ಹಾವು ಕಡಿದು ಬಾಲಕಿ ಸಾವು

| Published : Apr 28 2024, 01:20 AM IST

ಸಾರಾಂಶ

ದೊಡ್ಡಬಳ್ಳಾಪುರ: ವಿಷಪೂರಿತ ಹಾವು ಕಡಿದು 7 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ತಾಲೂಕಿನ ಕೋಳೂರು ಗ್ರಾಮದ ತೋಟದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ: ವಿಷಪೂರಿತ ಹಾವು ಕಡಿದು 7 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ತಾಲೂಕಿನ ಕೋಳೂರು ಗ್ರಾಮದ ತೋಟದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾಮಾಂಜಿ ಮತ್ತು ವಿನೋದಮ್ಮ ದಂಪತಿ ಮಗಳಾದ ಅನುಷಾ ಸಾವನ್ನಪ್ಪಿರುವ ಬಾಲಕಿ. ತಾಲೂಕಿನ ತೂಬಗೆರೆ ಹೋಬಳಿಯ ಟಿ.ಹೊಸಹಳ್ಳಿ ನಿವಾಸಿಗಳಾಗಿರುವ ಈ ದಂಪತಿ ಕೋಳೂರು ಗ್ರಾಮದ ತೋಟವೊಂದರಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಾಗಿದ್ದರು ಎನ್ನಲಾಗಿದೆ. ಶುಕ್ರವಾರ ಸಂಜೆ ಸುಮಾರು 6 ಗಂಟೆ‌ ಸಮಯದಲ್ಲಿ ಮಗುವಿಗೆ ಹಾವು ಕಚ್ಚಿದ್ದು, ಅಸ್ವಸ್ಥಗೊಂಡಿದ್ದ ಮಗುವನ್ನು ಪೋಷಕರು ಕೂಡಲೇ ಆಸ್ಪತ್ರೆಗೆ ಕರೆತಂದಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.