರು.
ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಹಾಗು ಕೋಶಾಧಿಕಾರಿ ಗೀತಾ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಹರೀಶ್ಚಂದ್ರ ಎಂ . ನಿರೂಪಿಸಿದರು.