ಸಾರಾಂಶ
ಡಾ.ಡಿ.ಎಂ.ಗೌಡ ಅವರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಾ, ಬಡವರ ಪರ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಿರಾ: ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಡಿ.ಎಂ. ಗೌಡ ಅವರ ವರ್ಗಾವಣೆ ರದ್ದುಪಡಿಸುವಂತೆ ಸಾರ್ವಜನಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಮಾತನಾಡಿ, ಡಾ.ಡಿ.ಎಂ.ಗೌಡ ಅವರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಾ, ಬಡವರ ಪರ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ಡಿ. ಎಂ. ಗೌಡ ಅವರ ಉತ್ತಮ ಸೇವೆಯಿಂದಾಗಿ ನಮ್ಮ ತಾಲೂಕು ಸೇರಿ ಅಕ್ಕಪಕ್ಕದ ತಾಲೂಕುಗಳಾದ ಚಿಕ್ಕನಾಯಕನಹಳ್ಳಿ, ಮಧುಗಿರಿ, ಹಿರಿಯೂರು, ಆಂಧ್ರ ಪ್ರದೇಶ ಸೇರಿ ನಾನಾ ಭಾಗಗಳಿಂದ ಹೆರಿಗೆಗಾಗಿ ಶಿರಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬರುತ್ತಾರೆ. ಎಲ್ಲರಿಗೂ ಉತ್ತಮವಾಗಿ ಸ್ಪಂದಿಸುವ ಅವರ ವರ್ಗಾವಣೆಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ವರ್ಗಾವಣೆ ರದ್ದುಪಡೆಯದಿದ್ದರೆ ಉಗ್ರಹೋರಾಟ ನಡೆಸುವುದಾಗಿ ಸರ್ಕಾರವನ್ನು ಎಚ್ಚರಿಸಿದರು. ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ದಿಶಾ ಸಮಿತಿ ಸದಸ್ಯರಾದ ಮದಲೂರು ಮೂರ್ತಿ ಮಾಸ್ಟರ್, ತಾಪಂ ಮಾಜಿ ಸದಸ್ಯರಾದ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಮುಖಂಡರಾದ ಹುಲಿಕುಂಟೆ ರಮೇಶ್, ವಾಜರಹಳ್ಳಿ ವೆಂಕಟೇಶ್, ನರಸಿಂಹೇಗೌಡ, ಪುನೀತ್ ಗೌಡ, ನಾಗರಾಜ್ ಗೌಡ, ಚೇತನ್, ಭಾಸ್ಕರ್, ಆಸ್ಪತ್ರೆ ಸಿಬ್ಬಂದಿ, ತಾಲೂಕಿನ ಮಹಿಳಾ ಕಾರ್ಯಕರ್ತರು, ಮಹಿಳಾ ಸಂಘದವರು ಸೇರಿ ಅನೇಕ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.