ಸಾರಾಂಶ
ತಾತಾ- ಅಜ್ಜಿ ಜೊತೆ ಬಂದಿದ್ದ ಬಾಲಕಿಯು ಪಾಲಾರ್ ರಸ್ತೆಯಲ್ಲಿರುವ ಪಾರ್ಕಿಂಗ್ ನಲ್ಲಿ ಆಟವಾಡುವಾಗ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿಕೊಂಡಿದ್ದ ಡೈಸಿ ಎಂಬ ಮಹಿಳೆ ಏಕಾಏಕಿ ಕಾರು ಚಲಾಯಿಸಿದ್ದರಿಂದ ಬಾಲಕಿಯ ಎದೆಯ ಮೇಲೆ ಕಾರು ಹರಿದು, ಮುಂದೆ ನಿಂತಿದ್ದ ಶಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ.
ಚಾಮರಾಜನಗರ: ಕಾರು ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟದಲ್ಲಿ ಭಾನುವಾರ ನಡೆದಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಉಳ್ಳಾಂಗ ಕೊಟ್ಟಾಯ ಗ್ರಾಮದ ಸುಶ್ಮಿತಾ (7) ಸಾವನ್ನಪ್ಪಿರುವ ಬಾಲಕಿ. ತಾತಾ- ಅಜ್ಜಿ ಜೊತೆ ಬಂದಿದ್ದ ಬಾಲಕಿಯು ಪಾಲಾರ್ ರಸ್ತೆಯಲ್ಲಿರುವ ಪಾರ್ಕಿಂಗ್ ನಲ್ಲಿ ಆಟವಾಡುವಾಗ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿಕೊಂಡಿದ್ದ ಡೈಸಿ ಎಂಬ ಮಹಿಳೆ ಏಕಾಏಕಿ ಕಾರು ಚಲಾಯಿಸಿದ್ದರಿಂದ ಬಾಲಕಿಯ ಎದೆಯ ಮೇಲೆ ಕಾರು ಹರಿದು, ಮುಂದೆ ನಿಂತಿದ್ದ ಶಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕಿ ಸಾವನ್ನಪ್ಪಿದ್ದು, ಕಾರಿನ ಮುಂಭಾಗ ಹಾಗೂ ಹಿಂಭಾಗ ನಜ್ಜು ಗುಜ್ಜಾಗಿದೆ. ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.