ಸಾರಾಂಶ
- ಗ್ರಾಮಕ್ಕೆ ಸರ್ಕಾರಿ ಬಸ್ ಬರುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಗ್ರಾಮಸ್ಥರು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
40 ವರ್ಷಗಳಿಂದ ಸರ್ಕಾರಿ ಬಸ್ಸೇ ಕಾಣದ ಊರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಶನಿವಾರ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿ, ಸಂಚಾರಕ್ಕೆ ಚಾಲನೆ ನೀಡುವ ಮೂಲಕ ವಡೇರಹಳ್ಳಿ, ಕಳವೂರು ಗ್ರಾಮಸ್ಥರ ನಾಲ್ಕು ದಶಕಗಳ ಬೇಡಿಕೆ ಈಡೇರಿಸಿದರು.ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ವಡೇರಹಳ್ಳಿ ಮತ್ತು ಕಳವೂರು ಗ್ರಾಮಗಳಿಗೆ ಇತಿಹಾಸದಲ್ಲಿಯೇ ರಾಜ್ಯ ರಸ್ತೆ ಸಾರಿಗೆ ಬಸ್ ಸೌಲಭ್ಯ ಇರಲಿಲ್ಲ. ಹಲವಾರು ವರ್ಷಗಳಿಂದ ಈ ಗ್ರಾಮಗಳ ಗ್ರಾಮಸ್ಥರಿಂದ ಬಸ್‌ಗಳಿಗಾಗಿ ಬೇಡಿಕೆ ಇತ್ತು. ಹಿಂದಿನ ಅವಧಿಯ ಜನಪ್ರತಿನಿಧಿಗಳು ಗ್ರಾಮಸ್ಥರ ಕೂಗಿಗೆ ಸ್ಪಂದಿಸಿರಲಿಲ್ಲ. ಆದರೆ ಶಾಸಕ ಕೆ.ಎಸ್.ಬಸವಂತಪ್ಪ, ಈ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಿ, ಶನಿವಾರ ಸ್ವತಃ ಬಸ್ ಚಲಾಯಿಸುವ ಮೂಲಕ ಸಂಚಾರಕ್ಕೆ ಚಾಲನೆ ನೀಡಿದರು. ಬಳಿಕ ಗ್ರಾಮಸ್ಥರೊಂದಿಗೆ ಬಸ್‌ನಲ್ಲಿ ಪ್ರಯಾಣ ಬೆಳೆಸಿದರು.
ದಾವಣಗೆರೆ- ಕಳವೂರು- ವಡೇರಹಳ್ಳಿ- ಮಾಯಕೊಂಡ- ಹುಚ್ಚವ್ವನಹಳಿ- ಬಸಾಪುರ- ಗಂಜಿಗಟ್ಟೆ ಗ್ರಾಮಗಳ ಮಾರ್ಗದಲ್ಲಿ ಬಸ್ ಸಂಚರಿಸಿ ಪುನಃ ಇದೇ ಮಾರ್ಗದಲ್ಲಿ ದಾವಣಗೆರೆಗೆ ಬರಲಿದೆ. ಶಾಸಕ ಕೆ.ಎಸ್.ಬಸವಂತಪ್ಪ, ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿ. ಚಾಲನೆ ನೀಡಲು ಆಗಮಿಸಿದ್ದಾಗ ಹರ್ಷಗೊಂಡ ಶಾಲಾ ಮಕ್ಕಳು, ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದರು.ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ, ಪರಿಶಿಷ್ಟ ಜಾತಿ ಮೊರಾರ್ಜಿ ವಸತಿ ಶಾಲೆ ಮತ್ತು ಪರಿಶಿಷ್ಟ ಪಂಗಡ ಶಾಲೆ ಇವೆ. ಇದರಿಂದಾಗಿ ಅಕ್ಕಪಕ್ಕದ ಗ್ರಾಮಗಳ ಮಕ್ಕಳು ಶಾಲೆಗಳಿಗೆ ಹೋಗಿ ಬರಲು ಸರ್ಕಾರಿ ಬಸ್ ಸೌಲಭ್ಯ ಕೊರತೆ ಇತ್ತು. ದ್ವಿಚಕ್ರ ವಾಹನ, ಆಪೆ ಆಟೋಗಳಿಗೇ ಮೊರೆ ಹೋಗುತ್ತಿದ್ದರು. ಕೆಲವು ಮಕ್ಕಳು ಪ್ರತಿನಿತ್ಯ ಹಣವಿಲ್ಲದೇ ಶಾಲೆಗಳಿಗೆ ನಡೆದುಕೊಂದು ಹೋಗಿ ಬರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರಿ ನೌಕರರು, ಕೂಲಿ ಕಾರ್ಮಿಕರು, ಮಹಿಳೆಯರು, ವೃದ್ಧರು ನಗರ ಪ್ರದೇಶಗಳಿಗೆ ಹೋಗಿ ಬರಲು ಸಮಸ್ಯೆ ಆಗಿತ್ತು. ಈಗ ಸರ್ಕಾರಿ ಬಸ್ ಸೌಲಭ್ಯ ಗ್ರಾಮಸ್ಥರಿಗೆ ಅನುಕೂಲವಾಗಿದೆ.
- - -(ಕೋಟ್ಸ್)
ನಮ್ಮ ಊರಿಗೆ ಸರ್ಕಾರಿ ಬಸ್ ಬರುತ್ತಿರಲಿಲ್ಲ. ಎಲ್ಲದಕ್ಕೂ ಆಪೆ ಆಟೋ, ದ್ವಿಚಕ್ರ ವಾಹನಗಳನ್ನೇ ಅವಲಂಬಿಸಿದ್ದೇವೆ. ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದು ಒಳ್ಳೆಯದು. ಆದರೆ ಬಸ್ಸೇ ಬಾರದ ನಮ್ಮ ಊರಿಗೆ ಈಗ ಶಾಸಕ ಕೆ.ಎಸ್.ಬಸವಂತಪ್ಪ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ.- ಗೌರಮ್ಮ, ಕೂಲಿ ಕಾರ್ಮಿಕ ಮಹಿಳೆ. ಸಕಾಲದಲ್ಲಿ ಸರ್ಕಾರಿ ಬಸ್ ಇಲ್ಲದೇ ಶಾಲೆಗಳಿಗೆ ಹೋಗಿ ಬರಲು ಬಹಳ ತೊಂದರೆ ಆಗಿತ್ತು. ಈಗ ಶಾಸಕ ಕೆ.ಎಸ್. ಬಸವಂತಪ್ಪ ಅವರು ಬಸ್ ಸೌಲಭ್ಯ ಕಲ್ಪಿಸಿ, ನಮಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ.
- ಸಂಗೀತಾ, ವಿದ್ಯಾರ್ಥಿನಿ.- - -
-38, 39.ಜೆಪಿಜಿ:ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ವಡೇರಹಳ್ಳಿಯಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಸರ್ಕಾರಿ ಬಸ್ ಚಲಾಯಿಸುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))