ಮನುಷ್ಯನ ಮಾನಸಿಕ ನೆಮ್ಮದಿಗೆ ಧಾನ್ಯ ಅಗತ್ಯ

| Published : Aug 12 2024, 01:04 AM IST

ಸಾರಾಂಶ

ಮನುಷ್ಯನ ತನ್ನ ದೈನಂದಿನ ಬದುಕಿನಲ್ಲಿ ಶಾಂತಿ, ನೆಮ್ಮದಿ ಪಡೆಯಲು ಧಾನ್ಯ ಅಗತ್ಯವಾಗಿದೆ.

ಹೂವಿನಹಡಗಲಿ: ಮನುಷ್ಯನ ತನ್ನ ದೈನಂದಿನ ಬದುಕಿನಲ್ಲಿ ಶಾಂತಿ, ನೆಮ್ಮದಿ ಪಡೆಯಲು ಧಾನ್ಯ ಅಗತ್ಯವಾಗಿದೆ ಎಂದು ಮಲ್ಲನಕೆರೆ ಮಠದ ಅಭಿನವ ಚೆನ್ನ ಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ಶಿವಶಾಂತವೀರ ಸಮುದಾಯ ಭವನದಲ್ಲಿ ಮಲ್ಲಿಗೆ ನಾಡಿನ ಪಿರಮಿಡ್ ಧ್ಯಾನ ಟ್ರಸ್ಟ್ ಹಾಗೂ ಇತರ ಸಂಘಟನೆಗಳಿಂದ, ಆಯೋಜಿಸಿದ್ದ ಮಹಾಕರುಣ ಸಸ್ಯಹಾರಿ ಜನಜಾಗೃತಿ ಜಾಥಾ ಹಾಗೂ ಧ್ಯಾನ ಮತ್ತು ಸತ್ಸಂಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಧ್ಯಾನವು ಮನಸ್ಸಿನ ಸಹಜ ಸ್ಥಿತಿ ಅದನ್ನು ನಾವು ನಮ್ಮಳಗೆ ಹುಡುಕಬೇಕಿದೆ, ಧಾನ್ಯದಿಂದ ನಮ್ಮ ಬದುಕಿನಲ್ಲಿ ಬರುವ ಕಷ್ಟಗಳನ್ನು ನಿವಾತರಣೆ ಮಾಡುವ ಶಕ್ತಿ ನೀಡುತ್ತಿದೆ. ಒಬ್ಬ ವ್ಯಕ್ತಿ ಅಂತರ್ಮುಖಿಯಾಗಬೇಕು. ಪ್ರಾಚೀನ ಕಾಲದಿಂದಲೂ ಧ್ಯಾನಕ್ಕೆ ಮಹತ್ನದ ಸ್ಥಾನವಿದೆ ಎಂದರು.

ಮಾಂಸಹಾರ ಸೇವನೆ ಮನುಷ್ಯನ ಆಲೋಚನೆಗಳನ್ನು ಬದಲಿಸುತ್ತದೆ ಎಂದು, ನಮ್ಮ ಪೂರ್ವಜರು ಹೇಳುತ್ತಾ ಬಂದಿದ್ದಾರೆ. ನಾವು ಮಾಂಸಹಾರವನ್ನು ತ್ಯಜಿಸಿ ಸನ್ಮಾರ್ಗದಲ್ಲಿ ನಡೆಯಬೇಕೆಂದು ಹೇಳಿದರು.

ಗವಿಸಿದ್ದೇಶ್ವರ ಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಧಾನ್ಯ ಭಾಹ್ಯ ಪ್ರಪಂಚದಲ್ಲಿ ನಮ್ಮನ್ನು ಇದ್ದು ಇಲ್ಲದಂತೆ ಮಾಡುವ ಶಕ್ತಿ ಇದೆ. ಚಂಚಲ ಮನಸ್ಥಿತಿಯನ್ನು ಹಿಡಿತದಲ್ಲಿಡಲು ಧ್ಯಾನ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ನೀಡಲು ಧ್ಯಾನ ಅಭ್ಯಾಸ ಮಾಡುವುದು ಉತ್ತಮ ಎಂದರು.

ಬ್ರಹ್ಮರ್ಷಿ ಪ್ರೇಮನಾಥ, ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ಹಾಗೂ ಇತರರು ಮಾತನಾಡಿದರು.

ಶಿಲ್ಪಿ ಜಿ.ಬಿ,ಹಂಸಾನಂದಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಧ್ಯಾನ ತಜ್ಞೆರಾದ ಡಾ.ಸುಮಂಗಳ ಸಾಲಿಮಠ, ಡಾ.ಜೀವಂಧರ ಕೆತ್ತಪ್ಪನವರ, ಉಪನ್ಯಾಸಕ ಮೌನೇಶ್, ಮಲ್ಲಿಗೆ ನಾಡಿನ ಪಿರಮಿಡ್ ಟ್ರಸ್ಟ್ ಅಧ್ಯಕ್ಷ ಪರಮೇಶ್ವರಪ್ಪ ಸೇರಿದಂತೆ ಇತರರಿದ್ದರು.